Traffic Rules : ಇನ್ನು ಮುಂದೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಬೀಳುತ್ತೆ ಭಾರೀ ದಂಡ!!
ಹೊಸ ವರ್ಷ 2023 ರ ಆರಂಭದೊಂದಿಗೆ, ದೇಶಾದ್ಯಂತ ಅನೇಕ ಹೊಸ ಸಂಚಾರ ನಿಯಮಗಳು ಜಾರಿಗೆ ಬಂದಿವೆ. ರಸ್ತೆ ಅಪಘಾತಗಳನ್ನುಕಡಿಮೆ ಮಾಡಲು ಈ ಸಂಚಾರ ನಿಯಮಗಳನ್ನು ವಿನ್ಯಾಸಗೊಳಿಸಲಾಗಿದೆ. ಸರ್ಕಾರದ ನಿಯಮಗಳ ಪಾಲನೆ ಆಗದೆ ಇರುವುದರಿಂದ ಮತ್ತು ಸಂಚಾರ ನಿಗಮದ ಅಸ್ತ ವ್ಯಸ್ತತೆಯಿಂದ ವಾಹನ ಸವಾರರಿಗೆ ಈ ಹೊಸ ನಿಯಮ ರೂಪಿಸಲಾಗಿದೆ . ಅದಲ್ಲದೆ ಟ್ರಾಫಿಕ್ ಕಿರಿ ಕಿರಿ, ಟೋಲ್ ಬೂತ್ನಿಂದ ಹಾದುಹೋಗಲು ಸಮಯ ವ್ಯರ್ಥ ಮುಂತಾದ ಸಮಸ್ಯೆಗಳು ಪ್ರತಿಯೊಬ್ಬರಿಗೆ ಸವಾಲಾಗಿದೆ. ಆದ್ದರಿಂದ ಸರ್ಕಾರಗಳು ಕೂಡ ಇವುಗಳ ಹೊರೆಯನ್ನು ಹೇಗಾದರೂ ತಪ್ಪಿಸಬೇಕೆಂಬ ನಿಟ್ಟಿನಲ್ಲಿ ಹೊಸ ಹೊಸ ಉಪಕ್ರಮಗಳನ್ನು ಜಾರಿಗೆ ತರುವುದರ ಜೊತೆಗೆ ಇದೀಗ ಹೊಸ ನಿಯಮ ಜಾರಿಗೆ ತರಲಾಗಿದೆ.
ಅನೇಕ ಜನರು ಉದ್ದೇಶಪೂರ್ವಕವಾಗಿ ಕೆಲವು ಸಂಚಾರ ನಿಯಮಗಳನ್ನು ನಿರ್ಲಕ್ಷಿಸುತ್ತಾರೆ. ಇನ್ನುಮುಂದೆ ನಿಯಮಗಳನ್ನು ನಿರ್ಲಕ್ಷಿಸುವುದರಿಂದ ನಿಮಗೆ ತುಂಬಾ ನಷ್ಟವಾಗಬಹುದು. ನೀವು ₹25,000 ಸಾವಿರ ದಂಡವನ್ನು ಪಾವತಿಸಬೇಕಾಗಬಹುದು.
ಮುಖ್ಯವಾಗಿ ರಸ್ತೆಗಳಲ್ಲಿನ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಮತ್ತು ಪ್ರಯಾಣವನ್ನು ಸುರಕ್ಷಿತಗೊಳಿಸುವುದು ಈ ನಿಯಮಗಳ ಉದ್ದೇಶವಾಗಿದೆ. ಆದರೆ ಕೆಲವರು ತಿಳಿದೋ ತಿಳಿಯದೆಯೋ ಈ ಸಂಚಾರಿ ನಿಯಮಗಳನ್ನು ಪಾಲಿಸುವುದಿಲ್ಲ . ಆದ್ದರಿಂದ ಅವರು ತಮ್ಮ ಮತ್ತು ಇತರರ ಸುರಕ್ಷತೆಗೆ ಅಪಾಯವನ್ನುಂಟು ಮಾಡುತ್ತಾರೆ. ಇನ್ಮುಂದೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ನೀವು ಭಾರೀ ದಂಡವನ್ನು ಪಾವತಿಸಬೇಕಾದ 3 ನಿಯಮಗಳು ಇಲ್ಲಿವೆ.
