Home Business ರಜಾ ದಿನ ಸಹೋದ್ಯೋಗಿಗಳಿಗೇನಾದರೂ, ಈ ರೀತಿ ತೊಂದರೆ ಕೊಟ್ಟರೆ ಅಷ್ಟೇ…ಭಾರೀ ದಂಡ ಕಟ್ಟಲು ರೆಡಿಯಾಗಿ!

ರಜಾ ದಿನ ಸಹೋದ್ಯೋಗಿಗಳಿಗೇನಾದರೂ, ಈ ರೀತಿ ತೊಂದರೆ ಕೊಟ್ಟರೆ ಅಷ್ಟೇ…ಭಾರೀ ದಂಡ ಕಟ್ಟಲು ರೆಡಿಯಾಗಿ!

Hindu neighbor gifts plot of land

Hindu neighbour gifts land to Muslim journalist

ಕೆಲಸದ ಒತ್ತಡದಲ್ಲಿ ಕೊಂಚ ಬಿಡುವು ಸಿಕ್ಕಿದರೆ ಸಾಕಪ್ಪಾ!!! ಎಂದುಕೊಳ್ಳವವರೆ ಹೆಚ್ಚು. ಇತ್ತೀಚಿನ ದಿನಗಳಲ್ಲಿ ದಿನದ 24 ಗಂಟೆಯಲ್ಲಿ ಹೆಚ್ಚಿನ ಅವಧಿ ಆಫೀಸ್, ಕೆಲಸ ಎಂದು ಮನೆಯ ಕಡೆ ಹೆಚ್ಚು ಗಮನ ಕೊಡಲಾಗದೆ, ಮನೆಯವರೊಂದಿಗೆ ಕಾಲ ಕಳೆಯಲಾಗದೆ ಪರಿತಪಿಸುವಂತಾಗಿದೆ. ಆದರೆ, ಇದೀಗ, ನೌಕರರಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ.

ಉದ್ಯೋಗಿಗೆ ವಿಶೇಷವಾಗಿ ಅವರು ರಜೆಯಲ್ಲಿರುವಾಗ ಅಗತ್ಯ ಕರೆಗಳು, ಸಂದೇಶಗಳು ಅಥವಾ ಇಮೇಲ್‌ಗಳನ್ನು ರವಾನೆ ಮಾಡಿದಾಗ ಕಿರಿಕಿರಿ ಆಗೋದು ಸಹಜ. ಹೀಗಾಗಿ, ರಜಾದಿನವನ್ನು ಸರಿಯಾಗಿ ಕಳೆಯಲು ಸಾಧ್ಯವಾಗದೇ ಇರಬಹುದು.ಈ ಸಮಸ್ಯೆಯನ್ನು ಬಗೆಹರಿಸಲು ಭಾರತೀಯ ಕಂಪೆನಿಯೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.

ಈ ಮಹತ್ವದ ಸಮಸ್ಯೆಯನ್ನು ಪರಿಗಣಿಸಿದ ಭಾರತೀಯ ಕಂಪೆನಿಯೊಂದು ಅದರ ಸಿಬ್ಬಂದಿ ರಜೆಯಲ್ಲಿದ್ದಾಗ ಈ ರೀತಿ ಆಗದಂತೆ ನಿರ್ಧಾರವೊಂದನ್ನು ಕೈಗೊಂಡಿದೆ. ರಜಾದಿನಗಳಲ್ಲಿ ಉದ್ಯೋಗಿಗಳಿಗೆ ಯಾವುದೇ ಕೆಲಸಕ್ಕೆ ಸಂಬಂಧಿಸಿದ ಸಂದೇಶವನ್ನು ರವಾನೆ ಮಾಡಿದರೆ ಉದ್ಯೋಗಿಗಳಿಗೆ ರೂ 1 ಲಕ್ಷ ದಂಡವನ್ನು ವಿಧಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಇದರ ಜೊತೆಗೆ ತನ್ನ ಉದ್ಯೋಗಿಗಳಿಗಾಗಿ ಹೊಸ ನೀತಿಯನ್ನು ಜಾರಿಗೆ ತಂದಿದ್ದು, ಉದ್ಯೋಗಿಗಳು ರಜೆಯಲ್ಲಿರುವಾಗ ಇಲ್ಲವೇ ರಜಾದಿನಗಳಲ್ಲಿ ಅವರನ್ನು ಸಂಪರ್ಕಿಸುವುದನ್ನು ನಿಷೇಧಿಸಿದೆ.

