ಸರಕಾರಿ ಉದ್ಯೋಗಿಗಳಿಗೆ ಬಿಗ್‌ ಶಾಕಿಂಗ್‌ ನ್ಯೂಸ್‌

ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ದೊಡ್ಡ ಶಾಕ್ ಎದುರಾಗುವ ಸಾಧ್ಯತೆ ದಟ್ಟವಾಗಿದ್ದು, ಬರೋಬ್ಬರಿ 25000 ಸರ್ಕಾರಿ ಹುದ್ದೆಗಳ ನೇಮಕಕ್ಕೆ ತಡೆ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಹುದ್ದೆಗಳ ನೇಮಕಾತಿಗೆ ಕುರಿತಂತೆ, ರಾಜ್ಯ ಪೌರ ಕಾರ್ಮಿಕರ ಖಾಯಂಗೊಳಿಸುವಿಕೆ ಹಾಗೂ ಹೊಸ 25000 ಹುದ್ದೆಗಳ ನೇಮಕಾತಿಯನ್ನು ತಡೆಹಿಡಿದಿದೆ. ಇತ್ತೀಚೆಗೆ ರಾಜ್ಯ ಸರ್ಕಾರ ಕೈಗೊಂಡ ಎಸ್‌ಸಿ, ಎಸ್‌ಟಿ ಮೀಸಲು ಹೆಚ್ಚಳ ಇದಕ್ಕೆ ಕಾರಣ ಎನ್ನಲಾಗಿದೆ.

ಸರ್ಕಾರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳದ ನಂತರ ಸರ್ಕಾರದ 36 ಇಲಾಖೆಗಳಲ್ಲಿ ರೋಸ್ಟರ್ ಬಿಂದು ಪರಿಷ್ಕರಣೆ ತಡವಾಗಿದ್ದು 11,133 ಪೌರ ಕಾರ್ಮಿಕರ ಕಾಯಂಗೊಳಿಸುವುದು ಜೊತೆಗೆ ಸರ್ಕಾರದ ವಿವಿಧ ಇಲಾಖೆಗಳ ಸುಮಾರು 25000 ಹೊಸ ನೇಮಕಾತಿ ಪ್ರಕ್ರಿಯೆಗೆ ಬ್ರೇಕ್ ನೀಡಿ ತಡೆ ಹಿಡಿಯಲಾಗಿದೆ.

ಎಸ್‌ಸಿ ಸಮುದಾಯಕ್ಕೆ ಶೇಕಡ.15 ರಿಂದ 17 ಕ್ಕೆ, ಎಸ್‌ಟಿ ಸಮುದಾಯಕ್ಕೆ ಶೇಕಡ.3 ರಿಂದ 7 ಕ್ಕೆ ಹೆಚ್ಚಳ ಮಾಡಿ ಅಧಿಸೂಚನೆ ನೀಡಲಾಗಿದೆ. ಹೀಗಾಗಿ, ರೋಸ್ಟರ್‌ ಬಿಂದುವಿನಲ್ಲಿ ವ್ಯತ್ಯಯ ಕಂಡುಬಂದಿದೆ. ಈ ವ್ಯತ್ಯಾಸಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯ ನಡೆಯುತ್ತಿದೆ.

ಈ ಪ್ರಕ್ರಿಯೆ ಮುಗಿದ ನಂತರ ಪರಿಷ್ಕೃತ ಮೀಸಲಾತಿ ಅನುಷ್ಠಾನಗೊಳ್ಳುವ ಸಂಭವ ಇದೆ. ಅಲ್ಲಿಯವರೆಗೆ ನೇರ ನೇಮಕಾತಿ, ಮುಂಬಡ್ತಿಗೆ ಕ್ರಮ ಕೈಗೊಳ್ಳಬಾರದೆಂದು ಇಲಾಖಾ ಮುಖ್ಯಸ್ಥರಿಗೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸೂಚನೆ ನೀಡಿರುವ ಕುರಿತು ಮಾಹಿತಿ ಕೆಲ ಮಾಧ್ಯಮಗಳ ಮೂಲಕ ತಿಳಿದು ಬಂದಿದೆ.

