COVID: ಹೊಸ ವರ್ಷಾಚರಣೆಗೆ ಸರ್ಕಾರ ಜಾರಿಗೆ ತಂದಿದೆ ಹೊಸ ನಿಯಮ | ಇಲ್ಲಿದೆ ಮಾಹಿತಿ
ರಾಜ್ಯ ಸರ್ಕಾರದಿಂದ ಬೆಂಗಳೂರಿಗೆ ಹೊಸ ಗೈಡ್ ಲೈನ್ಸ್ ರಿಲೀಸ್ ಮಾಡಿದ್ದು, ಇಂದು ಕೋವಿಡ್ ಬಗ್ಗೆ ಕುರಿತು ಸಭೆ ನಡೆಸಲಾಗಿದ್ದು ಈ ಸಭೆಯಲ್ಲಿ ಮಾರ್ಗಸೂಚಿ ಬಿಡುಗಡೆಗೊಳಿಸಲಾಗಿದೆ.
ಕೋರೋನಾ ಮಹಾಮಾರಿಯ ಅಟ್ಟಹಾಸ ಕೊಂಚ ತಗ್ಗಿದೆ ಎಂಬ ನಿಟ್ಟುಸಿರು ಬಿಡುತ್ತಿದ್ದ ಜನತೆಗೆ ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಈ ಹಿಂದೆ ಅನೇಕ ಮಂದಿಯನ್ನು ಬಲಿ ಪಡೆದುಕೊಂಡ ಮಹಾಮಾರಿ ಕೋವಿಡ್ ಇದೀಗ, ಜಾಗತಿಕ ಮಟ್ಟದಲ್ಲಿ ಮಹಾಮಾರಿ ಹರಡುತ್ತಿದ್ದು, ಅದರ ವೇಗವನ್ನು ಏರಿಸಿಕೊಳ್ಳುತ್ತಿದೆ. ಈ ಹಿನ್ನೆಲೆ ಕರ್ನಾಟಕ ಸರ್ಕಾರ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಸಾರ್ವಜನಿಕ ಸ್ಥಳಗಳಲ್ಲಿ, ಒಳಾಂಗಣ ಕಾರ್ಯಕ್ರಮಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವ ಕುರಿತು ಕೋವಿಡ್ ಸಭೆ ಬಳಿಕ ಸಚಿವ ಆರ್ ಅಶೋಕ್ ಮಾಹಿತಿ ನೀಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ನಿಯಮ ಪಾಲನೆ ಮಾಡಬೇಕಾಗಿದ್ದು, ಕೋರೋನಾ ನಿಯಂತ್ರಣಕ್ಕೆ ಬಿಗಿ ಕ್ರಮ ಕೈಗೊಳ್ಳಲಾಗಿದೆ.
ನಗರದಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದ್ದು, ಕೋರೋನಾ ನಿಯಂತ್ರಣಕ್ಕೆ ಹಲವು ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಇನ್ನೂ ಹೆಚ್ಚಾಗಿ ಜನ ಸಂದಣಿ ಇರುವ ಚಿತ್ರಮಂದಿರಗಳು, ಶಾಲಾ-ಕಾಲೇಜುಗಳಲ್ಲೂ ನಿಯಮ ಪಾಲನೆ ಕಡ್ಡಾಯಗೊಳಿಸಲಾಗಿದೆ. . ಶಾಲಾ-ಕಾಲೇಜ್ ತರಗತಿಗಳಿಗೆ ವಿದ್ಯಾರ್ಥಿಗಳು ಪ್ರವೇಶಕ್ಕೂ ಮುಂಚೆ ಸ್ಯಾನಿಟೈಸ್ ಮಾಡುವುದು, ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ.
ಸುವರ್ಣ ಸೌಧದ ಸಮಿತಿ ಕೊಠಡಿಯಲ್ಲಿ ಇಂದು (ಡಿ.26) ಸಚಿವರಾದ ಆರ್ ಅಶೋಕ್ ಮತ್ತು ಸುಧಾಕರ್ ನೇತೃತ್ವದಲ್ಲಿ ಆರೋಗ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು, ವರ್ಚುವಲ್ ಮೂಲಕ ತಜ್ಞರ ಸಭೆ ನಡೆದಿದೆ. ಎಂಜಿ ರೋಡ್ ಸೇರಿದಂತೆ ಎಲ್ಲಾ ಕಡೆ ಈ ನಿಯಮ ಕಡ್ಡಾಯವಾಗಿದೆ. ಹೊಸ ವರ್ಷಾಚರಣೆ ಸಂಭ್ರಮಾಚರಣೆ ವೇಳೆ ಗರ್ಭಿಣಿಯರಿಗೆ ಪ್ರವೇಶವಿರುವುದಿಲ್ಲ ಎಂದು ಆರ್ ಅಶೋಕ್ ಅವರು ಹೇಳಿದ್ದಾರೆ.
