ತಪ್ಪಿಯೂ ಬೆಡ್ ರೂಂ ನಲ್ಲಿ ಅಲೆಕ್ಸಾವನ್ನು ಇಡಬೇಡಿ | ಯಾಕೆ ಗೊತ್ತಾ?
ಟೆಕ್ನಾಲಜಿ ಅಭಿವೃದ್ಧಿಯಾದಷ್ಟು ಒಳಿತು ಕೆಡುಕುಗಳು ಹೆಚ್ಚಾಗುತ್ತದೆ.
ಟೆಕ್ ಕಂಪನಿಗಳು ದಿನೇ ದಿನೇ ನೂತನ ಸಾಧನಗಳನ್ನು ಜಗತ್ತಿಗೆ ಪರಿಚಯಿಸುತ್ತಲೇ ಇದೆ. ಅದರಲ್ಲಿ ಸದ್ಯ ಮೊದಲಿರುವ ಸಾಧಗಳೆಂದರೆ ಅಮೆಜಾನ್ ಇಕೋ ಸಾಧನಗಳು. ಅದರಲ್ಲಿ ಅಮೆಜಾನ್‌ನ ಅಲೆಕ್ಸಾ ಯಾವುದೇ ಮ್ಯೂಸಿಕ್, ಸಿನೆಮಾಗಳನ್ನು ವೀಕ್ಷಿಸಲು ಸಹಕಾರಿಯಾಗಿದೆ.
ಅಲೆಕ್ಸಾ ಧ್ವನಿ ನಿಯಂತ್ರಿಸುವ ಮತ್ತು ಆಲಿಸುವ ಸಾಧನವಾಗಿದೆ. ಇದನ್ನು ಬಳಸಬೇಕಾದರೆ ನೆನಪಿನಲ್ಲಿ ಇರಬೇಕಾದ ವಿಷಯ ಏನಂದ್ರೆ, ಅಲೆಕ್ಸಾ ನಿಮ್ಮ ಮಾತುಗಳನ್ನು ಆಗಾಗ ರೆಕಾರ್ಡ್ ಮಾಡುತ್ತಿರಬಹುದು ಎಂಬುದು. ಹಾಗಾಗಿ ಅದನ್ನು ಎಲ್ಲಿ ಇಡಬೇಕು ಎಂಬುದನ್ನು ಮೊದಲೇ ನಿರ್ಧರಿಸಬೇಕು.
ಹಾಗಿದ್ದಾಗ ಇದನ್ನು ಮಲಗುವ ಕೋಣೆಗಳಲ್ಲಿ ಇಡುವುದು ಸುರಕ್ಷಿತವಲ್ಲ. ಅಲೆಕ್ಸಾ ನಂತಹ ಸಾಧನಗಳನ್ನು ಮಲಗುವ ಕೋಣೆ ಅಥವಾ ಬಾತ್ ರೂಂಗಳಲ್ಲಿ ಇಡಬೇಡಿ. ಯಾಕಂದ್ರೆ ಈ ಅಲೆಕ್ಸಾ ಗೌಪ್ಯವಾಗಿ ರೆಕಾರ್ಡಿಂಗ್ ಮಾಡಿ, ಅಮೆಜಾನ್ ಸಿಬ್ಬಂದಿಗೆ ಆಲಿಸುವ ಅವಕಾಶ ಕಲ್ಪಿಸುತ್ತದೆ. ಗೌಪ್ಯವಾದ ಮಾಹಿತಿಗಳನ್ನು ಹೆಚ್ಚಾಗಿ ಮಲಗುವ ಕೋಣೆಗಳಲ್ಲಿ ಮಾತನಾಡುವುದರಿಂದ ಅಲೆಕ್ಸಾವನ್ನು ಅಲ್ಲಿರಿಸುವುದು ಸುರಕ್ಷಿತವಲ್ಲ ಎಂದು ತಂತ್ರಜ್ಞರು ಸಲಹೆ ನೀಡಿದ್ದಾರೆ.
ಈ ಆಯ್ಕೆಯನ್ನು ನಮ್ಮ ಸಿಬ್ಬಂದಿಗಳಲ್ಲಿ ಅಲ್ಪ ಜನರಿಗೆ ಮಾತ್ರ ನೀಡಲಾಗಿದೆ. ಆದರೆ ಗ್ರಾಹಕರನ್ನು ಗುರುತಿಸುವಂತಹ ಮಾಹಿತಿಯನ್ನು ಸಂಯೋಜಿಸುವುದಿಲ್ಲ ಎಂದು ಅಮೆಜಾನ್ ತಿಳಿಸಿದೆ. ಈ ಅಲೆಕ್ಸಾ ರೆಕಾರ್ಡಿಂಗ್ ಆಯ್ಕೆಯನ್ನು ನೀವು ಮೊಬೈಲ್‌ನಲ್ಲಿ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಸೆಟ್ಟಿಂಗ್‌ನಲ್ಲಿ ಆಫ್ ಮಾಡಬಹುದಾಗಿದೆ. ಹೇಗೆಂದರೆ,
- ನಿಮ್ಮ ಮೊಬೈಲ್ ನಲ್ಲಿ ನೀವು ‘ಅಲೆಕ್ಸಾ’ ಅಪ್ಲಿಕೇಶನ್ ಅನ್ನು ಓಪನ್ ಮಾಡಬೇಕು.
- ಅಪ್ಲಿಕೇಶನ್‌ನಲ್ಲಿನ ‘ಸೆಟ್ಟಿಂಗ್’ ಗೆ ಹೋಗಿ, ಪ್ರೈವಸಿಯನ್ನು ಆಯ್ಕೆಯನ್ನು ಸೆಲೆಕ್ಟ್ ಮಾಡಿ.
- ಬಳಿಕ ನಿಮ್ಮ ಅಲೆಕ್ಸಾ ಡೇಟಾವನ್ನು ನಿರ್ವಹಿಸಿ ಎಂಬುದರ ಮೇಲೆ ಟ್ಯಾಪ್ ಮಾಡಿ.
- ಅದರಲ್ಲಿ ‘ರೆಕಾರ್ಡಿಂಗ್‌ಗಳನ್ನು ಎಷ್ಟು ಸಮಯ ಉಳಿಸಬೇಕು’ ಅಥವಾ ‘ರೆಕಾರ್ಡಿಂಗ್‌ಗಳನ್ನು ಉಳಿಸಬೇಡಿ’ ಎಂಬುದನ್ನು ಆಯ್ಕೆಮಾಡಿ.
- ಇದಾದ ಬಳಿಕ ‘ದೃಢೀಕರಿಸು’ ಎಂಬುದನ್ನು ಸೆಲೆಕ್ಟ್ ಮಾಡಿ. ಹಾಗೂ ‘ಅಲೆಕ್ಷಾವನ್ನು ಸುಧಾರಿಸಲು’ ಕೆಳಗೆ ಸ್ಕ್ರಾಲ್ ಮಾಡಬಹುದು.