Jio True 5G Network: ದೇಶದೆಲ್ಲೆಡೆ ಜಿಯೋ 5ಜಿ ಸೇವೆ | ಈ ಸೇವೆಯನ್ನು ನಿಮ್ಮ ಮೊಬೈಲ್​ನಲ್ಲಿ ಆ್ಯಕ್ಟಿವ್​ ಮಾಡುವ ರೀತಿ ಇಲ್ಲಿದೆ

Share the Article

ದೇಶದ ನಂಬರ್ 1 ಟೆಲಿಕಾಂ ಕಂಪನಿಯಾಗಿರುವ ಜಿಯೋ ಮುಂದಿನ ದಿನಗಳಲ್ಲಿ ದೇಶವನ್ನು ಒಂದು ಡಿಜಿಟಲೈಸ್​ ಮಾಡುವಲ್ಲಿ ಪ್ರಯತ್ನ ಮಾಡುತ್ತಿದೆ. ಇದರ ಜೊತೆಗೆ ತನ್ನ ಟಲಿಕಾಂನಲ್ಲಿ ಹಲವಾರು ಗ್ರಾಹಕರನ್ನು ಹೊಂದಿದ್ದು, ಗ್ರಾಹಕರಿಗಾಗಿ ಹಲವಾರು ಆಫರ್ಸ್​ಗಳನ್ನು ಸಹ ನೀಡುತ್ತದೆ. ಈಗಾಗಲೇ ಭಾರತದ ಹಲವು ನಗರಗಳಲ್ಲಿ 5G ಸೇವೆ ಆರಂಭಗೊಂಡಿದೆ. ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ಜಿಯೋ ಇದೀಗ 2023ರ ಡಿಸೆಂಬರ್​ ಒಳಗೆ ದೇಶದ ಮೂಲೆ ಮೂಲೆಯಲ್ಲೂ 5ಜಿ ನೆಟ್​ವರ್ಕ್​ ಅನ್ನು ಸ್ಥಾಪಿಸುವುದಾಗಿಯೂ ಭರವಸೆ ನೀಡಿದೆ.

ಹೌದು ದೇಶದೆಲ್ಲೆಡೆ ಜಿಯೋ 5ಜಿ ಸೇವೆಯನ್ನು ಪ್ರಾರಂಭಿಸುವ ಯೋಜನೆಯಲ್ಲಿದೆ. ಆದರೆ ಇದೀಗ ಕೆಲವೊಂದು ಮೊಬೈಲ್​ಗಳಲ್ಲಿ ಕೂಡ 5ಜಿ ಸೆಟಪ್​ ಮಾಡುವಂತಹ ಆಯ್ಕೆಯಿದೆ. ಆದರೆ ಇದನ್ನು ಸೆಟ್​ ಹೇಗೆ ಮಾಡಿಕೊಳ್ಳುವುದು ಎಂದು ಹೆಚ್ಚಿನವರಿಗೆ ತಿಳಿದಿಲ್ಲ .

ಈಗಾಗಲೇ ದೇಶದ 11 ಪ್ರದೇಶಗಳಲ್ಲಿ 5ಜಿ ನೆಟ್​ವರ್ಕ್​ ಸೇವೆಯನ್ನು ಆರಂಭಿಸಿದೆ. ಅವುಗಳೆಂದರೆ ದೆಹಲಿ, ಬೆಂಗಳೂರು, ಮುಂಬೈ, ವಾರಣಾಸಿ, ಕೋಲ್ಕತ್ತಾ, ಹೈದರಾಬಾದ್, ಚೆನ್ನೈ, ನಾಥದ್ವಾರ, ಪುಣೆ, ಗುರುಗ್ರಾಮ, ನೋಯ್ಡಾ, ಘಾಜಿಯಾಬಾದ್, ಫರಿದಾಬಾದ್ ಹಾಗೂ ಗುಜರಾತ್‌ನ 33 ಜಿಲ್ಲಾ ಕೇಂದ್ರಗಳಲ್ಲಿ ಸ್ಥಾಪಿಸಲಾಗಿದೆ.

ಇತ್ತೀಚಿಗೆ ನಡೆದ ರಿಲಯನ್ಸ್ ಜಿಯೋ ಟೆಲಿಕಾಂನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ, ಜಿಯೋ, 2022 ರ ಅಂತ್ಯದ ವೇಳೆಗೆ ಭಾರತದ ಪ್ರಮುಖ ನಗರಗಳಲ್ಲಿ 5ಜಿ ನೆಟ್​ವರ್ಕ್​ ಸೇವೆಯನ್ನು ವಿಸ್ತರಿಸುವುದಾಗಿ ಘೋಷಿಸಿತು. ಇದಲ್ಲದೆ, ಡಿಸೆಂಬರ್ 2023 ರ ವೇಳೆಗೆ ಜಿಯೋ ಟ್ರೂ 5ಜಿ ಸೇವೆಯನ್ನು ಪ್ಯಾನ್‌ ಇಂಡಿಯಾ ಕವರೇಜ್ ಮಾಡುವ ಗುರಿಯನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಿದೆ.