ರಾಜ್ಯ ಸರ್ಕಾರದ 11000 ಪೌರಕಾರ್ಮಿಕರ ನೇಮಕಾತಿ ಜೊತೆಗೆ ಹೊಸ 25 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಈಗ ತಾತ್ಕಾಲಿಕ ತಡೆ ಬೀಳಲಿದೆ. ಒಟ್ಟು 36 ಇಲಾಖೆಗಳ ಹುದ್ದೆಗಳಿಗೆ ಈಗ ನೇಮಕ ಪ್ರಕ್ರಿಯೆಗಳು ಶುರು ಆಗಬೇಕಾಗಿತ್ತು. ಆದರೆ ಎಸ್‌ಸಿ, ಎಸ್‌ಟಿ ಮೀಸಲು ಹೆಚ್ಚಳ ಹಿನ್ನೆಲೆ ಈ ತಡೆ ಬಿದ್ದಿದೆ.

ಇದರ ಜೊತೆಗೆ ಕರ್ನಾಟಕ ಲೋಕಸೇವಾ ಆಯೋಗದ 683 ಹುದ್ದೆ ಎಲ್ಲ ಹಂತದಿಂದ ಅನುಮೋದನೆ ದೊರೆತು, ಅಧಿಸೂಚನೆ ಕೂಡ ಸ್ಥಗಿತಗೊಂಡಿದೆ. ಪ್ರಸ್ತುತ ರೋಸ್ಟರ್ ಬಿಂದು ನಿಗದಿಪಡಿಸುವ ಕಡತ, ಮುಖ್ಯ ಮಂತ್ರಿ ಹಾಗೂ ಸರ್ಕಾರದ ಚೀಫ್ ಸೆಕ್ರೆಟರಿ ಅವರಿಗೆ ತಲುಪಿದ್ದು, ತ್ವರಿತವಾಗಿ ಈ ಬಗ್ಗೆ ಸರ್ಕಾರ ನಿರ್ಣಯ ಕೈಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ.

ರಾಜ್ಯ ಪೌರ ಕಾರ್ಮಿಕರ ಖಾಯಂಗೊಳಿಸುವಿಕೆ ಹಾಗೂ ಹೊಸ 25000 ಹುದ್ದೆಗಳ ನೇಮಕಾತಿಯನ್ನು ತಡೆಹಿಡಿಯಲಾಗಿದ್ದು, ಇದರ ನೇರ ಪರಿಣಾಮ 10 ವರ್ಷಕ್ಕಿಂತ ಹೆಚ್ಚು ಕಾಲ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸಿದ ಪೌರಕಾರ್ಮಿಕರ ಮೇಲೆ ಆಗಿದ್ದು ಕಾಯಂಮಾತಿಗೆ ಅಡ್ಡಿ ಉಂಟಾಗಿದೆ.

ಇದಲ್ಲದೆ, ಕಂದಾಯ ಇಲಾಖೆ, ಸಹಕಾರಿ ಇಲಾಖೆ, ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ, ಬಿಬಿಎಂಪಿ, ಲೋಕೋಪಯೋಗಿ ಇಲಾಖೆ ಸೇರಿದಂತೆ ಹೊಸ 25 ಸಾವಿರ ಹುದ್ದೆಗಳ ಭರ್ತಿಗೆ ಕೂಡ ಸಮಸ್ಯೆ ತಲೆದೋರಿದೆ. ಇದರ ಜೊತೆಗೆ ಮೀಸಲಾತಿ ಅನ್ವಯ ಮುಂಬಡ್ತಿ ನೀಡಲು ತೊಂದರೆ ಹೆಚ್ಚಾಗಿದೆ ಎನ್ನಲಾಗಿದೆ.

Leave A Reply

Your email address will not be published.