

ಪ್ರಸ್ತುತ ದೇಶದಲ್ಲಿ ಹಲವಾರು ಟೆಲಿಕಾಂ ಕಂಪನಿಗಳಿವೆ. ಆದರೆ ನೀವು ಬಿಎಸ್ಎನ್ಎಲ್ ನ್ನು ಬಳಸುತ್ತಿದ್ದರೆ ನಿಮಗೆ ಬಂಪರ್ ಆಫರ್ ನೀಡಲಾಗಿದೆ. ಹೌದು ಬಿಎಸ್ಎನ್ಎಲ್ ಒಂದು ಸರ್ಕಾರಿ ಟೆಲಿಕಾಂ ಕಂಪನಿಯಾಗಿದ್ದು ದೇಶದಲ್ಲಿ ಸಾಕಷ್ಟು ದೊಡ್ಡ ಪ್ರೈವೇಟ್ ಟೆಲಿಕಾಂ ಕಂಪನಿಗಳಿಗೆ ಪೈಪೋಟಿಯನ್ನು ನೀಡುತ್ತಾ ಬಂದಿದೆ.
ಇದೀಗ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ಸ್ ಅನ್ನು ಘೋಷಿಸಿದೆ. ಭಾರತ ಸಂಚಾರ ನಿಗಮ ಲಿಮಿಟೆಡ್ ತನ್ನ ಬ್ರಾಡ್‌ಬ್ಯಾಂಡ್ ಗ್ರಾಹಕರಿಗೆ ಹೊಸ ವರ್ಷದ ಕೊಡುಗೆಯನ್ನು ಘೋಷಿಸಿದೆ. ಈ ಮೂಲಕ ಗ್ರಾಹಕರು ವರ್ಷಕ್ಕೆ ಬರೋಬ್ಬರಿ 1200 ರೂ. ಗಳನ್ನು ಉಳಿಸಬಹುದಾಗಿದೆ.
ಬಿಎಸ್ಎನ್ಎಲ್ ಟೆಲಿಕಾಂ ಕಂಪನಿ ಬಿಡುಗಡೆ ಮಾಡಿರುವ ಈ ವರ್ಷದ ರೀಚಾರ್ಜ್ ಆಫರ್ ಬಿಎಸ್ಎನ್ಎಲ್ ಫೈಬರ್ ಇಂಟರ್ನೆಟ್ ಸೇವೆ ಪಡೆಯುವವರಿಗೆ ಸಂಭಂಧಿಸಿದೆ. ಇದು ಡಿಜಿಟಲ್ ಚಂದಾದಾರಿಕೆ ಲೈನ್ (ಢಿಎಸ್ಎಲ್) ನೆಟ್ವರ್ಕ್ ಅನ್ನು ಹೊಂದಿದವರಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಕಂಪನಿ ತಿಳಿಸಿದೆ.
ಇದುವರೆಗೂ ಹೆಚ್ಚಿನ ಜನರು ಬಿಎಸ್ಎನ್ಎಲ್ನ ಡಿಎಸ್ಎಲ್ ನೆಟ್ವರ್ಕ್ ಸೇವೆಗಳನ್ನೇ ಬಳಸುವ ಚಂದಾದಾರರೂ ಹೆಚ್ಚಾಗಿದ್ದಾರೆ, ಆದರೆ ಬಿಎಸ್ಎನ್ಎಲ್ ಫೈಬರ್ ನೆಟ್ವರ್ಕ್ ಸೇವೆಯನ್ನು ಯಾರೂ ಬಳಸುತ್ತಿಲ್ಲ. ಆದ್ದರಿಂದ ಫೈಬರ್ ನೆಟ್ವರ್ಕ್ ಸೇವೆಗೆ ಚಂದಾದಾರರನ್ನು ಹೆಚ್ಚಿಸುವ ಉದ್ದೇಶದಿಂದ ಈ ರೀತಿಯ ಆಫರ್ಸ್ ಅನ್ನು ಕಂಪನಿ ಘೋಷಿಸಿದೆ ಎಂದು ಮಾಹಿತಿ ನೀಡಲಾಗಿದೆ.
ಇನ್ನುಮುಂದೆ ಡಿಎಸ್ಎಲ್ ಬ್ರಾಡ್ಬ್ಯಾಮಡ್ ಗ್ರಾಹಕರು ಭಾರತ್ ಫೈಬರ್ ಸೇವೆಗಳನ್ನು ಬಳಸಬಹುದು. ಅಂದರೆ ಡಿಎಸ್ಎಲ್ನಿಂದ ಭಾರತ್ ಫೈಬರ್ ಸೇವೆಗೆ ಬದಲಾಯಿಸಿದ ಗ್ರಾಹಕರು ತಿಂಗಳ ಪ್ರತೀ ರೀಚಾರ್ಜ್ನಲ್ಲಿ 6 ತಿಂಗಳವರೆಗೆ 200 ರೂಪಾಯಿ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಈ ಮೂಲಕ ಒಟ್ಟು 1200 ರೂ. ಗಳನ್ನು ಉಳಿಸಬಹುದಾಗಿದೆ.
ಅದಲ್ಲದೆ ಇನ್ನು ಪ್ರತಿ ತಿಂಗಳು 300Mbps ವರೆಗಿನ ಇಂಟರ್ನೆಟ್ ವೇಗ ಮತ್ತು ಓಟಿಟಿ ಪ್ಲಾಟ್ಫಾರ್ಮ್ಗಳ ಪ್ರಯೋಜನ ಪಡೆದುಕೊಳ್ಳಲು ಕೇವಲ 275 ರೂ. ಗಳನ್ನು ಮಾತ್ರ ಪಾವತಿ ಮಾಡಬೇಕಿದೆ. ಇದರಿಂದ ಕಡಿಮೆ ಹಣದಲ್ಲಿ ಹೆಚ್ಚಿನ ಸೌಲಭ್ಯ ಪಡೆದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಅದರಲ್ಲೂ ಫೈಬರ್ ಸೇವೆಗಳ ಬೆಲೆ 275 ರೂ. ಗಳಿಂದಲೂ ಆರಂಭವಾಗುತ್ತವೆ.
ಒಟ್ಟಿನಲ್ಲಿ ಬಿಎಸ್ಎನ್ಎಲ್ ಮಾರುಕಟ್ಟೆಯಲ್ಲಿ ತನ್ನ ನೆಲೆಯನ್ನು ಕಳೆದುಕೊಳ್ಳದಂತೆ ಮತ್ತೇ ತನ್ನ ಅಸ್ತಿತ್ವ ಕಾಪಾಡಿಕೊಳ್ಳಲು ಕಡಿಮೆ ಬೆಲೆಯಲ್ಲಿ ಮತ್ತು ತಮ್ಮ ಉತ್ತಮ ಸೇವೆಯನ್ನು ನೀಡುತ್ತಿದೆ.













