Apple AirPods Pro: ಫ್ಲಿಪ್‌ಕಾರ್ಟ್‌ನಿಂದ ಭರ್ಜರಿ ಆಫರ್‌ | 1 ಸಾವಿರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಖರೀದಿಸಿ ಆ್ಯಪಲ್​ ಏರ್​ಪೋಡ್ಸ್​!

ಪ್ಲಿಪ್ ಕಾರ್ಟ್ ಮೂಲಕ ನೀವು ಹಲವಾರು ರೀತಿಯ ಲಾಭ ಪಡೆಯುವುದರ ಜೊತೆಗೆ ವಿನಿಮಯ ಕೊಡುಗೆ ಲಭ್ಯವಿದೆ. ಸದ್ಯ ಇದೀಗ ಆ್ಯಪಲ್ ಏರ್‌ಪೋಡ್​ಗಳನ್ನು ಖರೀದಿಸಲು ಬಯಸುವವರಿಗೆ ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ನ ‘ವರ್ಷಾಂತ್ಯ ಮಾರಾಟ’ ಸೇಲ್​ನಲ್ಲಿ ಭರ್ಜರಿ ರಿಯಾಯಿತಿಯೊಂದಿಗೆ ಖರೀದಿಸಬಹುದಾಗಿದೆ. ಈ ವಿಶೇಷ ಸೇಲ್​ ಎರಡು ದಿನಗಳಲ್ಲಿ ಕೊನೆಗೊಳ್ಳುತ್ತದೆ.

ಆ್ಯಪಲ್​ ಏರ್​ಪೋಡ್​​ಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಜನಪ್ರಿಯ ಟಿಡಬ್ಲ್ಯೂಎಸ್​ ಇಯರ್‌ಬಡ್‌ಗಳಲ್ಲಿ ಒಂದಾಗಿದೆ. ಈ ವೈರ್‌ಲೆಸ್ ಬ್ಲೂಟೂತ್ ಇಯರ್‌ಬಡ್‌ಗಳನ್ನು 2016 ರಲ್ಲಿ ಐಫೋನ್ 7 ಜೊತೆಗೆ ಪ್ರಾರಂಭಿಸಲಾಯಿತು. ವೈರ್‌ಲೆಸ್ ಚಾರ್ಜಿಂಗ್ ಮತ್ತು ಅತ್ಯುತ್ತಮ ಬ್ಯಾಟರಿಯಂತಹ ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಆ್ಯಪಲ್ ಕೆಲವು ವರ್ಷಗಳ ಹಿಂದೆ ಏರ್‌ಪೋಡ್​​ಗಳ ಎರಡು ಮಾದರಿಗಳನ್ನು ಬಿಡುಗಡೆ ಮಾಡಿದೆ.

ಆ್ಯಪಲ್ ಏರ್​ಪೋಡ್ಸ್​ ಪ್ರೋ ನಲ್ಲಿ ಇದೀಗ ಫ್ಲಿಪ್​ಕಾರ್ಟ್​ ನಲ್ಲಿ ಕೇವಲ ರೂ.1490 ಕ್ಕೆ ಪಡೆಯಬಹುದು. ಆ್ಯಪಲ್ ಏರ್​ಪೋಡ್ಸ್​ ಅನ್ನು ಫ್ಲಿಪ್‌ಕಾರ್ಟ್‌ನ ಇಯರ್ ಎಂಡ್ ಸೇಲ್‌ನಲ್ಲಿ 20,990 ರೂ.ಗೆ ಪಟ್ಟಿ ಮಾಡಲಾಗಿದೆ. ಆದರೆ, ಕಂಪನಿಯು ಈ ಬಗ್ಗೆ ವಿವಿಧ ಕೊಡುಗೆಗಳನ್ನು ಘೋಷಿಸಿದೆ.

ಸದ್ಯ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್ಐ ವಹಿವಾಟು, ಬ್ಯಾಂಕ್ ಆಫ್ ಬರೋಡಾ ಕಾರ್ಡ್ ವಹಿವಾಟಿನ ಮೇಲೆ 10% ರಿಯಾಯಿತಿ ಲಭ್ಯವಿದೆ. ಈ ರಿಯಾಯಿತಿಯಲ್ಲಿ ಆ್ಯಪಲ್​ ಏರ್​​ಪೋಡ್ಸ್​ ಪ್ರೋ ನ ಬೆಲೆಯನ್ನು ರೂ.2,000 ರಷ್ಟು ಕಡಿಮೆ ಮಾಡುತ್ತದೆ.