ನಿರಂತರ ಕರೆಗಳು, ಸಂದೇಶಗಳು ಮತ್ತು ಮೇಲ್‌ಗಳಿಂದಾಗಿ ರಜಾದಿನಗಳಲ್ಲಿ ಉದ್ಯೋಗಿಗಳು ತಮ್ಮ ಉತ್ತಮ ಸಮಯವನ್ನು ಆನಂದಿಸಲು ಸಾಧ್ಯವಾಗದೆ ಜೊತೆಗೆ ವಿಶ್ರಾಂತಿ ಪಡೆಯಲು ಕೂಡ ಸಾಧ್ಯವಿಲ್ಲ ಎಂಬುದನ್ನು ಮನಗಂಡ ಕಂಪನಿ ಉದ್ಯೋಗಿಗಳಿಗೆ ಆಗುವ ಕಿರಿಕಿರಿ ತಡೆಯಲು ಕಂಪನಿಯು UNPLUG ಎಂಬ ನೀತಿಯನ್ನು ಜಾರಿಗೆ ತಂದಿದೆ.

ಭಾರತೀಯ ಟೆಕ್ ಕಂಪನಿ ” ಡ್ರೀಮ್ 11″ ಕಂಪನಿ ಉದ್ಯೋಗಿಗಳಿಗಾಗಿ ಹೊಸ ನಿಯಮ ಜಾರಿಗೆ ತಂದಿದ್ದು, ಈ ಕಂಪನಿಯು ಇಮೇಲ್, ಸ್ಲಾಕ್ ಸಂದೇಶ ಇಲ್ಲವೇ WhatApp ಚಾಟ್ ಕಳುಹಿಸಲು ಅದರ ನಿರ್ವಹಣೆಯನ್ನು ಸ್ಪಷ್ಟವಾಗಿ ನಿಷೇಧ ಹೇರಿದೆ.ಡ್ರೀಮ್ 11 ಸಂಸ್ಥಾಪಕರಾದ ಹರ್ಷ್ ಜೈನ್ ಮತ್ತು ಭವಿತ್ ಸೇಠ್ ಅವರು “UNPLUG” ಅವಧಿಯಲ್ಲಿ ಇನ್ನೊಬ್ಬ ಉದ್ಯೋಗಿಯನ್ನು ಸಂಪರ್ಕಿಸುವ ಯಾವುದೇ ಉದ್ಯೋಗಿ ಸುಮಾರು ರೂ 1 ಲಕ್ಷ ದಂಡ ಕಟ್ಟಬೇಕಾಗುತ್ತದೆ ಎಂದು ವರದಿಯಲ್ಲಿ ಮಾಹಿತಿ ನೀಡಿದ್ದಾರೆ.

ಈ 1 ಲಕ್ಷ ದಂಡವು ಈ ಸ್ಪೋರ್ಟ್ಸ್ ಟೆಕ್ನಾಲಜಿ ಯುನಿಕಾರ್ನ್‌ನಲ್ಲಿರುವ ಪ್ರತಿಯೊಬ್ಬ ನೌಕರನಿಗೂ ಕೂಡ ಅನ್ವಯವಾಗಲಿದೆ. ಅಂದರೆ,b ಉನ್ನತ ಕಾರ್ಯನಿರ್ವಾಹಕರಿಂದ ಹಿಡಿದು ಹೊಸ ನೇಮಕಗೊಂಡವರವರೆಗೆ, ಪ್ರತಿ ವರ್ಷ ಒಂದು ವಾರದವರೆಗೆ ಕಂಪನಿಯ ಸಿಸ್ಟಮ್‌ನಿಂದ ಸೈನ್ ಔಟ್ ಮಾಡಲು ಅನುಮತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಈ ಹೊಸ ನೀತಿಯ ಅಡಿಯಲ್ಲಿ, ಕಂಪನಿಯು ಅನ್‌ಪ್ಲಗ್ ಮಾಡಲು ಬಯಸುವವರು ರಜಾದಿನಗಳಲ್ಲಿ ಅನ್‌ಪ್ಲಗ್ ಆಗಿರಬೇಕೆಂಬ ಅಭಿಲಾಷೆ ಹೊಂದಿದೆ ಎಂದು ಕಂಪೆನಿ ತಿಳಿಸಿದೆ. ಕಂಪನಿಯು ಉದ್ಯೋಗಿಗಳು ತಮ್ಮ ಕುಟುಂಬ, ಸ್ನೇಹಿತರ ಜೊತೆಗೆ ತಮ್ಮ ವೈಯಕ್ತಿಕ ಸಮಯವನ್ನು ವಿನಿಯೋಗಿಸಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಉದ್ಯೋಗಿ ತನ್ನ ಕೆಲಸಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉದ್ಯೋಗಿಯನ್ನು ಸಂಪರ್ಕಿಸಿದ್ದಲ್ಲಿ ಅವನು/ಅವಳು ರೂ 1 ಲಕ್ಷ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಕಂಪನಿ ಹೇಳಿದ್ದು, ಈ ನೀತಿಯು ಹಿರಿಯ ಉದ್ಯೋಗಿಗಳು ಸೇರಿದಂತೆ ಎಲ್ಲರಿಗೂ ಅನ್ವಯವಾಗುತ್ತದೆ.