ಮೊಬೈಲ್​ನಲ್ಲಿ ಜಿಯೋ 5ಜಿ ನೆಟ್​ವರ್ಕ್​ ಆ್ಯಕ್ಟಿವ್​ ಮಾಡುವ ವಿಧಾನ :

  • ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ‘ಸೆಟ್ಟಿಂಗ್ಸ್’ ಆ್ಯಪ್​ ಓಪನ್​ ಮಾಡಿ.
  • ನಂತರ ಸೆಟ್ಟಿಂಗ್ಸ್​ನಲ್ಲಿ ‘ಮೊಬೈಲ್ ನೆಟ್‌ವರ್ಕ್‌’ ಸೆಲೆಕ್ಟ್​ ಮಾಡಿ.
  • ಈಗ ಜಿಯೋ ಸಿಮ್ ಆಯ್ಕೆ ಮಾಡಿ.
  • ಈಗ ‘ಆದ್ಯತೆಯ ನೆಟ್‌ವರ್ಕ್ ಪ್ರಕಾರ’ ಎಂಬ ಆಯ್ಕೆಯನ್ನು ಟ್ಯಾಪ್ ಮಾಡಿ.
  • ಇದಾದ ನಂತರ ನೀವು 5ಜಿ ನೆಟ್‌ವರ್ಕ್‌ ಅನ್ನು ಅಲ್ಲಿ ಸೆಲೆಕ್ಟ್​ ಮಾಡಬಹುದಾಗಿದೆ.

ಅದಲ್ಲದೆ ಹೊಸ ವರ್ಷದ ಪ್ರಯುಕ್ತ ಜಿಯೋ ಟೆಲಿಕಾಂ 2023 ರೂಪಾಯಿ ಪ್ರೀಪೇಯ್ಡ್‌ ಪ್ಲಾನ್ ಅನ್ನು ಲಾಂಚ್ ಮಾಡಿದೆ. ಈ ಯೋಜನೆಯು ವಾರ್ಷಿಕ ಯೋಜನೆ ಆಗಿದ್ದು, 252 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಯೋಜನೆ ಮೂಲಕ ಪ್ರತಿದಿನ 2.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿದ್ದು, ಒಟ್ಟಾಗಿ ಈ ಯೋಜನೆಯಲ್ಲಿ 630 ಜಿಬಿ ಡೇಟಾ ಸೌಲಭ್ಯವನ್ನು ಪಡೆಯಬಹುದು. ಹಾಗೆಯೇ ಇದರಲ್ಲಿ ಅನ್ಲಿಮಿಟೆಡ್​ ಕಾಲ್​ ಮಾಡುವ ಸೌಲಭ್ಯ, ಪ್ರತಿದಿನ ಉಚಿತವಾಗಿ 100 ಎಸ್ಎಮ್ಎಸ್ ಮಾಡುವ ಪ್ರಯೋಜನ ಸಹ ದೊರೆಯುತ್ತದೆ. ಹೆಚ್ಚುವರಿ ಯಾಗಿ ಜಿಯೋ ಟಿವಿ, ಜಿಯೋ ಸಿನೆಮಾ ಹಾಗೂ ಇತರೆ ಆ್ಯಪ್​ಗಳ ಉಚಿತ ಚಂದಾದಾರಿಕೆ ಕೂಡ ಲಭ್ಯವಿದೆ.

ಜಿಯೋ ಹೊಸವರ್ಷಕ್ಕೆ ಬಿಡುಗಡೆ ಮಾಡಿದ ಯೋಜನೆ ಇದಾಗಿದ್ದು, ಹೀಗೆ 58ಜಿ ವೆಲ್​ಕಂ ಆಫರ್​ ಅನ್ನು ಸಹ ನೀಡಿದೆ. ಈ ಮೂಲಕ ಹೈಸ್ಪೀಡ್​ ಇಂಟರ್​ನೆಟ್​ ಸೇವೆಯನ್ನು ಜಿಯೋ ನೀಡಲಿದೆ.

ಪ್ರಸ್ತುತ ಜೀಯೋ ಮಾನವೀಯತೆಗೆ ಸೇವೆ ಸಲ್ಲಿಸುವ ಮತ್ತು ಭಾರತೀಯರ ಜೀವನದ ಗುಣಮಟ್ಟ ಸುಧಾರಿಸುವ ಕೆಲವು ಇತ್ತೀಚಿನ ತಂತ್ರಜ್ಞಾನಗಳ ನಿಜವಾದ ಸಾಮರ್ಥ್ಯವನ್ನು ಅರಿಯುವುದಕ್ಕೆ ಸಹಾಯ ಮಾಡುತ್ತಿದೆ ಎಂದರೆ ತಪ್ಪಾಗಲಾರದು.

Leave A Reply