ESIC Recruitment 2023​: ನೌಕರರ ರಾಜ್ಯ ವಿಮಾ ನಿಗಮದಲ್ಲಿ 6400 ಹುದ್ದೆಗಳು ಖಾಲಿ, ಹೆಚ್ಚಿನ ಮಾಹಿತಿ ಇಲ್ಲಿದೆ

ಉದ್ಯೋಗ ಅರಸುತ್ತಿರುವ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ಕಾದಿದೆ. ಹೌದು!!!. ESIC Recruitment 2023​: ನೌಕರರ ರಾಜ್ಯ ವಿಮಾ ನಿಗಮದಲ್ಲಿ 6400 ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ESIC Recruitment 2023: ನೌಕರರ ರಾಜ್ಯ ವಿಮಾ ನಿಗಮ(Employees’ State Insurance Corporation) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಿದೆ. ಉದ್ಯೋಗ(Job) ಹುಡುಕುತ್ತಿರುವ ಉದ್ಯೋಗಾಂಕ್ಷಿಗಳಿಗೆ ಸುವರ್ಣ ಅವಕಾಶವಾಗಲಿದೆ. ಒಟ್ಟು 6400 ಕ್ಕೂ ಹೆಚ್ಚು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಶೀಘ್ರದಲ್ಲೇ ನೋಟಿಫಿಕೇಶನ್ (Notification) ಬಿಡುಗಡೆ ಮಾಡಲಾಗುತ್ತದೆ ಎನ್ನಲಾಗಿದೆ.

ನೌಕಕರ ರಾಜ್ಯ ವಿಮಾ ನಿಗಮದ 6400 ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಚಿಂತನೆ ಇದೆ ಎಂದು ಕಾರ್ಮಿಕ ಸಚಿವ ಭೂಪೇಂದ್ರ ಯಾದವ್ ಶನಿವಾರ ಮಾಹಿತಿ ನೀಡಿದ್ದು, 2000ಕ್ಕೂ ಹೆಚ್ಚು ವೈದ್ಯರು ಮತ್ತು ಬೋಧಕ ಸಿಬ್ಬಂದಿಯ ಹುದ್ದೆಗಳು ಖಾಲಿಯಿವೆ.

ಸಂಸ್ಥೆ – ನೌಕರರ ರಾಜ್ಯ ವಿಮಾ ನಿಗಮ

ಹುದ್ದೆ – ಡಾಕ್ಟರ್ಸ್, ಬೋಧಕ ಸಿಬ್ಬಂದಿ

ಒಟ್ಟು -ಹುದ್ದೆ 6400

ಉದ್ಯೋಗದ ಸ್ಥಳ- ಭಾರತ ಸದ್ಯದಲ್ಲೇ ನೋಟಿಫಿಕೇಶನ್ ಬಿಡುಗಡೆ ಆಗಲಿದ್ದು, ದಿನಾಂಕ ಇನ್ನೂ ನಿಗದಿಯಾಗಿಲ್ಲ ಎನ್ನಲಾಗಿದೆ.

ESIC ಯೋಜನೆಯಲ್ಲಿ ಸದಸ್ಯರ ಸಂಖ್ಯೆ ವೇಗವಾಗಿ ಏರಿಕೆ ಕಂಡು ಬರುತ್ತಿದೆ. ಅಕ್ಟೋಬರ್‌ನಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ಸುಮಾರು 11.82 ಲಕ್ಷ ಹೊಸ ಸದಸ್ಯರು ಸೇರ್ಪಡೆಯಾಗಿದ್ದಾರೆ.

ರಾಷ್ಟ್ರೀಯ ಅಂಕಿಅಂಶ ಕಚೇರಿ ಬಿಡುಗಡೆ ಮಾಡಿರುವ ಅಂಕಿಅಂಶಗಳಲ್ಲಿ ಈ ಮಾಹಿತಿ ನೀಡಲಾಗಿದ್ದು, ವರದಿಯ ಅನುಸಾರ, 2020-21ರಲ್ಲಿ 1.15 ಕೋಟಿ, 2019-20ರಲ್ಲಿ 1.51 ಕೋಟಿ ಮತ್ತು 2018-19ರಲ್ಲಿ 1.49 ಕೋಟಿಗೆ ಹೋಲಿಸಿದರೆ ESIC ಯಲ್ಲಿ ಒಟ್ಟು ಹೊಸ ದಾಖಲಾತಿಗಳ ಸಂಖ್ಯೆ 2021-22ರ ಆರ್ಥಿಕ ವರ್ಷದಲ್ಲಿ 1.49 ಕೋಟಿಗೆ ಏರಿಕೆಯಾಗಿದೆ.

ನೌಕರರ ರಾಜ್ಯ ವಿಮಾ ನಿಗಮ 6400 ಹುದ್ದೆಗಳನ್ನು ಭರ್ತಿ ಮಾಡಲು ಯೋಜನೆ ರೂಪಿಸಿದೆ ಎಂದು ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಯಾದವ್ ಅವರು ಮಾಹಿತಿ ನೀಡಿದ್ದಾರೆ. ಇದರಲ್ಲಿ 2000 ಕ್ಕೂ ಹೆಚ್ಚು ವೈದ್ಯರು ಮತ್ತು ಬೋಧಕ ಸಿಬ್ಬಂದಿಯನ್ನು ಭರ್ತಿ ಮಾಡಲಾಗುತ್ತದೆ. ಕೇಂದ್ರ ಸರ್ಕಾರದ ಶಕ್ತಿ ಉಪಕ್ರಮದ ಅಡಿಯಲ್ಲಿ ದೇಶಾದ್ಯಂತ 100 ಹಾಸಿಗೆಗಳ 23 ಹೊಸ ಆಸ್ಪತ್ರೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಯಾದವ್ ಈ ವೇಳೆ ಮಾಹಿತಿ ನೀಡಿದ್ದಾರೆ.

ಅಷ್ಟೆ ಅಲ್ಲದೆ, ಅರೆ ವೈದ್ಯಕೀಯ(ಪ್ಯಾರಾಮೆಡಿಕಲ್) ಉದ್ಯೋಗಗಳಿಗಾಗಿ ಕೌಶಲ್ಯ ಆಧಾರಿತ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಲು ESIC ಕೆಲಸ ಮಾಡುತ್ತಿದೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದ್ದು,10 ವಿಷಯಗಳಲ್ಲಿ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಲಾಗಿದೆ ಎಂದು ಕೂಡ ತಿಳಿಸಿದ್ದಾರ

Leave A Reply

Your email address will not be published.