ಮುಕೇಶ್ ಅಂಬಾನಿ ನೀಡಿದ್ರು ತನ್ನ ಜಿಯೋ ಗ್ರಾಹಕರಿಗೆ ಸೂಪರ್ ಸುದ್ದಿ!!!
ಭಾರತದ ನಂಬರ್ ಒನ್ ಟೆಲಿಕಾಂ ಕಂಪನಿ ಜಿಯೋ ರಿಲಯನ್ಸ್ ಬಗ್ಗೆ ಗೊತ್ತೇ ಇದೆ. ಎಲ್ಲಾ ಕಡೆ ತನ್ನ ನೆಟ್ವರ್ಕ್ ಅನ್ನು ಪಸರಿಸಿರುವ ಜಿಯೋ, ಜನರ ಮನಸ್ಸು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಜಿಯೋ ಈಗಾಗಲೇ 50 ಕ್ಕೂ ಹೆಚ್ಚು ನಗರದಲ್ಲಿ 5ಜಿ ಸೇವೆಯನ್ನು ಪ್ರಾರಂಭಿಸಿದೆ. ಇಲ್ಲಿ ಖುಷಿಯ ವಿಚಾರ ಏನಪ್ಪಾ ಅಂದ್ರೆ, ದೇಶಾದ್ಯಂತ ಜಿಯೋ ಗ್ರಾಹಕರಿಗೆ ಮುಂದಿನ ವರ್ಷ 5ಜಿ ಸೇವೆಯ ಲಾಭ ಸಿಗಲಿದೆ ಮತ್ತು ಕಂಪನಿ ಪ್ಯಾನ್ ಇಂಡಿಯಾ ರೊಲ್ ಔಟ್ ಗುರಿಯನ್ನು ಸಾಧಿಸಲಿದೆ.
ದೇಶಾದ್ಯಂತ 5ಜಿ ಸೇವೆಯ ರೊಲ್ ಔಟ್ ಪ್ರಕ್ರಿಯೆ ಮುಂದಿನ ವರ್ಷ ಪೂರ್ಣಗೊಳ್ಳಲಿದೆ ಎಂಬ ಮಾಹಿತಿಯನ್ನು ರಿಲಯನ್ಸ್ ಇಂಡಸ್ಟ್ರಿ ಮುಖ್ಯಸ್ಥ ಮುಕೇಶ ಅಂಬಾನಿ ನೀಡಿದ್ದಾರೆ. ಕಂಪನಿಯ ಕುಟುಂಬ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿರುವ ಅವರು, ‘ ಜಿಯೋ ಕಂಪನಿಯ 5ಜಿ ರೊಲ್ ಔಟ್ ವರ್ಷ 2023 ರಲ್ಲಿ ಪೂರ್ಣಗೊಳ್ಳಲಿದೆ ಮತ್ತು ಡಿಜಿಟಲ್ ಕನೆಕ್ಟಿವಿಟಿ ಉದ್ಯಮದಲ್ಲಿ ನಂಬರ್ 1 ಪಟ್ಟ ಸಾಧನೆಯ ಪ್ರಯುಕ್ತ ಇಡೀ ಜಿಯೋ ತಂಡಕ್ಕೆ ನನ್ನ ಅಭಿನಂದನೆಗಳು’ ಎಂದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಕೇಶ್ ಅಂಬಾನಿ, 5ಜಿ ಸಂಪರ್ಕಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಕಂಪನಿ ತನ್ನ 5ಜಿ ಸೇವೆಯನ್ನು ಮಾತ್ರ ಒದಗಿಸುವುದಲ್ಲದೆ, ನಗರ ಹಾಗೂ ಗ್ರಾಮೀಣ ಕ್ಷೇತ್ರಗಳ ನಡುವಿನ ಅಂತರವನ್ನು ತೊಡೆದುಹಾಕಲಿದೆ ಹಾಗೂ ಎಲ್ಲಾ ಬಳಕೆದಾರರಿಗೆ ಒಂದೇ ರೀತಿಯ ಇಂಟರ್ನೆಟ್ ಸೇವೆಗಳನ್ನು ನೀಡಲಿದೆ. 5ಜಿ ಇಂಟರ್ನೆಟ್ ಸೇವೆಯ ಸಹಾಯದಿಂದ ಎಲ್ಲಾ ಬಳಕೆದಾರರಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಆರೋಗ್ಯ ಸೇವೆಗಳು ಹಾಗೂ ಇತರ ಸೌಕರ್ಯಗಳು ಸಿಗಲಿವೆ.
ಮುಂದಿನ ವರ್ಷ ಪ್ರತಿ ಹಳ್ಳಿಗಳ ವರೆಗೆ 5ಜಿ ಕನೆಕ್ಟಿವಿಟಿ ತಲುಪಿಸಲಾಗುವುದು ಹಾಗೂ ದೀರ್ಘಾವಧಿಯಿಂದ ನಡೆದುಕೊಂಡು ಬಂದ ನಗರ ಹಾಗೂ ಗ್ರಾಮೀಣ ಅಂತರವನ್ನು ದೂರಮಾಡಲಾಗುವುದು, ಇಂತಹ ಅವಕಾಶ ಜಿಯೋ ಕಂಪನಿಯ ಬಳಿ ಇದ್ದೂ, ಎಲ್ಲಾ ನಾಗರಿಕರಿಗೆ ಯುನಿಕ್ ಡಿಜಿಟಲ್ ಉತ್ಪನ್ನಗಳು ಹಾಗೂ ಸೌಕರ್ಯಗಳು ಇರಲಿವೆ. ಅವುಗಳನ್ನು ಭಾರತ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ಭಾಗವನ್ನಾಗಿಸಲಾಗುವುದು ಎಂದು ಮುಕೇಶ್ ಅಂಬಾನಿ ಪ್ರಮಾಣ ಮಾಡಿದರು.
ರಿಲಯನ್ಸ್ ಜಿಯೋ ವತಿಯಿಂದ ಪ್ರಸ್ತುತ 5ಜಿ ಇಂಟರ್ನೆಟ್ ಸ್ಪೀಡ್ ಲಾಭವನ್ನು ಪಡೆದುಕೊಳ್ಳುತ್ತಿರುವ ನಗರಗಳಲ್ಲಿ ಗುರುಗ್ರಾಮ್, ನೋಯ್ಡಾ, ಗಾಜಿಯಾಬಾದ್, ಫರೀದಾಬಾದ್, ದೆಹಲಿ ಎನ್ಸಿಆರ್ ಜೊತೆಗೆ ಮುಂಬೈ, ಕೋಲ್ಕತ್ತಾ, ವಾರಣಾಸಿ, ಚೆನ್ನೈ, ಹೈದರಾಬಾದ್, ಬೆಂಗಳೂರು ಹಾಗೂ ನಾಥದ್ವಾರಾ ಶಾಮೀಲಾಗಿವೆ. ಇತ್ತೀಚೆಗಷ್ಟೇ ಕಂಪನಿ ಲಖನೌಮ್ ಮೈಸೂರು ಹಾಗೂ ತ್ರಿವೆಂದ್ರಂ ಸೇರಿದಂತೆ 11 ಹೊಸ ನಗರಗಳಲ್ಲಿ ತನ್ನ 5ಜಿ ಸೇವೆಯನ್ನು ಬಿಡುಗಡೆಗೊಳಿಸಿದೆ.