7th Pay commission : ಹೋಳಿ ಹಬ್ಬಕ್ಕೆ ಸಿಗಲಿದೆ ಸಿಹಿ ಸುದ್ದಿ

ತುಟ್ಟಿಭತ್ಯೆ (ಡಿಎ) ಹೆಚ್ಚಳಕ್ಕಾಗಿ ಎದುರು ನೋಡುತ್ತಿದ್ದ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿಯೊಂದು ಕಾದಿದೆ. ಹೌದು!! 2023 ಹೋಳಿ ಹಬ್ಬದ ಮೊದಲೇ ನಿರೀಕ್ಷಿತ ಹೆಚ್ಚಳ ಪಡೆಯುವ ಸಾಧ್ಯತೆ ದಟ್ಟವಾಗಿದ್ದು, ಎಐಸಿಪಿಐ ಸೂಚ್ಯಂಕವು ಶುಭ ಸುದ್ದಿ ನೀಡಿದೆ.

ಕೇಂದ್ರ ಸರ್ಕಾರ ವರ್ಷಕ್ಕೆ ಎರಡು ಬಾರಿ ಡಿಎ ಹೆಚ್ಚಳ ಮಾಡಲಿದ್ದು, ಈ ಡಿಎ ಹೆಚ್ಚಳವನ್ನು ಜನವರಿ ಮತ್ತು ಜುಲೈ ತಿಂಗಳುಗಳಲ್ಲಿ ಘೋಷಣೆ ಮಾಡಲಾಗುತ್ತದೆ. ಇದೀಗ ಹೊಸ ವರ್ಷ ಆರಂಭವಾಗಿದ್ದು, ಕೇಂದ್ರ ಸರ್ಕಾರಿ ನೌಕರರು ತುಟ್ಟಿಭತ್ಯೆ ಹೆಚ್ಚಳಕ್ಕಾಗಿ ಎದುರು ನೋಡುತ್ತಿದ್ದು, ಹೋಳಿ ಹಬ್ಬದ ಸಂಭ್ರಮಕ್ಕೆ ಸಿಹಿ ಸುದ್ದಿ ಲಭ್ಯವಾಗಲಿದೆ ಎನ್ನಲಾಗುತ್ತಿದೆ.

ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಕೇಂದ್ರ ನೌಕರರಿಗೆ ವೇತನ ದರದಲ್ಲಿ ಪರಿಷ್ಕರಣೆ ಮಾಡಿದ್ದು ತಿಳಿದಿರುವ ವಿಚಾರ. ದೀಪಾವಳಿಗೆ ಮುಂಚಿತವಾಗಿ, ಕೇಂದ್ರವು ಕೇಂದ್ರ ಸರಕಾರಿ ನೌಕರರ ಡಿಎಯನ್ನು ಶೇಕಡಾ 4 ರಷ್ಟು ಹೆಚ್ಚಿಸಿದೆ. ಹೀಗಾಗಿ ಸರಕಾರಿ ನೌಕರರ ಡಿಎಯನ್ನು ಶೇಕಡಾ 34 ರಿಂದ 38 ಕ್ಕೆ ಹೆಚ್ಚಿಸಿದೆ. ಇದಕ್ಕೂ ಮೊದಲು ಮಾರ್ಚ್ 2022 ರಲ್ಲಿ ಡಿಎಯನ್ನು ಶೇಕಡಾ 3 ರಷ್ಟು ಹೆಚ್ಚಿಸಲಾಗಿತ್ತು.

ಕೇಂದ್ರದ ಈ ಪ್ರವೃತ್ತಿಯನ್ನು ಗಮನಿಸಿದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೇಂದ್ರ ಸರ್ಕಾರಿ ನೌಕರರಿಗೆ 2023ರ ಮಾರ್ಚ್ 8ರಂದು ಹೋಳಿ ಹಬ್ಬದೊಳಗೆ ತುಟ್ಟಿ ಭತ್ಯೆ ಹೆಚ್ಚಳ ಪಡೆಯುವ ಸಾಧ್ಯತೆಯಿದೆ ಎಂದು ಹೇಳಬಹುದು.

ವೇತನ-ಡಿಎ ವಿವರ ಹೀಗಿವೆ:

ಉದ್ಯೋಗಿಯ ಮೂಲ ವೇತನ – 56,900 ರೂ.

ಹೊಸ ತುಟ್ಟಿಭತ್ಯೆ (ಶೇ.42) – ಮಾಸಿಕ 23898 ರೂ.

ಇಲ್ಲಿಯವರೆಗೆ ತುಟ್ಟಿಭತ್ಯೆ (ಶೇ.38) – ಮಾಸಿಕ 21622 ರೂ.

ಎಷ್ಟು ತುಟ್ಟಿ ಭತ್ಯೆ ಹೆಚ್ಚಿದೆ – 23898-21622 = ತಿಂಗಳಿಗೆ 2,276ರೂ.

ವಾರ್ಷಿಕ ವೇತನದಲ್ಲಿ ಹೆಚ್ಚಳ – 2276 X 12 = ವಾರ್ಷಿಕ 27,312ರೂ.

ಕೆಲ ಬಲ್ಲ ಮೂಲಗಳ ಮಾಹಿತಿಯ ಅನುಸಾರ, ಕೇಂದ್ರ ಸರ್ಕಾರವು ತುಟ್ಟಿಭತ್ಯೆಯನ್ನು ಶೇ.4 ಪ್ರತಿಶತ ಇಲ್ಲವೇ ಶೇ. 3ರಷ್ಟನ್ನು ಹೆಚ್ಚಿಸಬಹುದು ಎನ್ನಲಾಗುತ್ತಿದ್ದು, ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಎಐಸಿಪಿಐ ಸೂಚ್ಯಂಕವನ್ನು 0.4 ಪಾಯಿಂಟ್‌ಗಳಷ್ಟು ಏರಿಕೆ ಮಾಡಲಾಗಿದೆ.

ಕೇಂದ್ರ ಸರ್ಕಾರವು 2022ರ ಜುಲೈನಲ್ಲಿ ಶೇ. 4ರಷ್ಟು ಡಿಎಯನ್ನು ಹೆಚ್ಚಿಸಿದರೆ ತುಟ್ಟಿಭತ್ಯೆಯ ಪ್ರಮಾಣ ಆಗ ಶೇ.42 ಆಗಲಿದೆ. ಡಿಎ ಮತ್ತು ಡಿಆರ್ ಹೆಚ್ಚಳವಾದಲ್ಲಿ ಇದರಿಂದ 48 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68 ಲಕ್ಷ ಪಿಂಚಣಿದಾರರು ಇದರಿಂದ ಸದುಪಯೋಗ ಪಡಿಸಿಕೊಳ್ಳಬಹುದು ಎನ್ನಲಾಗುತ್ತಿದೆ.

Leave A Reply

Your email address will not be published.