ಪುಟ್ಬಾಲ್ ಲೋಕದ ದಂತಕಥೆ ಪೀಲೆ ಇನ್ನಿಲ್ಲ

Share the Article

ಫುಟ್ಬಾಲ್ ಲೋಕದ ಆಟಗಾರ ಬ್ರೆಜಿಲ್‌ನ ಪೀಲೆ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ತಮ್ಮ 82ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದು ಈ ಸುದ್ದಿಯನ್ನು ಅವರ ಪುತ್ರಿ ಗುರುವಾರ ತಡರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಖಚಿತಪಡಿಸಿದ್ದಾರೆ.

2021ರಲ್ಲಿ ದೊಡ್ಡ ಕರುಳಿನ ಕ್ಯಾನ್ಸರ್‌ಗೆ ತುತ್ತಾಗಿದ್ದ ಪೀಲೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಂಡಿದ್ದರು. ಅದಾದ ಬಳಿಕ ನಿರಂತರವಾಗಿ ಚಿಕಿತ್ಸೆಗ ಪಡೆದುಕೊಳ್ಳುತ್ತಿದ್ದರು. ಇನ್ನು ಇತ್ತೀಚೆಗೆ ಅವರಿಗೆ ಕೋವಿಡ್ ಸೋಂಕು ಕೂಡ ತಗುಲಿತ್ತು. ಹೀಗಾಗಿ ಆರೋಗ್ಯ ಕ್ಷೀಣಿಸುತ್ತಲೇ ಸಾಗಿತ್ತು. ಕ್ಯಾನ್ಸರ್‌ಗೆ ಪಡೆಯುತ್ತಿದ್ದ ಕಿಮೋ ಥೆರಪಿ ಚಿಕಿತ್ಸೆಗೆ ಪೀಲೆ ದೇಹ ಸ್ಪಂದಿಸುವುದು ನಿಲ್ಲಿಸಿದ ಬಳಿಕ ವಿಧಿವಶವಾಗಿದ್ದಾರೆ.

Leave A Reply