ಇವತ್ತು No Pant Day | ಈ ಊರಿನಲ್ಲಿ ಇವತ್ತು ಹುಡುಗಿಯರು ಸೇರಿ ಎಲ್ಲರೂ ಪ್ಯಾಂಟ್ ಹಾಕದೆ ಒಳಉಡುಪಿನಲ್ಲೇ ರಸ್ತೆಗೆ ಬಂದಿದ್ದರು !!!

ಚಿಕ್ಕ ಪ್ಯಾಂಟ್‌ಗಳಲ್ಲಿ ಅಥವಾ ಒಳಉಡುಪಿನಲ್ಲಿ ತಿರುಗಾಡುವ ನಿಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಲು ಇವತ್ತು ಸುದಿನ. ಕಾರಣ, ಇವತ್ತು ‘ ನೋ ಪ್ಯಾಂಟ್ ಡೇ ‘ ! ಹೌದು, ಪ್ಯಾಂಟಿನ ಹಂಗಿಲ್ಲದೆ, ಜಾರುವ ಚಡ್ಡಿಯ ಗೊಡವೆಯಿಲ್ಲದೆ ಸಾದಾ ಸೀದಾ ನಡೆದು ಓಡಿ ಆಡುವ ಹುಡುಗಾಟಿಕೆಯ ದಿನವೊಂದಿತ್ತಲ್ಲ? ಅದನ್ನು ನೆನೆಪಿಸಲೇನೋ ಎಂಬಂತೆ ಒಂದು ಆಚರಣೆ ಹಲವು ದೇಶಗಳಲ್ಲಿ ಆಚರಣೆಯಲ್ಲಿದೆ. ಕೆಲವು ದೇಶಗಳು ಮೇ ತಿಂಗಳಲ್ಲಿ “ನೋ ಪ್ಯಾಂಟ್ಸ್ ಡೇ” ಅನ್ನು ಆಚರಿಸಿದರೆ, ಲಂಡನ್ ಜನತೆ ಈಗಾಗಲೇ ‘ ನೋ ಪ್ಯಾಂಟ್ ; ನಲ್ಲಿ ಸಬ್‌ವೇ ರೈಡ್ ಡೇ ಮನಸ್ಥಿತಿಯಲ್ಲಿ ನಡೆದಾಡುತ್ತಿದೆ. ಇಂಗ್ಲೆಂಡ್ ಇವತ್ತು, ಜನವರಿ 9 ರಂದು ಬರುವ ಈ ಚಮತ್ಕಾರಿ ದಿನವನ್ನು ಆಚರಿಸಿತು. ರಸ್ತೆಗಳಲ್ಲಿ ಪ್ಯಾಂಟ್ ಹಾಕದ ಸ್ತ್ರೀ ಪುರುಷರು ನಿತಂಬ ಕುಣಿಸುತ್ತ ಬೀದಿಯಲ್ಲಿ ಆಡ್ಡಾಡಿದ್ದಾರೆ. ರೈಲು, ಬಸ್ಸು ಸ್ಕೂಟರ್ ಹತ್ತಿಳಿದಿದ್ದಾರೆ.