2019ರ ನಂತರ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ನಡೆಯುತ್ತಿದ್ದು , ಹೀಗಾಗಿ ಬೆಂಗಳೂರಿನ ಎಲ್ಲ ಹೋಟೆಲ್ನವರು ಹೊಸ ವರ್ಷಾಚರಣೆಯನ್ನು ಜೋರಾಗಿ ಆಚರಿಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆ ಹೊಟೇಲ್ಗಳಲ್ಲಿ ಸಿಸಿಕ್ಯಾಮರಾ ಅಳವಡಿಸಬೇಕು. ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಬೇಕು.
ಹೊಸ ವರ್ಷಾಚರಣೆಗೆ ರಾತ್ರಿ 1 ಗಂಟೆಯವರೆಗೆ ಮಾತ್ರ ಸಂಭ್ರಮಾಚರಣೆಗೆ ಅವಕಾಶ ಕಲ್ಪಿಸಲಾಗಿದೆ. ಹೊಸ ವರ್ಷಾಚರಣೆಗೆ (New Year) ರಾತ್ರಿ 1 ಗಂಟೆಯವರೆಗೆ ಮಾತ್ರ ಸಂಭ್ರಮಾಚರಣೆಗೆ ಅವಕಾಶ ನೀಡಲಾಗಿದೆ. ಬಾರ್ (Bar), ಪಬ್ (PUB) ಹಾಗೂ ಹೊಟೇಲ್ಗಳಲ್ಲಿ (Hotel) ಗ್ರಾಹಕರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ 2 ಡೋಸ್ ಲಸಿಕೆಯನ್ನು ಪಡೆದಿರಬೇಕು ಎಂದು ಕಂದಾಯ ಸಚಿವ ಆರ್. ಅಶೋಕ (R Ashok) ಹೇಳಿದ್ದಾರೆ.
ಎಷ್ಟು ಟೇಬಲ್ ಇದೆಯೋ ಅಷ್ಟು ಚೇರ್ಗೆ ಮಾತ್ರ ಅನುಮತಿ ನೀಡಲಾಗಿದ್ದು, ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡುವವರು ಕೂಡ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಾಗಿದೆ. ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ರಾಜ್ಯದ ಎಲ್ಲ ನಗರಗಳಿಗೆ ಈ ನಿಯಮ ಅನ್ವಯವಾಗುತ್ತದೆ ಎಂದಿದ್ದಾರೆ.
ಸಚಿವ ಸುಧಾಕರ್ ಸ್ವಯಂ ಪ್ರೇರಿತವಾಗಿ ಮೂರನೇ ಡೋಸ್ ಲಸಿಕೆಯನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿದ್ದು, ಇದೇ ವೇಳೆ ಹೊರದೇಶದವರನ್ನು ರಾಂಡಮ್ ರೀತಿಯಲ್ಲಿ ಟೆಸ್ಟ್ ಮಾಡಲಾಗಲಿದ್ದು, ಅಲ್ಲಿ ರೋಗ ಲಕ್ಷಣಗಳು ಕಂಡು ಬಂದರೇ ಕ್ವಾರಂಟೈನ್ ಮಾಡಲಾಗುತ್ತದೆ. ಪಾಸಿಟಿವ್ ಬಂದರೆ ಜಿನೋಮಿಕ್ ಸಿಕ್ವೆನ್ಸಿಂಗ್ ಕಳಿಸುತ್ತೇವೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಅವರು ಹೇಳಿದ್ದು ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಿದ್ದಾರೆ.
ವಿದೇಶದಿಂದ ಬರುವವರನ್ನು ಮಾನಿಟರ್ ಮಾಡಲು ಸಲಹೆ ನೀಡಿದ್ದು, ಹೀಗಾಗಿ 2 ಆಸ್ಪತ್ರೆಗಳಲ್ಲಿ ಮೀಸಲಿಡಲಾಗುತ್ತದೆ. ಬೆಂಗಳೂರು ಮತ್ತು ಮಂಗಳೂರಿನಲ್ಲಿ ಆಸ್ಪತ್ರೆಗಳನ್ನು ತೆರೆಯಲಾಗುತ್ತದೆ. ವಿದೇಶಿ ಪ್ರಯಾಣಿಕರನ್ನು ಬೆಂಗಳೂರು ಬೌರಿಂಗ್ ಹಾಗೂ ಮಂಗಳೂರಿನ ವೆನ್ಲಾಕ್ ನಲ್ಲಿ ಐಸೋಲೇಶನ್ ಮಾಡುವ ಕುರಿತು ಮಾಹಿತಿ ನೀಡಿದ್ದಾರೆ. ಜೊತೆಗೆ ಬೂಸ್ಟರ್ ಡೋಸ್ ಕೂಡ ಪಡೆಯುವುದು ಉತ್ತಮ ಎಂದು ಸುಧಾಕರ್ ಮನವಿ ಮಾಡಿದ್ದಾರೆ.