Viral news: ಹೆಂಡತಿ ಜೊತೆ ಕಾಲ ಕಳೆಯಲು ಅರ್ಜಿ ಬರೆದ ಕಾನ್ ಸ್ಟೇಬಲ್; ಮುಂದೇನಾಯ್ತು??
ಕೆಲಸದ ಒತ್ತಡದಲ್ಲಿ ಕೊಂಚ ಬಿಡುವು ಸಿಕ್ಕಿದರೆ ಸಾಕಪ್ಪಾ!!! ಎಂದುಕೊಳ್ಳವವರೆ ಹೆಚ್ಚು. ಇತ್ತೀಚಿನ ದಿನಗಳಲ್ಲಿ ದಿನದ 24 ಗಂಟೆಯಲ್ಲಿ ಹೆಚ್ಚಿನ ಅವಧಿ ಆಫೀಸ್, ಕೆಲಸ ಎಂದು ಮನೆಯ ಕಡೆ ಹೆಚ್ಚು ಗಮನ ಕೊಡಲಾಗದೆ, ಮನೆಯವರೊಂದಿಗೆ ಕಾಲ ಕಳೆಯಲಾಗದೆ ಪರಿತಪಿಸುವಂತಾಗಿದೆ. ಅದರಲ್ಲಿಯೂ ಕೆಲವು ಕಂಪೆನಿಗಳಲ್ಲಿ ರಜೆಯೇ ಸಿಗುವುದಿಲ್ಲ. ಹಗಲಿರುಳು ಎನ್ನುವ ಪರಿವೇ ಇಲ್ಲದೆ ದುಡಿದು ಕೊನೆಗೊಂದು ದಿನ ಕೆಲಸದಿಂದ ಬೇಸತ್ತು ಉದ್ಯೋಗಿಗಳು ಒಂದು ವರ್ಷದ ಮುನ್ನವೇ ಆ ಕೆಲಸಕ್ಕೆ ವಿದಾಯ ಹೇಳುವ ಪ್ರಮೇಯ ಕೂಡ ಹೆಚ್ಚಿದೆ.
ಪೊಲೀಸ್ (Police) ಇಲಾಖೆಯವರು ಕೂಡ ಹಗಲಿರುಳು ಎನ್ನದೆ ಬಹಳ ದಿನಗಳಿಂದ ರಜೆ ಸಿಗದೇ ಒದ್ದಾಡುವ ಪ್ರಮೇಯ ಕೂಡ ಇದ್ದು, ಈ ಕುರಿತು ಪೊಲೀಸ್ ಸಿಬ್ಬಂದಿಯಿಂದ ರಜೆಯ ಕುರಿತು ಬೇಡಿಕೆ ಕೂಡ ಕೇಳಿ ಬರುತ್ತಿದೆ. ಕೆಲವು ಉದ್ಯೋಗಿಗಳು ಹೆಚ್ಚಿನ ದಿನಗಳ ರಜೆಯನ್ನು ಪಡೆಯುವ ನಿಟ್ಟಿನಲ್ಲಿ ಏನೇನೋ ನೆಪಗಳನ್ನು ಹೇಳಿ ರಜೆಗಳನ್ನು ಪಡೆಯಲು ಹರಸಾಹಸ ಪಡುವುದನ್ನು ಕಂಡಿರಬಹುದು. ಇದೀಗ, ಪೊಲೀಸ್ ಪೇದೆಯೊಬ್ಬರು ಬರೆದಿರುವ ಹಾಸ್ಯಾಸ್ಪದ ರಜೆ ಅರ್ಜಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿ ಎಲ್ಲರ ಮೊಗದಲ್ಲಿ ಕೂಡ ನಗು ತರಿಸುತ್ತ ಇದೆ.
ನೇಪಾಳದ ಗಡಿಯಲ್ಲಿರುವ ಉತ್ತರ ಪ್ರದೇಶದ ಮಹಾರಾಜ್ ಗಂಜ್ ಜಿಲ್ಲೆಯವರು ಅರ್ಜಿಯನ್ನು ಬರೆದಿದ್ದು, ಮಹಾರಾಜ್‌ಗಂಜ್ ಜಿಲ್ಲೆಯ ನೌತನ್ವಾ ಪೊಲೀಸ್ ಠಾಣೆಯ ಪಿಆರ್‌ಬಿಯಲ್ಲಿ ನೇಮಕಗೊಂಡ ಕಾನ್‌ಸ್ಟೆಬಲ್‌ನ ಬರೆದಿರುವ ಅರ್ಜಿ ವೈರಲ್ ಆಗಿ ಟ್ರೆಂಡ್ ಸೃಷ್ಟಿ ಮಾಡಿದೆ. ಅಷ್ಟಕ್ಕೂ ಅಂತಹದ್ದು ಏನಿದೆ?? ಅಂತೀರಾ?? ಈ ಇಂಟ್ರೆಸ್ಟಿಂಗ್ ಕಹಾನಿ ನೋಡಿ!! ನಿಮಗೆ ಗೊತ್ತಾಗುತ್ತೆ.
