ರೈತರೇ ನಿಮಗೊಂದು ಭರ್ಜರಿ ಸಿಹಿ ಸುದ್ದಿ | ಮಿಸ್ಡ್‌ ಕಾಲ್‌ ನೀಡಿ, ನೇರವಾಗಿ ಹಣ ನಿಮ್ಮ ಖಾತೆ ಸೇರುತ್ತೆ!

‘ರೈತ ದೇಶದ ಬೆನ್ನೆಲುಬು’, ಹಾಗಾಗಿ ರೈತರ ಬೆನ್ನೆಲುಬಾಗಿ ಸರ್ಕಾರವು ನಿಂತಿದೆ. ರೈತರ ಅಭಿವೃದ್ಧಿ ಹಾಗೂ ಏಳಿಗೆಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ರೈತರ ಆದಾಯವನ್ನು ಹೆಚ್ಚಿಸಲು ಸರ್ಕಾರವು ಅನೇಕ ಯೋಜನೆಗಳನ್ನು ನಡೆಸುತ್ತಿದೆ, ಅದರ ಅಡಿಯಲ್ಲಿ ಹಣವನ್ನ ನೇರವಾಗಿ ಅವರ ಖಾತೆಗಳಿಗೆ ವರ್ಗಾಯಿಸಲಾಗುತ್ತಿದೆ. ಇದೀಗ ದೇಶದ ಕೋಟ್ಯಂತರ ರೈತರಿಗೆ ಶುಭ ಸುದ್ದಿಯೊಂದು ಲಭಿಸಿದೆ. ಅದೇನಪ್ಪಾ ಅಂದ್ರೆ ರೈತರು ಒಂದೇ ಒಂದು ಮಿಸ್ಡ್ ಕಾಲ್ ನೀಡಿದ್ರೆ ಸಾಕು, ಹಣ ನೇರವಾಗಿ ನಿಮ್ಮ ಖಾತೆಗೆ ಬೀಳುತ್ತದೆ!!

ಹೌದು, ಇಂತಹ ಒಂದು ಬಂಪರ್ ಯೋಜನೆಯನ್ನು ದೇಶದ ಸರ್ಕಾರಿ ಬ್ಯಾಂಕ್ ಪಿಎನ್’ಬಿ ನೀಡುತ್ತಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಅಧಿಕೃತ ಟ್ವಿಟ್ನಲ್ಲಿ ಮಾಹಿತಿ ನೀಡಿದ್ದು, ರೈತರಿಗೆ ಹಣದ ಅಗತ್ಯವಿದ್ದರೆ, ಈ ಬಗ್ಗೆ ಜನರು ಚಿಂತಿಸಬೇಕಾಗಿಲ್ಲ. ಬದಲಾಗಿ ರೈತರು ಮಿಸ್ಡ್ ಕಾಲ್ ಮಾಡಿದ್ರೆ ಸಾಕು, ನಂತರ ಅವರ ಖಾತೆಗೆ ಹಣ ಬರುತ್ತದೆ. ಈಗ ನಿಮಗೆ ಹಣ ಬೇಕಾದರೆ ಮಿಸ್ಡ್ ಕಾಲ್ ಮಾಡಬೇಕಷ್ಟೆ! ಮಿಸ್ಡ್ ಕಾಲ್ ಮಾಡಲು ಯಾವ ಸಂಖ್ಯೆ ಬಳಸಬೇಕು? ಈ ಯೋಜನೆಯ ಪ್ರಯೊಜನವೇನು ಈ ಎಲ್ಲಾ ಮಾಹಿತಿ ಇಲ್ಲಿದೆ.

ಪಿಎನ್’ಬಿಯಿಂದ ರೈತರಿಗೆ ಕೃಷಿ ಸಾಲ ಸೌಲಭ್ಯವನ್ನು ನೀಡಲಾಗುತ್ತಿದ್ದು, ಇದರಿಂದಾಗಿ ಅನೇಕ ರೈತರ ಆದಾಯವನ್ನು ಹೆಚ್ಚಿಸುವುದರ ಜೊತೆ ಜೊತೆಗೆ ಅವರು ಉತ್ತಮವಾದ ಜೀವನವನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಸಾಲ ಪಡೆಯಲು ನೀವು ಎಸ್ಎಂಎಸ್ ಮೂಲಕ ಅಥವಾ ಮಿಸ್ಡ್ ಕಾಲ್ ನೀಡುವ ಮೂಲಕ ಅಥವಾ ಆನ್ಲೈನ್ ಮುಖಾಂತರವು ಅರ್ಜಿ ಸಲ್ಲಿಸಬಹುದು.

●ಕೃಷಿ ಸಾಲಕ್ಕಾಗಿ, ನೀವು 56070 ಗೆ SMS ಮಾಡಿ ಮತ್ತು ಅದರಲ್ಲಿ LOAN ಎಂದು ಬರೆಯಬೇಕು. ಅಥವಾ ನೀವು 18001805555 ಗೆ ಮಿಸ್ಡ್ ಕಾಲ್ ನೀಡಬಹುದು. ನೀವು ಕಾಲ್ ಸೆಂಟರ್’ನ್ನ 180018022221 ಸಂಪರ್ಕಿಸಬಹುದು.
●ಇದನ್ನು ಹೊರತುಪಡಿಸಿ, ನೀವು PNB one ಅಪ್ಲಿಕೇಶನ್ ಮೂಲಕವೂ ಅರ್ಜಿ ಸಲ್ಲಿಸಬಹುದು.
●ನೀವು ನೆಟ್ ಬ್ಯಾಂಕಿಂಗ್ ವೆಬ್ಸೈಟ್ netpnb.com ಮೂಲಕವೂ ಅರ್ಜಿ ಸಲ್ಲಿಸಬಹುದು. PNB ಯಿಂದ ದೇಶದ ರೈತರಿಗೆ ಅನೇಕ ರೀತಿಯ ಸೌಲಭ್ಯಗಳನ್ನ ನೀಡಲಾಗುತ್ತದೆ. ಇದರಲ್ಲಿ, ನೀವು ಯಾವುದೇ ಷರತ್ತುಗಳಿಲ್ಲದೇ ಬಹಳ ಸುಲಭವಾಗಿ ಸಾಲವನ್ನ ಪಡೆಯುತ್ತೀರಿ. ಇದಕ್ಕಾಗಿ ನೀವು ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು.

Leave A Reply

Your email address will not be published.