- ಫ್ಯಾನ್ಸಿ ನಂಬರ್ ಪ್ಲೇಟ್ಗಳಿಗೆ ದಂಡ:
ಜನವರಿ 1 ರಿಂದ ದೇಶದಲ್ಲಿ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಈಗ ಜನರು 2019 ಕ್ಕಿಂತ ಹಳೆಯ ವಾಹನಗಳಿಗೆ ಸಹ ಅಲಂಕಾರಿಕ ನಂಬರ್ ಪ್ಲೇಟ್ಗಳನ್ನು ಹಾಕುವಂತಿಲ್ಲ. ನೀವು ಈ ನಿಯಮವನ್ನು ಅನುಸರಿಸದಿದ್ದರೆ, ನೀವು 10,000 ರೂಪಾಯಿಗಳವರೆಗೆ ದಂಡವನ್ನು ಪಾವತಿಸಬೇಕಾಗಬಹುದು. ಈ ನಿಯಮದ ಪ್ರಕಾರ ದ್ವಿಚಕ್ರ ವಾಹನವಾಗಲಿ ಅಥವಾ ನಾಲ್ಕು ಚಕ್ರದ ವಾಹನಗಳಾಗಲಿ ವಾಹನಕ್ಕೆ ಆರ್ಟಿಒ ಪ್ರಮಾಣೀಕರಿಸಿದ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅನ್ನು ಅಳವಡಿಸಬೇಕಾಗುತ್ತದೆ.
- ಹೆಚ್ಚಿನ ಶಬ್ಧ ಮಾಡುವ ಸೈಲೆನ್ಸರ್ಗೂ ಭಾರೀ ದಂಡ:
ಬುಲೆಟ್ ಉತ್ಸಾಹಿಗಳು ಕೆಲವೊಮ್ಮೆ ತಮ್ಮ ಬೈಕುಗಳನ್ನು ಹೆಚ್ಚು ಉತ್ತಮವಾಗಿ ಕಾಣುವಂತೆ ಮಾರ್ಪಡಿಸುತ್ತಾರೆ. ಇದಕ್ಕಾಗಿ ಮತ್ತೊಂದು ಅಥವಾ ಹೆಚ್ಚುವರಿ ಸೈಲೆನ್ಸರ್ ಅನ್ನು ಹೆಚ್ಚಾಗಿ ಅಳವಡಿಸಲಾಗುತ್ತದೆ. ಮೋಟಾರು ವಾಹನ ಕಾಯ್ದೆಯ ಪ್ರಕಾರ ಇದನ್ನು ಮಾಡುವುದು ಕಾನೂನುಬಾಹಿರ ಎಂದು ನೀವು ತಿಳಿದುಕೊಳ್ಳಿ. ನಿಮ್ಮ ಬೈಕು ಸಿಕ್ಕಿಬಿದ್ದರೆ, ನಿಮಗೆ ಭಾರಿ ದಂಡ ವಿಧಿಸಲಾಗುತ್ತದೆ. 25,000 ಸಾವಿರವರೆಗೂ ನಿಮಗೆ ದಂಡ ವಿಧಿಸಬಹುದು.
- ಯಾವುದೇ ರೀತಿಯ ವಿನ್ಯಾಸ ಬದಲಾಯಿಸಿದರೆ ದಂಡ: ವಾಹನದ ವಿನ್ಯಾಸವನ್ನು ಬದಲಾಯಿಸುವುದು ಮೋಟಾರು ವಾಹನ ಕಾಯ್ದೆಯಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಸಂಚಾರ ಪೊಲೀಸರು ಇದೀಗ ಅಂತಹ ಬೈಕ್, ಕಾರುಗಳನ್ನು ಹಿಡಿದು ದಂಡ ಹಾಕುತ್ತಿದ್ದಾರೆ. ಮಾರ್ಪಾಡು ಎಂದರೆ ಕಂಪನಿ ಮಾಡಿದ ವಿನ್ಯಾಸವನ್ನು ಬದಲಾಯಿಸುವುದು. ಹಾಗೆ ಮಾಡಿದರೆ ನಿಮಗೆ ಭಾರೀ ದಂಡ ವಿಧಿಸಬಹುದು. ಇದಲ್ಲದೆ, ವಾಹನವನ್ನು ವಶಪಡಿಸಿಕೊಳ್ಳಬಹುದು.
ಸರ್ಕಾರ ಯಾವುದೇ ನಿಯಮಗಳನ್ನು ಜಾರಿಗೊಳಿಸಿದರು ಅವುಗಳು ಸಾರ್ವಜನಿಕರ ಹಿತದೃಷ್ಟಿ ಯನ್ನು ಅವಲಂಬಿಸಿರುತ್ತವೆ. ಹಾಗಾಗಿ ಈ ಮೇಲಿಂನಂತೆ ಹೊಸ ನಿಯಮ ಜಾರಿ ತರಲಾಗಿದೆ.