ಹೆತ್ತವರು ಬೇಡವೆಂದರೂ ನಾಯಿಯನ್ನೇ ಮದುವೆಯಾದ ಯುವತಿ! ಇದರಿಂದ ಮುಂದೇನಾಯ್ತು ಗೊತ್ತಾ?
ಮದುವೆ ಎಂದರೆ ಮನುಷ್ಯನ ಜೀವನದಲ್ಲಿ ಒಂದು ಪ್ರಮುಖ ಘಟ್ಟ. ಮದುವೆ ಎಂದರೆ ಪ್ರತಿಯೊಬ್ಬರಿಗೂ ಸಡಗರ ಸಂಭ್ರಮ. ಹೆತ್ತವರಿಗಂತೂ ತಮ್ಮ ಮಕ್ಕಳ ಮದುವೆಯನ್ನು ಎಂತಹ ಸಂದರ್ಭದಲ್ಲೂ ಅದ್ದೂರಿಯಾಗಿ ಮಾಡಬೇಕೆಂಬ ಆಸೆ. ಆದರೆ ಇಲ್ಲೊಬ್ಬಳು ಯುವತಿ ನಾಯಿಯೊಂದಿಗೆ ಮದುವೆ ಮಾಡಿಕೊಳ್ಳುವ ಮೂಲಕ ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿದ್ದಾಳೆ
ಮನುಷ್ಯನಾದವನು ಒಮ್ಮೆಯಾದರೂ ಅದ್ದೂರಿಯಾಗಿ ಮದುವೆಯಾಗಬೇಕು ಎಂಬ ಕನಸನ್ನು ಕಾಣುತ್ತಾನೆ. ಅಷ್ಟೇ ಅಲ್ಲದೆ ತನ್ನ ಬಾಳ ಸಂಗಾತಿಯೊಂದಿಗೆ ಪ್ರೀತಿಯಿಂದ ಜೀವನ ನಡೆಸುವ ಇಚ್ಛೆ ಅವರದ್ದಾಗಿರುತ್ತದೆ. ಆದರೆ ಈ ಯುವತಿಯ ಹೀಗೆ ಮಾಡಿದ್ದಾದರೂ ಏಕೆ ? ಮದುವೆಯಾದ ಅನಂತರ ಏನಾಯ್ತು ಗೊತ್ತಾ?
ನಮ್ಮ ಭಾರತದ ಕೆಲವು ಪ್ರದೇಶಗಳಲ್ಲಿ ನಮ್ಮ ಹಿಂದಿನ ಜನ್ಮದ ಪಾಪಗಳನ್ನು ನಿವಾರಿಸಿಕೊಳ್ಳುವ ಸಲುವಾಗಿ ಮರಗಳಿಗೆ, ಜೀವ ಇರದಂತಹ ವಸ್ತುಗಳಿಗೆ ಅಥವಾ ಪ್ರಾಣಿಗಳಿಗೆ ಸಾಂಪ್ರದಾಯಕವಾಗಿ ತಾಳಿ ಕಟ್ಟಿ ಮದುವೆಯಾಗುವ ಮೂಲಕ ತಮ್ಮ ಪೂರ್ವ ಜನ್ಮದ ಪಾಪವನ್ನು ಕಳೆದುಕೊಳ್ಳುತ್ತಾರೆ. ಹೀಗಿರುವಾಗ ಜಾರ್ಖಂಡ್ ನಲ್ಲಿ 18 ವರ್ಷದ ಯುವತಿ ಬೀದಿ ನಾಯಿಯನ್ನು ಮದುವೆಯಾಗಿ ತನ್ನ ಹಿಂದಿನ ಜನ್ಮದ ಪಾಪವನ್ನು ನಿವಾರಿಸಿಕೊಂಡಿದ್ದಾಳೆ.
ಹುಡುಗಿಗೆ ಮಂಗಳಿಕ ಎಂಬ ಸಮಸ್ಯೆ ಇದ್ದು, ಸಂಪೂರ್ಣ ಕುಟುಂಬ ಈ ಒಂದು ಸಮಸ್ಯೆಗೆ ತುತ್ತಾಗಿತ್ತು. ಈ ಕಾರಣದಿಂದ ಮೊದಲು ನಾಯಿಯನ್ನು ಮದುವೆಯಾಗಬೇಕು ಅನಂತರಾ ಮನುಷ್ಯರನ್ನು ಮದುವೆಯಾದರೆ ಈ ಒಂದು ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಜೋತಿಷ್ಯಿಗಳು ತಿಳಿಸಿರುತ್ತಾರೆ. ಅದರಂತೆ ಹುಡುಗಿ ಮೊದಲಿಗೆ ನಾಯಿಯನ್ನು ಮದುವೆಯಾಗಿದ್ದಾಳೆ.
ಶೇರು ಎನ್ನುವ ಹೆಸರಿನ ನಾಯಿಯನ್ನು ಮಂಟಪಕ್ಕೆ ಕಾರಿನಲ್ಲಿ ಕರೆದುಕೊಂಡು ಬಂದು ಅವರ ಸಾಂಪ್ರದಾಯದ ವರನಂತೆ ಅದಕ್ಕೂ ಬಿಂದಿ ಹಾಗೂ ಶಾಲನ್ನು ಹೊಚ್ಚಿ ರೆಡಿ ಮಾಡಿ ವರನಂತೆ ಸಿಂಗಾರಗೊಳಿಸಿ ಕರೆದುಕೊಂಡು ಹುಡುಗಿಯ ಪಕ್ಕ ಕೂರಿಸುತ್ತಾರೆ. ಇಬ್ಬರಿಗೂ ಗಟ್ಟಿಮೇಳದ ವಾದ್ಯದೊಡನೆ ಮದುವೆ ಮಾಡಿಸಿ ಅತಿಥಿಗಳೆಲ್ಲರೂ ನವ ಜೋಡಿಗೆ ಹಾರೈಸಿದರು.
ಒಟ್ಟಿನಲ್ಲಿ ತನ್ನ ಪಾಪ ಕರ್ಮಗಳೆಲ್ಲ ಮುಗಿದ ಬಳಿಕ ಯುವತಿಯು ಹುಡುಗನೊಂದಿಗೆ ಮತ್ತೆ ಮದುವೆಯಾಗುವುದಾಗಿ ತಿಳಿಸಿದ್ದಾಳೆ. ಆಧುನೀಕರಣ ಗೊಂಡ ಭಾರತದಲ್ಲಿ ಇಂದಿಗೂ ಕೂಡ ಇಂತಹ ಮೌಡ್ಯ ಆಚರಣೆಗಳಿರುವುದು ಕಳವಳಕಾರಿ ವಿಷಯ.