ಇವತ್ತು ಬೀದಿಗಳಲ್ಲಿ ಜನರನ್ನು ಕಂಡಾಗ, ಅರೇ, ಇದೇನು ಮನೆಯಿಂದ ಹೊರಟು ಬಂದಾಗ ಪ್ಯಾಂಟು ಹಾಕಲು ಮರೆತು ಬಂದ್ರಾ ಅಂತ ಅನ್ನಿಸಿತ್ತು. ಆದರೆ, ಉದ್ದೇಶಪೂರ್ವಕವಾಗಿಯೇ ಎನ್ನುವುದು ತದನಂತರ ಗೊತ್ತಾಗಿತ್ತು. ಲಂಡನ್ನಿನ ಜನರು ಮನೆಯಿಂದಲೇ ಬರುವಾಗ ಪ್ಯಾಂಟ್ ಕಳಚಿಟ್ಟು ಬಂದಿದ್ದರು. ಅವರು ಸಾರ್ವಜನಿಕ ಸಾರಿಗೆಯಲ್ಲಿ ಸಾಗುವಾಗ, ತಮ್ಮ ‘ತಳ ‘ ವನ್ನು ಅರೆ ಬರೆ ಪ್ರದರ್ಶಿಸುತ್ತ ಬಂದಿದ್ದರು. ಹುಡುಗಿಯರು ಕೂಡಾ ಪ್ಯಾಂಟು ಧರಿಸದೇ, ದಪ್ಪ ತೊಡೆ ಪ್ರದರ್ಶಿಸುತ್ತ ಬೀದಿಗೆ ಬಂದಿದ್ದರು. ಆ ಮೂಲಕ ನೋ ಪ್ಯಾಂಟ್ ಡೇ ಅನ್ನು ಆಚರಿಸಿದ್ದಲ್ಲದೆ, ಪ್ಯಾಂಟ್ ಹಾಕದೆ ಚಡ್ಡಿಯಲ್ಲಿ ಬಂದ ಸ್ತ್ರೀ ಪುರುಷರು ತಮ್ಮ ಬಾಲ್ಯದ ಜೀವಿಸಿದರು. ಬೀದಿಯ ಉದ್ದಕ್ಕೂ, ಸ್ವಚ್ಛಂದವಾಗಿ ತಿರುಗಾಡಿದರು.

2002 ರಿಂದ ಈ ಆಚರಣೆ ಜಾರಿಯಲ್ಲಿದೆ. ಲಂಡನ್ನಿನ 60 ಕ್ಕೂ ಹೆಚ್ಚು ನಗರಗಳಲ್ಲಿ ವಿಶ್ವದ ವಿವಿಧ ಭಾಗಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ ಎಂದು ವರದಿಗಳು ತಿಳಿಸಿವೆ. ಇದರ ಪ್ರಾರಂಭವು ‘ ಇಂಪ್ರೂವ್ ಎವೆರಿವೇರ್ ‘ ಹೆಸರಿನ ಹಾಸ್ಯ ಪ್ರದರ್ಶನ ಕಲಾ ತಂಡದಿಂದ ಚಾರ್ಲಿ ಟಾಡ್ ಅವರಿಂದ ಶುರುವಾಗಿದೆ, ಮತ್ತು ಅದರ ಗುರಿ ಸರಳವಾಗಿದೆ. ಅಂದರೆ, ಈ ದಿನದ ಉದ್ದೇಶ ಪ್ರೇಕ್ಷಕರನ್ನು ಗೊಂದಲಗೊಳಿಸುವುದು ಮತ್ತು ವಿನೋದಪಡಿಸುವುದು. ಕೆಲವರು ಇದನ್ನು “ಟ್ರೌಸರ್ ಟ್ಯೂಬ್ ರೈಡ್ ಇಲ್ಲದ ದಿನ” ಎಂದೂ ಕರೆಯುತ್ತಾರೆ.

ಕುತೂಹಲಕಾರಿಯ ವಿಷಯ ಏನೆಂದರೆ, ಈ ದಿನ ಪ್ಯಾಂಟ್ ಹಾಕದೆ ಬರುವುದು ಮಾತ್ರವಲ್ಲ, ಹಾಗೆ ಬಂದಾಗ ಒಂದು ನಿಯಮವನ್ನು ಪಾಲಿಸಬೇಕು. ಅದರ ಪ್ರಕಾರ ಈ ದಿನ ಕೂಡಾ ಯಾವುದೇ ದಿನದಂತೆ ಸಾಮಾನ್ಯವಾಗಿರಬೇಕು, ಅಂದರೆ ಪ್ಯಾಂಟ್ ಹಾಕಿ ಬಂದಿಲ್ಲ ಅನ್ನುವ ಗಾಬರಿ, ನಾಚಿಕೆ ಏನೂ ಇಲ್ಲದೆ ಸಾಮಾನ್ಯವಾಗಿ ಎಂದಿನಂತೆ ಬಂದಿದ್ದೇವೆ ಎನ್ನುವ ಥರ ಇವತ್ತೂ ಇರಬೇಕು. ಇದು ಈ ದಿನದ ರೂಲು. ಈ ಚಮತ್ಕಾರಿ ದಿನದಲ್ಲಿ ಭಾಗವಹಿಸುವವರು, ತಮ್ಮ ಒಳ ಉಡುಪುಗಳನ್ನು ಧರಿಸಿ ಸಾರ್ವಜನಿಕವಾಗಿ ಹೆಜ್ಜೆ ಬರಬೇಕು ಮತ್ತು ತಮ್ಮ ಪ್ಯಾಂಟ್ ಅನ್ನು ಮರೆತು ಬಿಟ್ಟು ಬಂದ ಭಾವನೆಯನ್ನು ತೋರ್ಪಡಿಸಿಕೊಳ್ಳದೆ ಸಾಮಾನ್ಯವಾಗಿರಬೇಕು.