ನೌತನ್ವಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ PRB ಯಲ್ಲಿ ಪೋಸ್ಟ್ ಮಾಡಲಾದ ಕಾನ್‌ಸ್ಟೆಬಲ್ 2016 ರ ಬ್ಯಾಚ್‌ಗೆ ಸೇರಿದವರಾಗಿದ್ದು, ಪ್ರಸ್ತುತ ಅವರು ಇಂಡೋ-ನೇಪಾಳ ಗಡಿಯಲ್ಲಿರುವ PRB ಯಲ್ಲಿ ನಿಯೋಜಿಸಲ್ಪಟ್ಟಿದ್ದಾರೆ. ರಜೆಯ ಅರ್ಜಿಯಲ್ಲಿ ಕಾನ್‌ಸ್ಟೆಬಲ್ ಕಳೆದ ತಿಂಗಳು ಮದುವೆಯಾಗಿರುವುದಾಗಿ ಬರೆದಿದ್ದಾರೆ. ತನ್ನ ಬಳಿಕ ಪತ್ನಿಯನ್ನು ಮನೆಯಲ್ಲಿ ಬಿಟ್ಟು ಕರ್ತವ್ಯಕ್ಕೆ ತೆರಳಿದ್ದಾರೆ. ಈಗ ಮನೆಗೆ ಹೋಗಲು ರಜೆ ಸಿಗುತ್ತಿಲ್ಲ. ಇದು ಪತ್ನಿಯ ಕೋಪಕ್ಕೆ ಕಾರಣವಾಗಿದ್ದು, ಪದೇ ಪದೇ ಕರೆ ಮಾಡಿದರೂ ಪತ್ನಿ ಪತಿಯೊಂದಿಗೆ ಮಾತನಾಡುವುತ್ತಿಲ್ಲ ಎನ್ನಲಾಗಿದೆ.
ಗಂಡನ ಕರೆಯನ್ನು ಸ್ವೀಕರಿಸಿದ ನಂತರ ಅವಳು ಮಾತನಾಡದೆ ತನ್ನ ಅತ್ತೆಗೆ ಎಂದರೆ ಕಾನ್‌ಸ್ಟೆಬಲ್‌ನ ತಾಯಿಗೆ ಮೊಬೈಲ್ ನೀಡುತ್ತಾಳೆ ಎಂದು ಪೊಲೀಸ್ ವರಿಷ್ಠಾಧಿಕಾರಿಗೆ ಕಳುಹಿಸಿರುವ ಪತ್ರದಲ್ಲಿ ತನ್ನ ಅಳಲನ್ನು ಉದ್ಯೋಗಿ ಪತ್ರದ ಮೂಲಕ ಹೇಳಿಕೊಂಡಿದ್ದಾರೆ.
ಹೀಗಾಗಿ, ತನ್ನ ಪತ್ನಿಗೆ “ತನ್ನ ಸೋದರಳಿಯ ಹುಟ್ಟುಹಬ್ಬದಂದು ತಾನು ಖಂಡಿತವಾಗಿಯೂ ಮನೆಗೆ ಬರುತ್ತೇನೆ ಎಂದು ನನ್ನ ಹೆಂಡತಿಗೆ ಭರವಸೆ ನೀಡಿರುವ ಹಿನ್ನೆಲೆ ದಯವಿಟ್ಟು ನನಗೆ ಜನವರಿ 10 ರಿಂದ ಏಳು ದಿನಗಳ ಕ್ಯಾಶುಯಲ್ ರಜೆ ನೀಡಬೇಕೆಂದು ಮನವಿ ಮಾಡಿದ್ದು, ನೀವು ಈ ರಜೆ ನೀಡಿದ್ದಲ್ಲಿ ನಾನು ನಿಮಗೆ ಋಣಿಯಾಗಿರುತ್ತೇನೆ’’ ಎಂದು ತನ್ನ ಪತ್ನಿಯ ಅಸಮಾಧಾನದಿಂದ ಆಗುತ್ತಿರುವ ಕಿರಿಕಿರಿಯನ್ನು ಜೊತೆಗೆ ತನ್ನ ನೋವನ್ನು ಈ ಪತ್ರದಲ್ಲಿ ಕಾನ್ ಸ್ಟೆಬಲ್ ವ್ಯಕ್ತಪಡಿಸಿದ್ದಾರೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಐದು ದಿನಗಳ ಸಾಂದರ್ಭಿಕ ರಜೆ ಮಂಜೂರು ಮಾಡಿದ್ದು, ಹೀಗಾಗಿ ಜನವರಿ 10ರಿಂದ ಕಾನ್‌ಸ್ಟೆಬಲ್ ರಜೆಯ ಸಿಹಿ ಸುದ್ದಿ ಲಭ್ಯವಾಗಿದೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅತೀಶ್ ಕುಮಾರ್ ಸಿಂಗ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ‘ಕರ್ತವ್ಯದಲ್ಲಿರುವ ಪೊಲೀಸರಿಗೆ ಅವಶ್ಯಕತೆ ತಕ್ಕಂತೆ ರಜೆ ನೀಡಲಾಗಿದ್ದು, ಇದೀಗ ರಜೆಯ ಕಾರಣದಿಂದ ಕೆಲಸದಲ್ಲಿ ಯಾವುದೇ ವ್ಯತ್ಯಾಸ ಆಗದ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.