PM Kisan: ಈ ತಿಂಗಳ ಅಂತ್ಯದಲ್ಲಿ ಪಿಎಂ ಕಿಸಾನ್ 13ನೇ ಕಂತಿನ ಹಣ ರಿಲೀಸ್ | ಹಣ ಪಡೆಯಲು ಈ ಕೆಲಸ ಮೊದಲು ಮಾಡಿದರೆ ಉತ್ತಮ
ಭಾರತ ಕೃಷಿ ಪ್ರಧಾನ ದೇಶ. ಶೇಕಡಾ 60 ರಷ್ಟು ಜನಸಂಖ್ಯೆಯು ಕೃಷಿಯ ಮೇಲೆ ಅವಲಂಬಿತವಾಗಿದೆ. ಸ್ವಾತಂತ್ರ್ಯ ಬಂದ ನಂತರ ಸರ್ಕಾರ ರೈತರ ಅಭ್ಯುದಯಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಹಲವಾರು ಸಮಿತಿಗಳನ್ನು ರಚಿಸಲಾಗಿದೆ. ರೈತರ ಆದಾಯವನ್ನು ದ್ವಿಗುಣಗೊಳಿಸುವುದರಿಂದ ಹಿಡಿದು ಬೆಳೆಗಳಿಗೆ ನ್ಯಾಯಯುತ ಬೆಲೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಅಂತಹ ಯೋಜನೆಗಳಲ್ಲಿ ಪಿಎಂ ಕಿಸಾನ್ ಯೋಜನೆ ಕೂಡ ಒಂದಾಗಿದೆ.
ಇದೀಗ ರೈತರ ಸ್ಥಿತಿಗತಿ ಸುಧಾರಿಸಲು ಕೈಗೊಂಡ ಕ್ರಮಗಳಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13ನೇ ಕಂತಿಗಾಗಿ ಕಾಯುತ್ತಿರುವ ರೈತರಿಗೆ ಮಹತ್ವದ ಸುದ್ದಿಯೊಂದು ಬಂದಿದೆ. ಮುಂದಿನ ಕಂತಿಗಾಗಿ ಕಾತರದಿಂದ ಕಾಯುತ್ತಿರುವ ರೈತರಲ್ಲಿ ನೀವೂ ಒಬ್ಬರಾಗಿದ್ದರೆ, ನೀವು ಇ-ಕೆವೈಸಿ ಮಾಡದಿದ್ದರೆ, ಈ ಯೋಜನೆಯಡಿ ನಿಮಗೆ ರೂ. 2000 ಲಭ್ಯವಿಲ್ಲ. 13ನೇ ಕಂತಿಗೆ ರೂ. 2,000 ಪಡೆಯಲು ಶೀಘ್ರದಲ್ಲೇ KYC ಅನ್ನು ನವೀಕರಿಸಲು ತಿಳಿಸಲಾಗಿದೆ.
ಕಳೆದ ವರ್ಷ ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಜನವರಿ 1 ರಂದು ಬಿಡುಗಡೆಯಾಯಿತು. ಅದಕ್ಕಾಗಿಯೇ ಸರ್ಕಾರ ಈ ಬಾರಿ ಜನವರಿಯಲ್ಲಿ ಹಣ ವರ್ಗಾವಣೆ ಮಾಡುವ ಸಾಧ್ಯತೆ ಇದೆ. ಆದರೆ, ಈ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ನೀವು ಸಹ ಈ ಯೋಜನೆಯ ಲಾಭವನ್ನು ಪಡೆಯಲು ಬಯಸಿದರೆ, ಮುಖ್ಯವಾಗಿ ನೋಂದಣಿ ಅಗತ್ಯವಿದೆ.
ಅದಲ್ಲದೆ ಇದರ ಜೊತೆಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು ಎಂಬ ಷರತ್ತು ಕೂಡ ಇದೆ . ನೋಂದಣಿಗಾಗಿ, ರೈತರು ತಮ್ಮ ಪಡಿತರ ಚೀಟಿ ವಿವರಗಳನ್ನು ಅಪ್‌ಲೋಡ್ ಮಾಡಬೇಕು. ಇತರ ಅಗತ್ಯ ದಾಖಲೆಗಳ ಸಾಫ್ಟ್ ಪ್ರತಿಗಳನ್ನು ಸಲ್ಲಿಸಬೇಕು. ಇಲ್ಲಿಯವರೆಗೆ ಇ ಕೆವೈಸಿ ಮಾಡದ ರೈತರು, ಆ ರೈತರು ಪಿಎಂ ಕಿಸಾನ್‌ಗಾಗಿ ಇ ಕೆವೈಸಿಯನ್ನು 2 ರೀತಿಯಲ್ಲಿ ಪೂರ್ಣಗೊಳಿಸಬಹುದು.
- ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್ ಮೂಲಕ ಮನೆಯಲ್ಲಿ ಕುಳಿತು ಈ ಕೆಲಸವನ್ನು ಆನ್‌ಲೈನ್‌ನಲ್ಲಿ ಮಾಡಬಹುದು.
- ಅಥವಾ ರೈತರು ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ (CSC) ಭೇಟಿ ನೀಡುವ ಮೂಲಕ ತಮ್ಮ ಇ-ಕೆವೈಸಿ ಪಡೆಯಬಹುದು. ರೈತನೇ ಒಟಿಪಿ ಮೂಲಕ ಇ-ಕೆವೈಸಿ ಮಾಡಿದರೆ ಹಣ ಕೊಡಬೇಕಾಗಿಲ್ಲ, ಆದರೆ ಕಾಮನ್ ಸರ್ವೀಸ್ ಸೆಂಟರ್‌ಗೆ ಹೋಗಿ ಇ-ಕೆವೈಸಿ ಮಾಡಿದರೆ ಅದಕ್ಕಾಗಿ ಒಂದಿಷ್ಟು ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಈ ರೀತಿಯಾಗಿ EKYC ಅನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಮಾಡಬಹುದು. ಇದಕ್ಕಾಗಿ ಮೊದಲು PM ಕಿಸಾನ್ ವೆಬ್‌ಸೈಟ್ https://pmkisan.gov.in/ ಗೆ ಹೋಗಿ ನಂತರ ‘ಫಾರ್ಮರ್ಸ್ ಕಾರ್ನರ್’ ಅಡಿಯಲ್ಲಿ ಬರೆಯಲಾದ e KYC ಟ್ಯಾಬ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ. ಮುಖ್ಯವಾಗಿ ತೆರೆಯುವ ಪುಟದಲ್ಲಿ, ಆಧಾರ್ ಸಂಖ್ಯೆಯ ಮಾಹಿತಿಯನ್ನು ನಮೂದಿಸಿ ಮತ್ತು ಹುಡುಕಾಟ ಟ್ಯಾಬ್ ಅನ್ನು ಕ್ಲಿಕ್ ಮಾಡಿ. ಇದರ ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ. ನಂತರ ಸಬ್ಮಿಟ್ ಒಟಿಪಿ ಕ್ಲಿಕ್ ಮಾಡಿ ಮತ್ತು ಒಟಿಪಿ ನಮೂದಿಸುವ ಮೂಲಕ ಸಲ್ಲಿಸಿ. ಇದು ನಿಮ್ಮ eKYC ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ.
ಈ ರೀತಿಯಾಗಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ಎಲ್ಲಾ ಜಮೀನು ಹೊಂದಿರುವ ರೈತರ ಕುಟುಂಬಗಳು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13ನೇ ಕಂತು ಪಡೆದುಕೊಳ್ಳಬಹುದು.