12ನೇ ವಾರ್ಷಿಕ ನೋ ಟ್ರೌಸರ್ ಟ್ಯೂಬ್ ರೈಡ್‌ಗಾಗಿ ಲಂಡನ್‌ನಲ್ಲಿ ಪ್ರಯಾಣಿಕರು ತಮ್ಮ ಪ್ಯಾಂಟ್‌ಗಳನ್ನು ಕೆಳಗಿಳಿಸಿ ಭಾನುವಾರ ಭೂಗತಕ್ಕೆ ಹಾರಿದರು.

ಈ ಘಟನೆಯು ದಿ ನೋ ಪ್ಯಾಂಟ್ ಸಬ್‌ವೇ ರೈಡ್‌ನ ಭಾಗವಾಗಿತ್ತು, 2002 ರಲ್ಲಿ ನ್ಯೂಯಾರ್ಕ್‌ನಲ್ಲಿ ಇಂಪ್ರೂವ್ ಎವೆರಿವೇರ್ ಪ್ರಾರಂಭಿಸಿದ ವಾರ್ಷಿಕ ಜಾಗತಿಕ ಕಾರ್ಯಕ್ರಮವಾಗಿದೆ. ಭಾನುವಾರ ನಡೆದ ಈವೆಂಟ್‌ನಲ್ಲಿ ವಿಶ್ವದ ಇತರ ಹಲವಾರು ನಗರಗಳು ಸಹ ಭಾಗವಹಿಸಿದ್ದವು. ಈ ಈವೆಂಟ್‌ನ ಕಲ್ಪನೆಯು ನಿಮ್ಮ ಕೆಳಭಾಗದಲ್ಲಿ ಕೇವಲ ಒಳ ಉಡುಪುಗಳೊಂದಿಗೆ ಬೀದಿಯಲ್ಲಿ, ಬಸ್ಸಿನಲ್ಲಿ ರೈಲಿನಲ್ಲಿ ಸವಾರಿ ಮಾಡುವುದು. ಈವೆಂಟ್‌ಗೆ ಯಾವುದೇ ಕಾರಣವಿಲ್ಲ, ಆದರೆ ಸ್ವಲ್ಪ ಮೋಜು, ಇನ್ನೊಂದು ಮಸ್ತಿ ಇದರ ಉದ್ದೇಶ.

ವರದಿಯೊಂದರ ಪ್ರಕಾರ, ಕಾರ್ಯಕ್ರಮದಲ್ಲಿ ಭಾಗವಹಿಸುವವರು ಮನೆಯಲ್ಲಿ ಪ್ಯಾಂಟ್ ಮರೆತವರಂತೆ ಸಹಜವಾಗಿ ನಡೆಯಬೇಕು. ಇದು ಪ್ರದರ್ಶನ ಅಥವಾ ಯಾವುದೇ ಪ್ರಮುಖ ದೃಶ್ಯವಲ್ಲ” ಎಂದು ಅಧಿಕಾರಿಯನ್ನು ಉಲ್ಲೇಖಿಸಲಾಗಿದೆ. ತಾತ್ತ್ವಿಕವಾಗಿ, ಜನರು ಪ್ಯಾಂಟ್ ಅಥವಾ ಸ್ಕರ್ಟ್ ಧರಿಸಿದಂತೆ ತಮ್ಮ ಸಾಮಾನ್ಯ ವ್ಯವಹಾರದಲ್ಲಿ ಕುಳಿತುಕೊಳ್ಳಬೇಕೆಂದು ನಾವು ಬಯಸುತ್ತೇವೆ, ”ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Leave A Reply

Your email address will not be published.