PPF ಖಾತೆದಾರರ ಗಮನಕ್ಕೆ : ಬಂದಿದೆ ಸರ್ಕಾರದಿಂದ ಹೊಸ ಷರತ್ತು!
ಪ್ರತಿಯೊಬ್ಬರಿಗೂ ಕೂಡ ಹೂಡಿಕೆ ಎಂಬುದು ಅತ್ಯವಶ್ಯವಾಗಿದ್ದು, ಭವಿಷ್ಯದಲ್ಲಿ ಎದುರಾಗುವ ಹಣಕಾಸಿನ ತೊಡಕುಗಳನ್ನು ನಿವಾರಿಸಲು ನಿಶ್ಚಿತ ಲಾಭದ ಜೊತೆಗೆ ಆರ್ಥಿಕ ಭದ್ರತೆಯ ಹೊರೆಯನ್ನು ಇಳಿಸುವ ಮೂಲಗಳಲ್ಲಿ ಠೇವಣಿ ಮಾಡುವುದು ಸಾಮಾನ್ಯ.
ಪಿಪಿಎಫ್ ಖಾತೆಯು ಸುರಕ್ಷತೆ, ಆದಾಯ ಮತ್ತು ತೆರಿಗೆ-ಉಳಿತಾಯ ಪ್ರಯೋಜನಗಳ ಉತ್ತಮ ಲಾಭ ಒದಗಿಸುತ್ತದೆ. ಆಗಾಗ ಬದಲಾಗುವ ಬಡಿದ್ದರಗಳಿಂದ ಯಾವುದರಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಬಹುದು ಎಂಬ ಅನುಮಾನ ಹಲವರನ್ನು ಕಾಡದಿರದು. ಹಾಗಾಗಿ ಬಡ್ಡಿ ದರಗಳ ಬಗ್ಗೆ ಮಾಹಿತಿ ತಿಳಿದಿರುವುದು ಉತ್ತಮ.
ಇತ್ತೀಚೆಗೆ ಕೆಲವು ತಿಂಗಳುಗಳಿಂದ ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೊ ದರವನ್ನು ಹೆಚ್ಚಿಸುತ್ತಿರುವುದರಿಂದ ದೇಶದಲ್ಲಿ ವಿವಿಧ ಠೇವಣಿ ಮತ್ತು ಸಾಲಗಳ ಮೇಲಿನ ಬಡ್ಡಿದರಗಳಲ್ಲಿ ಬದಲಾವಣೆಯಾಗಿದ್ದು, ಕೆಲ ಹೂಡಿಕೆಗಳ ಬಡ್ಡಿದರ ಹೆಚ್ಚಳವಾಗಿದ್ದನ್ನು ಗಮನಿಸಿರಬಹುದು.
ಸರ್ಕಾರವು ರಾಜ್ಯದ ಜನತೆಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಆರ್ಥಿಕ ನೆರವು, ಶಿಕ್ಷಣ, ಕೃಷಿ, ಹಣ ಹೂಡಿಕೆ ಎಲ್ಲ ಕ್ಷೇತ್ರದಲ್ಲಿಯೂ ಕೂಡ ತೊಡಗಿಸಿಕೊಳ್ಳಲು ಅನುವು ಮಾಡಿಕೊಟ್ಟಿದೆ. ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಉಳಿತಾಯ ಮತ್ತು ಹೂಡಿಕೆಗೆ ಉತ್ತೇಜನ ನೀಡಿ ಪ್ರೋತ್ಸಾಹ ನೀಡಲಾಗುತ್ತಿದೆ.
ಅನೇಕ ದೀರ್ಘಕಾಲೀನ ಹೂಡಿಕೆ ಯೋಜನೆಗಳನ್ನು ಸರ್ಕಾರವು ನಡೆಸುತ್ತಿದ್ದು, ಜನರು ದೀರ್ಘಕಾಲ ಹಣ ಉಳಿತಾಯ ಮತ್ತು ಹೂಡಿಕೆ ಮಾಡಬಹುದು. ಈ ಯೋಜನೆಗಳಲ್ಲಿ ಒಂದಾದ ಪಿಪಿಎಫ್ ಅಂದರೆ ಸಾರ್ವಜನಿಕ ಭವಿಷ್ಯ ನಿಧಿಯನ್ನು ಸಹ ಸೇರಿಸಲಾಗಿದೆ. ಪಿಪಿಎಫ್ ಖಾತೆಯನ್ನು ತೆರೆಯಲು ಕೆಲವು ನಿಯಮಗಳನ್ನು ಪಾಲಿಸಬೇಕು.
