Government schemes for Girls: 12ನೇ ತರಗತಿ ವಿದ್ಯಾರ್ಥಿನಿಯರಿಗೆ ಸಿಗಲಿದೆ 6 ಸಾವಿರ ರೂ |ಈ ಯೋಜನೆಯಡಿ ಅರ್ಜಿ ಸಲ್ಲಿಸಿ

ಈಗಾಗಲೇ ಬಡ ಕುಟುಂಬದ ಹೆಣ್ಣುಮಕ್ಕಳು ಶಿಕ್ಷಣ ಪಡೆಯುವಲ್ಲಿ ವಂಚಿತರಾಗಬಾರದು ಎಂದು ಸರ್ಕಾರ ಹೆಣ್ಣು ಮಕ್ಕಳಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಹಾಗೆಯೇ ಲಾಡ್ಲಿ ಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ.

ಹೆಣ್ಣು ಮಕ್ಕಳ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಲಾಗುತ್ತಿತ್ತು. ಅದಕ್ಕೆ ಕಾರಣ ಜನರು ಎದುರಿಸುತ್ತಿದ್ದ ಅನೇಕ ಸಮಸ್ಯೆಗಳು. ಅದರಲ್ಲೂ ಮುಖ್ಯವಾದುದು ಎಂದರೆ ಆರ್ಥಿಕ ಸಮಸ್ಯೆ. ಹೀಗಾಗಿ ಖರ್ಚು ಮಾಡಲು ಸಾಕಷ್ಟು ಹಣವಿಲ್ಲ ಎಂದು ಕುಟುಂಬದ ಗಂಡು ಮಗುವಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ವಿದ್ಯಾಭ್ಯಾಸ ನೀಡಲಾಗುತ್ತಿತ್ತು. ಆದರೆ ಈಗ ಸಮಾಜದಲ್ಲಿನ ಈ ಸಮಸ್ಯೆಗಳನ್ನು ಹೋಗಲಾಡಿಸಲು ಸರ್ಕಾರವು ಲಾಡ್ಲಿ ಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ.

ಲಾಡ್ಲಿ ಲಕ್ಷ್ಮಿ ಯೋಜನೆಯಡಿಯಲ್ಲಿ 12 ನೇ ತರಗತಿ ವಿದ್ಯಾರ್ಥಿನಿಯರಿಗೆ ಸಿಗಲಿದೆ 6 ಸಾವಿರ ರೂ
ಈ ಯೋಜನೆಯ ಲಾಭ ಪಡೆಯಲು ನೀವು ಒಮ್ಮೆ ಮಾತ್ರ ಅರ್ಜಿ ಸಲ್ಲಿಸಬೇಕು.

ನಿಮ್ಮ ಹೆಣ್ಣು ಮಗಳು 12ನೇ ತರಗತಿಗೆ ಪ್ರವೇಶ ಪಡೆದಾಗ ಆಕೆಯ ಬ್ಯಾಂಕ್ ಖಾತೆಗೆ ಸರ್ಕಾರದಿಂದ 6 ಸಾವಿರ ರೂ. ಹಣ ಮಂಜೂರಾಗುತ್ತದೆ. ಈ ಯೋಜನೆಯ ಲಾಭ ಪಡೆಯಲು ನೀವು ಒಮ್ಮೆ ಮಾತ್ರ ಅರ್ಜಿ ಸಲ್ಲಿಸಬೇಕು. ನಂತರ ಅರ್ಹ ಹುಡುಗಿಯರಿಗೆ ಸರ್ಕಾರವು ಪ್ರಮಾಣಪತ್ರಗಳನ್ನು ನೀಡುತ್ತದೆ.

ಈ ಹಣವನ್ನು ಹೇಗೆ ಪಡೆಯಬಹುದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ:

ಹೆಣ್ಣು ಮಗು ಜನಿಸಿದ ಸಮಯದಲ್ಲಿ ಲಾಡ್ಲಿ ಲಕ್ಷ್ಮಿ ಯೋಜನೆಯಲ್ಲಿ ನಿಮ್ಮ ಹೆಣ್ಣು ಮಗುವಿನ ಹೆಸರನ್ನು ನೋಂದಾಯಿಸಿದರೆ, ನಿಮ್ಮ ಹೆಣ್ಣು ಮಗುವಿಗೆ ಸರ್ಕಾರದಿಂದ ಒಟ್ಟು 1 ಲಕ್ಷ 43 ಸಾವಿರ ರೂ. ನೀಡುತ್ತದೆ. ಆದರೆ, ಈ ಮೊತ್ತವನ್ನು ಒಂದೇ ಬಾರಿಗೆ ನೀಡುವುದಿಲ್ಲ. ನಿಮ್ಮ ಮಗಳ ಅಗತ್ಯಕ್ಕೆ ಅನುಗುಣವಾಗಿ ಮೊತ್ತವನ್ನು ನಿಮಗೆ ತಲುಪಿಸಲಾಗುತ್ತದೆ. ಉದಾಹರಣೆಗೆ, ನಿಮ್ಮ ಮಗಳು 6 ನೇ ತರಗತಿಗೆ ಪ್ರವೇಶ ಪಡೆದಾಗ 6 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ. ನಂತರ 9 ನೇ ತರಗತಿಗೆ ಪ್ರವೇಶ ಪಡೆದಾಗ 4 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ. ಇದಾದ ನಂತರ 11 ಮತ್ತು 12ನೇ ತರಗತಿಗೆ ಪ್ರವೇಶ ಪಡೆದ ಮೇಲೆ ನಿಮ್ಮ ಮಗಳ ಬ್ಯಾಂಕ್ ಖಾತೆಗೆ 6 ಸಾವಿರ ರೂ. ಬೀಳಲಿದೆ.

ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸಿದರೆ, ನೀವು ಎಲ್ಲಾ ದಾಖಲೆಗಳನ್ನು ನಿಮ್ಮ ಅಂಗನವಾಡಿ ಕಾರ್ಯಕರ್ತೆಗೆ ಸಲ್ಲಿಸಬೇಕು. ಇದಲ್ಲದೆ, ನೀವು ಸಾರ್ವಜನಿಕ ಸೇವಾ ಕೇಂದ್ರ ಅಥವಾ ಪ್ರಾಜೆಕ್ಟ್ ಆಫೀಸ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದು. ಈ ಯೋಜನೆಯಡಿ, ಮಧ್ಯಪ್ರದೇಶ ಸರ್ಕಾರವು ಮೊದಲು 1 ಲಕ್ಷದ 18 ಸಾವಿರ ರೂಪಾಯಿಗಳನ್ನು ನೀಡುತ್ತಿತ್ತು. ಆದರೆ ಈಗ ಸರ್ಕಾರವು ಈ ಯೋಜನೆಯಲ್ಲಿ ಮೊತ್ತವನ್ನು ಹೆಚ್ಚಿಸಿದೆ. ಈಗ ನಿಮ್ಮ ಮಗಳಿಗೆ ಒಟ್ಟು 1 ಲಕ್ಷದ 43 ಸಾವಿರ ರೂ. ನೀಡುತ್ತದೆ.

ಈ ಮೇಲಿನಂತೆ ನಿಯಮನುಸಾರ ಬಡ ಕುಟುಂಬದ ಹೆಣ್ಣು ಮಕ್ಕಳಿಗೆ ಶಿಕ್ಷಣ ಅಭಿವೃದ್ಧಿಗಾಗಿ ಲಾಡ್ಲಿ ಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

Leave A Reply

Your email address will not be published.