ಬಹುನಿರೀಕ್ಷಿತ OnePlus 11 5G ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ| ಏನೆಲ್ಲಾ ಫೀಚರ್ ಹೊಂದಿದೆ ಗೊತ್ತಾ?

ಹೊಸ ಹೊಸ ವಿನ್ಯಾಸದ ಮೊಬೈಲ್ ಗಳು ಪ್ರತಿದಿನ ಮಾರುಕಟ್ಟೆಗೆ ಬರುತ್ತಿವೆ. ಇದೀಗ ಮಾರುಕಟ್ಟೆಯು ಬಹು ಬಹುನಿರೀಕ್ಷೆಯಿಂದ ಎದುರುನೋಡುತ್ತಿದ್ದ OnePlus 11 5G ಸ್ಮಾರ್ಟ್‌ಫೋನ್ ಹೊಸ ಮಾದರಿಯು ಚೀನಾದಲ್ಲಿ ರಿಲೀಸ್ ಆಗಿದೆ. ಇದರ ಫೀಚರ್ ಗಳು ಹೇಗಿದೆ ಎಂಬುದನ್ನು ತಿಳಿಯಲು ಸ್ಟೋರಿ ಓದಿ.

ಹೆಚ್ಚಿನ ಫ್ರೇಮ್ ದರದ ಕಸ್ಟಮ್ ಗ್ರಾಫಿಕ್ಸ್ ಎಂಜಿನ್ ಒದಗಿಸುವ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಇದಾಗಿದ್ದು, ಹುಡ್ ಅಡಿಯಲ್ಲಿ ಇತ್ತೀಚಿನ Snapdragon 8 Gen 2 ಪ್ರೊಸೆಸರ್ ಹೊಂದಿರುವ ಹೊಸ OnePlus 11 5G ಸ್ಮಾರ್ಟ್‌ಫೋನ್ 12GB + 256GB, 12GB + 512GB ಮತ್ತು 16GB + 512GBಗಳ ವಿವಿಧ ಮಾದರಿಯ ಇಂಟರ್ನಲ್ ಸ್ಟೋರೇಜ್‌ ಗಳೊಂದಿಗೆ ಮಾರುಕಟ್ಟೆಗೆ ಬಂದಿದೆ.

ಒನ್‌ಪ್ಲಸ್ 11 5G 6.7 ಇಂಚಿನ ಕ್ವಾಡ್‌ ಎಚ್‌ಡಿ+ ಡಿಸ್‌ಪ್ಲೇ, ಇನ್‌ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಂದಿದೆ. “ಸ್ನ್ಯಾಪ್‌ಡ್ರ್ಯಾಗನ್ 8 ಜೆನ್ 2 ಪ್ರೊಸೆಸರ್ ಜತೆಗೆ ಅಡ್ರೆನೊ 740 ಗ್ರಾಫಿಕ್ಸ್ ಬೆಂಬಲ ಹೊಂದಿದೆ. 12GB ಮತ್ತು 16GB LPDDR5X RAM ಎಂಬ ಎರಡು ಆಯ್ಕೆ ಹಾಗೂ 256 GB ಮತ್ತು 512 GB ಸ್ಟೋರೇಜ್ ಜತೆಗೆ ದೊರೆಯಲಿದೆ. 5,000mAh ಬ್ಯಾಟರಿ ಮತ್ತು 100W SuperVOOC ಚಾರ್ಜಿಂಗ್ ಬೆಂಬಲ, ಆ್ಯಂಡ್ರಾಯ್ಡ್ 13 ಆಧಾರಿತ ಕಲರ್‌ಓಎಸ್ 13 ಮೂಲಕ ಹೊಸ ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಿಸುತ್ತದೆ.

ಹಿಂಭಾಗದಲ್ಲಿ ವೃತ್ತಾಕಾರದ ದೊಡ್ಡ ವಿನ್ಯಾಸದ ಕ್ಯಾಮೆರಾ ಇದೆ. 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜತೆಗೆ 48 ಮೆಗಾಪಿಕ್ಸೆಲ್ ವೈಡ್ ಆ್ಯಂಗಲ್ ಕ್ಯಾಮೆರಾ, 32 ಮೆಗಾಪಿಕ್ಸೆಲ್ ಟೆಲಿಫೋಟೊ ಲೆನ್ಸ್ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಇದರಲ್ಲಿದೆ.

OnePlus 11 5G ಸ್ಮಾರ್ಟ್‌ಫೋನ್ ಬ್ಯಾಸಲ್‌ಬಾಲ್ಡ್ ಬ್ರ್ಯಾಂಡಿಂಗ್‌ನೊಂದಿಗೆ ಹಿಂಭಾಗದಲ್ಲಿ ಟ್ರಿಪಲ್‌ ರಿಯರ್ ಕ್ಯಾಮೆರಾ ಸೆಟಪ್ ಹೊತ್ತು ಬಂದಿದೆ. ಇದು ಸೋನಿ IMX890 ಸಂವೇದಕದೊಂದಿಗೆ 50MP ಪ್ರಾಥಮಿಕ ಕ್ಯಾಮೆರಾ, Sony IMX581 ಸಂವೇದಕದೊಂದಿಗೆ 48MP ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಮತ್ತು Sony IMX709 ಸಂವೇದಕದೊಂದಿಗೆ 32MP RGBW ಟೆಲಿಫೋಟೋ ಕ್ಯಾಮೆರಾಗಳೊಂದಿಗೆ ಶಕ್ತವಾಗಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಸ್ಮಾರ್ಟ್‌ಫೋನಿನ ಮುಂಭಾದ ಎಡಭಾಗದಲ್ಲಿ 16MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಇನ್ನುಳಿದಂತೆ ಇತ್ತೀಚಿನ ಎಲ್ಲಾ ಪ್ರಮುಖ ಕ್ಯಾಮೆರಾ ವೈಶಿಷ್ಟ್ಯಗಳು ಸ್ಮಾರ್ಟ್‌ಫೋನಿನಲ್ಲಿವೆ.

ಗೇಮ್‌ಗಳು ಯಾವ ಫ್ರೇಮ್ ದರವನ್ನು ಹೊಂದಿದ್ದರೂ ಸಹ, ಎಲ್ಲಾ ಗೇಮ್‌ಗಳಲ್ಲಿ ಈ ಸ್ಮಾರ್ಟ್‌ಫೋನ್ ಸೆಕೆಂಡಿಗೆ 120 ಫ್ರೇಮ್‌ಗಳನ್ನು (FPS) ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದರಿಂದ ಗೇಮಿಂಗ್ ಪ್ರಿಯರಿಗೆ ಅತ್ಯುತ್ತಮ ಅನುಭವ ದೊರೆಯುವ ಭರವಸೆಯನ್ನು ನೀಡಿದೆ.

Leave A Reply

Your email address will not be published.