ರೈಲ್ವೇ ಇಲಾಖೆಯಿಂದ ಪ್ರಯಾಣಿಕರಿಗೆ ಗುಡ್ ನ್ಯೂಸ್ | ಇನ್ಮುಂದೆ ಸಾಮಾನ್ಯ ಟಿಕೆಟ್ ಪಡೆದು ಕೂಡ ಸ್ಲೀಪರ್ ಕೋಚ್‌ನಲ್ಲಿ ಪ್ರಯಾಣಿಸಬಹುದು!
ರೈಲ್ವೇ ಇಲಾಖೆ ಪ್ರಯಾಣಿಕರ ಪ್ರಯಾಣ ಸುಖಕರ ಆಗುವ ನಿಟ್ಟಿನಿಂದ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಲೇ ಬಂದಿದ್ದು, ಅನೇಕ ಸೌಲಭ್ಯಗಳನ್ನು ಕಲ್ಪಿಸಿದೆ. ಅದರಂತೆ ಇದೀಗ ಮತ್ತೊಂದು ಹೊಸ ಸೌಲಭ್ಯ ಒದಗಿಸುವ ಮೂಲಕ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ.
ಹೌದು. ಇನ್ಮುಂದೆ ಸಾಮಾನ್ಯ ಟಿಕೆಟ್ ಪಡೆದು ಕೂಡ ಸ್ಲೀಪರ್ ಕೋಚ್‌ನಲ್ಲಿ ಪ್ರಯಾಣಿಸಬಹುದಾಗಿದೆ. ಅದರಲ್ಲೂ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಇಂತಹದೊಂದು ನಿರ್ಧಾರವನ್ನು ಚಳಿಗಾಲ ಹಾಗೂ ವೃದ್ಧರು ಮತ್ತು ಬಡವರನ್ನು ಗಮನದಲ್ಲಿಟ್ಟುಕೊಂಡು ಕೈಗೊಂಡಿದೆ.
ಪ್ರಯಾಣಿಕರಿಗೆ ಪ್ರಯಾಣದಲ್ಲಿ ಯಾವುದೇ ತೊಂದರೆಯಾಗದಂತೆ ಎಲ್ಲಾ ಸ್ಲೀಪರ್ ಕೋಚ್‌ಗಳನ್ನು ಸಾಮಾನ್ಯ ಬೋಗಿಗಳಾಗಿ ಪರಿವರ್ತಿಸಲು ರೈಲ್ವೆ ನಿರ್ಧರಿಸಿದೆ ಎನ್ನಲಾಗುತ್ತಿದೆ. ಹೀಗಾಗಿ ಶೇ.80 ಕ್ಕಿಂತ ಕಡಿಮೆ ಪ್ರಯಾಣಿಕರೊಂದಿಗೆ ಸ್ಲೀಪರ್ ಕೋಚ್‌ಗಳು ಓಡುತ್ತಿರುವ ಎಲ್ಲಾ ರೈಲುಗಳ ವಿವರಗಳನ್ನು ಕೇಳಲಾಗಿದೆ ಎಂದು ರೈಲ್ವೆ ಮಂಡಳಿಯು ಎಲ್ಲಾ ವಿಭಾಗಗಳ ಆಡಳಿತಕ್ಕೆ ತಿಳಿಸಿದೆ.
ಚಳಿಗಾಲದಲ್ಲಿ, ಅನೇಕ ಪ್ರಯಾಣಿಕರು ಸ್ಲೀಪರ್ ಕೋಚ್ ಬದಲಿಗೆ ಎಸಿ ಕೋಚ್‌ನಲ್ಲಿ ಪ್ರಯಾಣಿಸಲು ಬಯಸುತ್ತಾರೆ. ಇದರಿಂದಾಗಿ ಕಡಿಮೆ ಸಂಖ್ಯೆಯ ಪ್ರಯಾಣಿಕರು ಸ್ಲೀಪರ್ ಕೋಚ್‌ನಲ್ಲಿ ಪ್ರಯಾಣಿಸುತ್ತಾರೆ. ಇದರೊಂದಿಗೆ ಎಸಿ ಕೋಚ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ರೈಲ್ವೇ ನಿರ್ಧರಿಸಿದೆ. ಈ ಮೂಲಕ ಸಾಮಾನ್ಯ ಟಿಕೆಟ್ ತೆಗೆದುಕೊಳ್ಳುವ ಪ್ರಯಾಣಿಕರು ಸಹ ಸ್ಲೀಪರ್ ಕ್ಲಾಸ್‌ನಲ್ಲಿ ಪ್ರಯಾಣಿಸಬಹುದು.