ಜೊತೆಗೆ ಇದರ ಮೇಲೆ ವಿನಿಮಯ ಕೊಡುಗೆಯೂ ಲಭ್ಯ ಇದೆ. ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಂಡರೆ ಮತ್ತು ಈ ಏರ್‌ಪೋಡ್​​ಗಳನ್ನು ಖರೀದಿಸಿದರೆ, ನೀವು ಸುಮಾರು ರೂ.17,500 ರಿಯಾಯಿತಿಯನ್ನು ಪಡೆಯಬಹುದು. ಇದರೊಂದಿಗೆ, ನೀವು ಅಂತಿಮವಾಗಿ ಈ ಏರ್​​ಪೋಡ್ಸ್​ ಅನ್ನು ಕೇವಲ ರೂ.1490 ಕ್ಕೆ ಪಡೆಯಬಹುದಾಗಿದೆ.

ಅದಲ್ಲದೆ ಇನ್-ಇಯರ್ TWS ಇಯರ್‌ಬಡ್‌ಗಳು ನಾಯ್ಸ್​ ಕ್ಯಾನ್ಸಲಿಂಗ್​ ಫೀಚರ್ಸ್​ ಅನ್ನು ನೀಡುತ್ತದೆ. ಇತ್ತೀಚೆಗೆ ಕಂಪನಿಯು ಆ್ಯಪಲ್​ ಏರ್​ಪೋಡ್ಸ್​ ಪ್ರೋ 2 ಅನ್ನು ಸಹ ಬಿಡುಗಡೆ ಮಾಡಿದೆ. ಆ್ಯಪಲ್​ ಈ ವರ್ಷದ ಆರಂಭದಲ್ಲಿ ಆರಂಭಿಸಿದ ಏರ್​​ಪೋಡ್ಸ್​ನಲ್ಲಿ ಮ್ಯಾಗ್​ಸೇಫ್​ ಚಾರ್ಜಿಂಗ್ ಫೀಚರ್ಸ್​ ಅನ್ನು ಅಳವಡಿಸಿದೆ.

ಫ್ಲಿಪ್‌ಕಾರ್ಟ್ ಪ್ರಸ್ತುತ ವರ್ಷಾಂತ್ಯದ ಮಾರಾಟದಲ್ಲಿ ಆ್ಯಪಲ್​ ಏರ್​​ಪೋಡ್ಸ್​ ಪ್ರೋ ಅನ್ನು ರೂ.19,500 ರಷ್ಟು ರಿಯಾಯಿತಿಯನ್ನು ನೀಡುತ್ತಿದೆ. ಇದರೊಂದಿಗೆ, ನೀವು ಈ ಇಯರ್ ಬಡ್ಸ್ ಅನ್ನು ಕೇವಲ ರೂ.1,490 ಕ್ಕೆ ಖರೀದಿಸಬಹುದು. ಆದರೆ ಈ ಕೊಡುಗೆ ಸೀಮಿತ ಅವಧಿಗೆ ಮಾತ್ರವಾಗಿರುತ್ತದೆ.

ಹೌದು ಆ್ಯಪಲ್ ಕಂಪನಿಯ ಉತ್ಪನ್ನಗಳು ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿವೆ. ಗುಣಮಟ್ಟ ಮತ್ತು ಫೀಚರ್ಸ್​​ಗಳ ವಿಷಯದಲ್ಲಿ ಯಾವುದೇ ರಾಜಿಯಿಲ್ಲದೆ ಆ್ಯಪಲ್ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ . ಆ್ಯಪಲ್ ಏರ್‌ಪೋಡ್​ಗಳನ್ನು ಖರೀದಿಸಲು ಬಯಸುವವರಿಗೆ ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ನ ‘ವರ್ಷಾಂತ್ಯ ಮಾರಾಟ’ ಸೇಲ್​ನಲ್ಲಿ ಭರ್ಜರಿ ರಿಯಾಯಿತಿಯೊಂದಿಗೆ ಖರೀದಿಸಬಹುದಾಗಿದೆ.

Leave A Reply

Your email address will not be published.