2 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೌಲ್ಯದ ವಸ್ತು ಖರೀದಿಸುವಾಗ ನಿಮ್ಮಲ್ಲಿರಬೇಕು ಈ ದಾಖಲೆಗಳು | ಆದಾಯ ತೆರಿಗೆ ಇಲಾಖೆ ನಿಯಮಗಳು ಇಲ್ಲಿದೆ ನೋಡಿ..

ವ್ಯವಹಾರ ಎಂಬುದು ಮನುಷ್ಯ ನಿರ್ಧಾರಿಸುವುದಾದರೂ, ಎಷ್ಟು ಹಣವನ್ನು ಹೂಡಿಕೆ ಮಾಡಬಹುದು ಎಂಬ ನಿರ್ಧಾರವನ್ನು ಆದಾಯ ತೆರಿಗೆ ಇಲಾಖೆ ನಿರ್ಧರಿಸುತ್ತದೆ. ಹೌದು. ಇಲಾಖೆ ಪ್ರಕಾರ ಒಬ್ಬ ವ್ಯಕ್ತಿ ಎಷ್ಟು ಹಣವನ್ನು ತನ್ನ ಬಳಿ ಇಟ್ಟುಕೊಳ್ಳಬಹುದು ಎಂಬುದನ್ನು ನಿರ್ಧರಿಸಲಾಗಿದೆ.

ಹೌದು. 2 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೌಲ್ಯದ ವಸ್ತು ಖರೀದಿಸುವಾಗ ಕೆಲವು ದಾಖಲೆಗಳನ್ನು ಸಲ್ಲಿಸಬೇಕು. ಆದಾಯ ತೆರಿಗೆ ಇಲಾಖೆಯು ಈ ಬಗ್ಗೆ ಯಾವ ನಿಯಮವನ್ನು ಹೊಂದಿದೆ ಎಂಬುದನ್ನು ತಿಳಿಯೋಣ. ನಿಮ್ಮಲ್ಲಿ ಅಷ್ಟು ಪ್ರಮಾಣದಲ್ಲಿ ಹಣವಿದ್ದಾಗ ನಿಮಗೆ ಅಷ್ಟು ಹಣ ಎಲ್ಲಿಂದ ಲಭ್ಯವಾಗಿದೆ ಎಂದು ನೀವು ತಿಳಿಸಬೇಕಾಗುತ್ತದೆ. ಅದಕ್ಕಾಗಿ ದಾಖಲೆಯನ್ನು ಕೂಡಾ ಸಲ್ಲಿಸಬೇಕಾಗುತ್ತದೆ. ಹಾಗೆಯೇ ನೀವು ಸರಿಯಾದ ರೀತಿಯಲ್ಲಿ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಿದ್ದೀರಾ ಎಂದು ಕೂಡಾ ಖಚಿತಪಡಿಸಿಕೊಳ್ಳಬೇಕಾಗುತ್ತದೆ.

ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟಾಕ್ಸಸ್ ಪ್ರಕಾರ, ನಿಮ್ಮಲ್ಲಿ ಅಷ್ಟು ಪ್ರಮಾಣದಲ್ಲಿ ಹಣ ಎಲ್ಲಿಂದ ಬಂದಿದೆ ಎಂದು ಸರಿಯಾದ ದಾಖಲೆಯನ್ನು ನೀವು ಸಲ್ಲಿಸಲು ಸಾಧ್ಯವಾಗದಿದ್ದರೆ, ಆದಾಯ ತೆರಿಗೆ ಇಲಾಖೆಯು ನಿಮಗೆ ದಂಡವನ್ನು ವಿಧಿಸಬಹುದು. ನಿಮ್ಮಲ್ಲಿರುವ ಮೊತ್ತದ ಸುಮಾರು ಶೇಕಡ 137ರಷ್ಟು ದಂಡವನ್ನು ವಿಧಿಸಬಹುದು. ಹಣವನ್ನು ನೀವು ಹೊಂದಿರುವಾಗ ಕೆಲವೊಂದು ಅಂಶಗಳನ್ನು ತಿಳಿದಿರುವುದು ಮುಖ್ಯವಾಗುತ್ತದೆ.

ವ್ಯಕ್ತಿಯು 1,20,000 ರೂಪಾಯಿಗಿಂತ ಅಧಿಕ ಮೊತ್ತವನ್ನು ಡೆಪಾಸಿಟ್ ಮಾಡಿದರೆ ಪ್ಯಾನ್ ಮತ್ತು ಆಧಾರ್ ಕಾರ್ಡ್ ಅನ್ನು ಸಲ್ಲಿಸಬೇಕಾಗುತ್ತದೆ. ಹಾಗೆಯೇ ನೀವು 2 ಲಕ್ಷ ರೂಪಾಯಿಗಿಂತ ಅಧಿಕ ಮೊತ್ತದ ನಗದು ವಹಿವಾಟು ನಡೆಸಲು ಸಾಧ್ಯವಿಲ್ಲ. ಅದಕ್ಕಾಗಿ ನೀವು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. 2 ಲಕ್ಷ ರೂಪಾಯಿಗಿಂತ ಅಧಿಕ ಮೊತ್ತವ ವಹಿವಾಟು ನಗದು ರೂಪದಲ್ಲಿ ನಡೆಸುವುದಾದರೆ ನೀವು ಪ್ಯಾನ್ ಅಥವಾ ಆಧಾರ್ ಕಾರ್ಡ್ ಅನ್ನು ಸಲ್ಲಿಸಬೇಕಾಗುತ್ತದೆ.

ಒಬ್ಬ ವ್ಯಕ್ತಿಯು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ಬಳಸಿ ಒಂದು ಲಕ್ಷ ರೂಪಾಯಿಗಿಂತ ಅಧಿಕ ವಹಿವಾಟನ್ನು ನಡೆಸಿದರೆ, ಅದು ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ಬರುತ್ತದೆ. ನಿಯಮದ ಪ್ರಕಾರ ನೀವು ನಿಮ್ಮ ಸ್ನೇಹಿತರು ಅಥವಾ ಸಂಬಂಧಿಗಳಿಂದ ಎರಡು ಲಕ್ಷ ರೂಪಾಯಿಗಿಂತ ಅಧಿಕ ಮೊತ್ತವನ್ನು ನಗದು ರೂಪದಲ್ಲಿ ಪಡೆಯುವಂತಿಲ್ಲ.

ಹಾಗೆಯೇ ಬ್ಯಾಂಕ್‌ನಿಂದ ಎರಡು ಕೋಟಿ ರೂಪಾಯಿಗಿಂತ ಅಧಿಕ ಮೊತ್ತವನ್ನು ವಿತ್‌ಡ್ರಾ ಮಾಡಿದರೆ ಟಿಡಿಎಸ್ ಪಾವತಿಸಬೇಕಾಗುತ್ತದೆ. ನೀವು 50 ಸಾವಿರ ರೂಪಾಯಿಗಿಂತ ಅಧಿಕ ಮೊತ್ತವನ್ನು ವಿತ್‌ಡ್ರಾ ಅಥವಾ ಡೆಪಾಸಿಟ್ ಮಾಡಬೇಕಾದರೆ ಪ್ಯಾನ್ ಕಾರ್ಡ್ ಅನ್ನು ಬ್ಯಾಂಕ್‌ಗೆ ಸಲ್ಲಿಸುವುದು ಅತೀ ಮುಖ್ಯವಾಗಿದೆ.

Leave A Reply

Your email address will not be published.