ಭಾರತೀಯ ಪ್ರಜೆಯು ಪಿಪಿಎಫ್ ಖಾತೆಯನ್ನು ತೆರೆಯಬಹುದಾಗಿದೆ. ಯಾವುದೇ ಎನ್.ಆರ್.ಐ ಅಥವಾ HUF ಪಿಪಿಎಫ್ ಖಾತೆಯನ್ನು ತೆರೆಯಲು ಇಚ್ಚಿಸುವವರು ಆ ಬಳಿಕ ಖಾತೆಯನ್ನು ತೆರೆಯಲು ಸಾಧ್ಯವಾಗುವುದಿಲ್ಲ. ಇದರೊಂದಿಗೆ ಮಕ್ಕಳ ಹೆಸರಿನಲ್ಲಿ ಪಿಪಿಎಫ್ ಖಾತೆ ತೆರೆಯುವಾಗ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಪಿಪಿಎಫ್ ಖಾತೆ ತೆರೆಯುವ ವಿಧಾನ:ಮಕ್ಕಳ ಹೆಸರಿನಲ್ಲಿ ಪಿಪಿಎಫ್ ಖಾತೆಯನ್ನು ಪೋಷಕರು ತೆರೆಯುವಂತಿಲ್ಲ. ಅಂದರೆ, ಅಜ್ಜಿಯರು ತಮ್ಮ ಮೊಮ್ಮಕ್ಕಳ ಹೆಸರಿನಲ್ಲಿ ಪಿಪಿಎಫ್ ಖಾತೆ ತೆರೆಯಲು ಸಾಧ್ಯವಿಲ್ಲ. ಆದರೆ ಈ ಮೊತ್ತವನ್ನು ಪೋಷಕರು/ಪಾಲಕರಿಗೆ ನೀಡಿದರೆ, ಅವನು/ಅವಳು ತನ್ನ ಅಪ್ರಾಪ್ತ ಮಗುವಿನ ಹೆಸರಿನಲ್ಲಿ ಖಾತೆಯನ್ನು ತೆರೆದು ನಿರ್ವಹಿಸಬಹುದಾಗಿದೆ.
ಹೀಗಾಗಿ, ಪಿಪಿಎಫ್ ಖಾತೆಯನ್ನು ತೆರೆಯುವ ವೇಳೆ ಈ ವಿಚಾರ ಗಮನದಲ್ಲಿ ಇಟ್ಟುಕೊಳ್ಳಬೇಕು. ಒಂದು ವೇಳೆ ಅಪ್ರಾಪ್ತ ಮಗುವಿನ ಪೋಷಕರು ಇಬ್ಬರೂ ತೀರಿಕೊಂಡರೆ ಆಗ, ಅಜ್ಜಿಯರು ಅಪ್ರಾಪ್ತ ವಯಸ್ಸಿನ ಮಗುವಿಗೆ ಪಿಪಿಎಫ್ ಖಾತೆಯನ್ನು ತೆರೆಯುವ ಜೊತೆಗೆ ನಿರ್ವಹಣೆ ಮಾಡಬಹುದು.
ಕೇಂದ್ರ ಸರ್ಕಾರ ಸಾರ್ವಜನಿಕ ಭವಿಷ್ಯ ನಿಧಿ ಅಥವಾ ಪಿಪಿಎಫ್ ಯೋಜನೆಯನ್ನು ಮುನ್ನಡೆಸುತ್ತಿದ್ದು, ಕೇಂದ್ರ ಸರ್ಕಾರ ನಡೆಸುತ್ತಿರುವ ಈ ಯೋಜನೆಯಲ್ಲಿ 15 ವರ್ಷಗಳವರೆಗೆ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವಾಗ, ಪಿಪಿಎಫ್ ಖಾತೆಯು 15 ವರ್ಷಗಳ ಬಳಿಕ ಮುಕ್ತಾಯವಾಗಲಿದೆ. ಇದರ ಜೊತೆಗೆ ಈ ಯೋಜನೆಯನ್ನು 15 ವರ್ಷಗಳ ಬಳಿಕವೂ ಕೂಡ ಮುಂದುವರೆಸಬೇಕಾದಲ್ಲಿ ಪಿಪಿಎಫ್ ಖಾತೆಯನ್ನು ತಲಾ ಐದು ವರ್ಷಗಳವರೆಗೆ ವಿಸ್ತರಣೆ ಮಾಡಬಹುದು.