KPSC : ಸಂದರ್ಶನ ಮುಗಿಸಿದ 24 ಗಂಟೆಯೊಳಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ | ದಾಖಲೆ ಮಾಡಿದ ಕೆಪಿಎಸ್ ಸಿ
ಈ ಹಿಂದೆ, ಪ್ರತಿಬಾರಿ ನೇಮಕಾತಿ ಪ್ರಕ್ರಿಯೆಯಲ್ಲಿ ಅನಗತ್ಯ ವಿಳಂಬ ಮಾಡುತ್ತದೆ ಎಂಬ ಹೇಳಿಕೆಗೆ ಗುರಿಯಾಗಿದ್ದ ಕರ್ನಾಟಕ ಲೋಕಸೇವಾ ಆಯೋಗ (ಕೆ.ಪಿ.ಎಸ್.ಸಿ) ಮೊಟ್ಟ ಮೊದಲ ಬಾರಿಗೆ ಸಂದರ್ಶನ ಮುಗಿಸಿದ 24 ಗಂಟೆಯೊಳಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿ ದಾಖಲೆ ಮಾಡಿದೆ.
ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಹುದ್ದೆಗೆ ಸಂದರ್ಶನಕ್ಕೆ ಆಹ್ವಾನಿಸಲಾಗಿದ್ದು, ಒಟ್ಟು 660 ಹುದ್ದೆಗಳಿದ್ದವು. ಕೆಪಿಎಸ್ ಸಿ ಈ 660 ಹುದ್ದೆಗಳಿಗೆ ಸಂದರ್ಶನ ಮುಗಿಸಿದ್ದು, ಸಂದರ್ಶನದ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು 24 ಗಂಟೆಯ ಒಳಗೆ ಪ್ರಕಟಣೆ ಮಾಡಲಾಗಿದೆ. ಆಯ್ಕೆ ಪಟ್ಟಿಯು ಆಯೋಗದ ವೆಬ್ ಸೈಟ್ ನಲ್ಲಿ ಲಭ್ಯವಾಗಲಿದೆ. ಹಾಗೇ ಆಕ್ಷೇಪಣೆಗೆ ಏಳು ದಿನಗಳ ಕಾಲಾವಕಾಶ ನೀಡಲಾಗಿದೆ.
ಇನ್ನೂ, ಈ ಹುದ್ದೆಗೆ 2022ರ ನವೆಂಬರ್ 7ರಂದು ಸಂದರ್ಶನ ಆರಂಭಗೊಂಡಿದೆ. ಹಾಗೇ ಈ ಸಂದರ್ಶನ ಪೂರ್ಣಗೊಂಡಿದ್ದು, 2022 ರ ಜನವರಿ 6 ಶುಕ್ರವಾರದಂದು. ಆ ಕೂಡಲೇ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. ಅದನ್ನು ಆಯೋಗದ ಅನುಮೋದನೆಗೆ ಸಲ್ಲಿಸಲಾಗಿತ್ತು. ಪಟ್ಟಿ ಸಲ್ಲಿಕೆಗೆ ಆಯೋಗ ಒಪ್ಪಿಗೆ ನೀಡಿದ ಬಳಿಕ ಇದನ್ನು ಪ್ರಕಟಿಸಲಾಗಿದೆ.
ಒಟ್ಟಾರೆ, ನೇಮಕಾತಿ ಪ್ರಕ್ರಿಯೆಯಲ್ಲಿ ಅನಗತ್ಯ ವಿಳಂಬ ಮಾಡುತ್ತಿದೆ ಎಂಬ ಅಪಖ್ಯಾತಿ ಪಡೆದಿದ್ದ ಕೆಪಿಎಸ್ ಸಿ ಈ ಬಾರಿ ಅತಿಬೇಗನೆ ಪಟ್ಟಿ ಪ್ರಕಟ ಮಾಡಿ ದಾಖಲೆ ಬರೆದಿದೆ.