ಪ್ರಿಯ ಓದುಗರೇ | ನಿಮ್ಮ ಬುದ್ಧಿವಂತಿಕೆಗೆ ಸವಾಲೊಂದು ಇಲ್ಲಿದೆ | ಈ ಚಿತ್ರದಲ್ಲಿರುವ ಮಹಿಳೆಯ ‘ಪ್ರೇಮಿ’ಯನ್ನು ಪತ್ತೆಹಚ್ಚಿ, ಜಾಣರಾಗಿ
ಸಣ್ಣವರಿರುವಾಗ ಕೆಲವರಿಗೆ ಒಂದು ಕ್ರೇಜ್ ಇತ್ತು. ಏನಂದ್ರೆ ಮೊದಲೆಲ್ಲ ಮೊಬೈಲ್ ಬಳಕೆ ಕಡಿಮೆ, ಹಾಗಾಗಿ ಹೆಚ್ಚು ಪೇಪರ್ ಅನ್ನೇ ಓದುವ ಹವ್ಯಾಸವಿತ್ತು. ಅದರಲ್ಲಿ ಸುಡೋಕು ಅಂತ ಒಂದು ಆಟವಿತ್ತು. ಅದನ್ನ ಗಮನವಿಟ್ಟು, ಏಕಾಗ್ರತೆಯಿಂದ ಯೋಚಿಸಿ ಉತ್ತರ ಬರೆಯಬೇಕಿತ್ತು.
ಪ್ರಸ್ತುತ, ಮೊಬೈಲ್ ಬಳಕೆ ಹೆಚ್ಚಾಗಿದ್ದು, ಜನರ ಜೀವನದ ಭಾಗವಾಗಿಬಿಟ್ಟಿದೆ. ಬದುಕಿನಲ್ಲಿ, ಸಮಾಜದಲ್ಲಿ ಏನೇ ಘಟನೆಗಳು ನಡೆದರೂ ಅದನ್ನ ಸೆಕೆಂಡ್ ಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಹಾಗೇ ಇದೀಗ ಪ್ರಿಯ ಓದುಗರಿಗೆ ಸವಾಲೊಂದು ಇಲ್ಲಿದೆ.
ನಿಮ್ಮ ಬುದ್ಧಿವಂತಿಕೆ ಮತ್ತು ಕಣ್ಣಿನ ದೃಷ್ಟಿಗೆ ಸವಾಲೊಡ್ಡಲಾಗಿದೆ. ಕೆಲವೊಂದು ಸವಾಲು ನಮ್ಮ ಬುದ್ದಿವಂತಿಕೆ, ದೇಹಬಲಾಡ್ಯತೆ, ಆರೋಗ್ಯದ ಬಗೆಗಿನ ಮೌಲ್ಯಮಾಪನ ಮಾಡುತ್ತದೆ. ಹಾಗೆಯೇ ನಿಮ್ಮ ಕಣ್ಣುಗಳು ಎಷ್ಟು ಸೂಕ್ಷ್ಮವಾಗಿವೆ ಮತ್ತು ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸಲು ಸವಾಲೊಂದು ಇಲ್ಲಿದೆ.
ಅದೇನೆಂದರೆ, ಇಲ್ಲಿ ಮಹಿಳೆಯ ಚಿತ್ರವೊಂದು ನೀಡಲಾಗಿದ್ದು, ಆಕೆ ಉದ್ಯಾನವನದಲ್ಲಿ ಮರದ ಕೆಳಗೆ ಕುಳಿತು ಪುಸ್ತಕ ಓದುತ್ತಿರುವುದನ್ನು ನೋಡಬಹುದಾಗಿದೆ. ಆದರೆ ಓದುಗರೇ, ಆ ಚಿತ್ರದಲ್ಲಿ ಆಕೆಯ ಪ್ರೇಮಿ ಕೂಡ ಇದ್ದಾನೆ. ಪ್ರೇಯಸಿ ಎಲ್ಲೋ ಪ್ರೇಮಿ ಕೂಡ ಅಲ್ಲೇ ಇರುತ್ತಾನೆ ಅಲ್ವಾ!! ಆದರೆ ಆತ ನಿಮ್ಮ ಕಣ್ಣಿಗೆ ಕಾಣಿಸುತ್ತಿಲ್ಲ ಅಲ್ವಾ!! ಇದೇ ನಿಮಗಿರುವ ಪರೀಕ್ಷೆ, ಫೋಟೋದಲ್ಲಿರುವ ಮಹಿಳೆಯ ಪ್ರೇಮಿಯನ್ನು ಪತ್ತೆ ಹಚ್ಚಿ, ಬುದ್ಧಿವಂತರು ಎಂದು ಪರೀಕ್ಷಿಸಿಕೊಳ್ಳಿ.
ಈ ಆಪ್ಟಿಕಲ್ ಭ್ರಮೆಯನ್ನು ಪರಿಹರಿಸಲು ಸಾಧ್ಯವಾಗದೆ, ಪ್ರೇಮಿ ಎಲ್ಲಿ ಕಾಣಿಸುತ್ತಿಲ್ಲವಲ್ಲ ಎಂದು ಹುಡುಕಾಡುತ್ತಿರುವವರಿಗೆ, ನೀವು ಮಾಡಬೇಕಾಗಿರುವುದು ಇಷ್ಟೇ, ಚಿತ್ರವನ್ನು ತಲೆಕೆಳಗಾಗಿ ತಿರುಗಿಸುವುದು. ಈಗ ನೀವು ಅವಳ ಪ್ರೇಮಿಯ ಮುಖವನ್ನು ಸುಲಭವಾಗಿ ಗುರುತಿಸಬಹುದಾಗಿದೆ.
ಒಂದು ಉತ್ತರ ಹೇಳಿದರೂ, ಇನ್ನೂ ಕೂಡ ನಿಮಗೆ ಗೊತ್ತಾಗಲಿಲ್ಲ, ಚಿತ್ರವನ್ನು ಎಷ್ಟು ನೋಡಿದರೂ ಆಕೆಯ ಪ್ರೇಮಿಯನ್ನು ಗುರುತಿಸಲು ಸಾಧ್ಯವಾಗದೇ ಇದ್ದರೆ, ಈ ಕೆಳಗಿನ ಚಿತ್ರದಲ್ಲಿ ಹೈಲೈಟ್ ಮಾಡಲಾದ ಪ್ರದೇಶವನ್ನು ನೋಡಿ ನಿಮಗೆ ಉತ್ತರ ಸಿಗುತ್ತದೆ. ಇನ್ನೂ, ಇಂತಹ ಆಪ್ಟಿಕಲ್ ಭ್ರಮೆಯನ್ನು ಪರಿಹರಿಸುವುದರಿಂದ ಏಕಾಗ್ರತೆ ಮತ್ತು ವೀಕ್ಷಣಾ ಕೌಶಲ್ಯ ಹೆಚ್ಚುತ್ತದೆ. ಬುದ್ಧಿ ಕೂಡ ಚುರುಕಾಗುತ್ತದೆ.