ಮಂಗಳೂರು : ಜಲೀಲ್ ಹತ್ಯೆಯಲ್ಲಿದೆಯೇ ಮಹಿಳೆಯರ ಪಾತ್ರ ? ಪೊಲೀಸರು ವಶಕ್ಕೆ ಪಡೆದ ಶಂಕಿತರಲ್ಲಿ ಇಬ್ಬರು ಮಹಿಳೆಯರು – ಹತ್ಯೆಗೆ ಕಾರಣವೇನು ?!

ಮಂಗಳೂರು: ಸುರತ್ಕಲ್ ಸಮೀಪದ ಕಾಟಿಪಳ್ಳ 4ನೇ ಬ್ಲಾಕ್‌ನಲ್ಲಿ ಶನಿವಾರ ರಾತ್ರಿ ನಡೆದ ಅಬ್ದುಲ್ ಜಲೀಲ್ (45) ಎಂಬ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸರು ಇಬ್ಬರು ಮಹಿಳೆಯರು ಸೇರಿದಂತೆ ಐವರನ್ನು ವಶಕ್ಕೆ ಪಡೆದಿದ್ದಾರೆ. ಹಿಂದೂ ಮಹಿಳೆಯರೊಂದಿಗೆ ಜಲೀಲ್‌ ದುವರ್ತನೆ ಮಾಡಿದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಹಿಂದೆ ಮಹಿಳೆಯರು ಹಾಗೂ ಕೆಲ ಯುವಕರು ಸೇರಿ ಜಲೀಲ್ ಜೊತೆ ವಾಗ್ವಾದ ನಡೆಸಿದ್ದರು ಎನ್ನುವ ಮಾಹಿತಿಯ ಆಧಾರದಲ್ಲಿ ಕೊಲೆಗೂ ಅಂದಿನ ಆ ಘಟನೆಗೂ ಒಂದಕ್ಕೊಂದು ಸಂಬಂಧವಿದೆಯೋ ಎನ್ನುವ ಅನುಮಾನದಲ್ಲಿ ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಎಲ್ಲವನ್ನೂ ಪೊಲೀಸರು ತಾಳೆ ಹಾಕುತ್ತಿದ್ದಾರೆ ಎನ್ನುವ ಮಾಹಿತಿ ಬರುತ್ತಿದೆ.

ಸುರತ್ಕಲ್ ಸಮೀಪದ ಕಾಟಿಪಳ್ಳ 4ನೇ ಬ್ಲಾಕ್‌ನಲ್ಲಿ ಶನಿವಾರ ರಾತ್ರಿ ನಡೆದ ಅಬ್ದುಲ್ ಜಲೀಲ್ ಗೂ ಕೆಲ ಹಿಂದೂ ಮಹಿಳೆಯರಿಗೂ ಆತ್ಮೀಯತೆ ಇತ್ತು. ಅದರ ಬಗ್ಗೆ ಸ್ಥಳೀಯರು ಈ ಮೊದಲೇ ಜಲೀಲ್ ನನ್ನ ಎಚ್ಚರಿಸಿದ್ದರು. ಆ ಸಂಬಂಧ ವಾಗ್ವಾದ ಗದ್ದಲ ಕೂಡಾ ಆಗಿತ್ತು. ಆದರೂ ಆ ಗೆಳೆತನ ಮುಂದುವರೆದಿತ್ತು. ಅದು ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದು, ಅದುವೇ ಕೊಲೆಗೆ ಮುಖ್ಯ ಮೋಟಿವ್ ಆಯಿತು ಎನ್ನುವುದು ಒಂದು ಬಲವಾದ ವಾದ.

ಪೊಲೀಸರು ಉನ್ನತ ಅಧಿಕಾರಿಗಳ ತಂಡದೊಂದಿಗೆ ತನಿಖೆ ನಡೆಸುತ್ತಿದ್ದು, ಹಲವು ಆಯಾಮಗಳ ತನಿಖೆಯಲ್ಲಿ ಕೆಲ ಅಂಶಗಳು ಬೆಳಕಿಗೆ ಬಂದಿದ್ದು, ಶೀಘ್ರದಲ್ಲೇ ಆರೋಪಿಗಳ ಬಂಧನವಾಗುವ ಸಾಧ್ಯತೆ ಹೆಚ್ಚಿತ್ತು. ಅದರಂತೆ ಈಗ ಇಬ್ಬರ ಬಂಧನ ಆಗಿದೆ. ಈಗಾಗಲೇ ಕೊಲೆ ನಡೆಯಲು ಏನು ಕಾರಣ ಎನ್ನುವ ಬಗ್ಗೆ ಹಲವು ಚರ್ಚೆಗಳು ಸಂಮಾಜಿಕ ಜಾಲತಾಣದಲ್ಲಿ ದೊಡ್ಡದಾಗಿ ಕೇಳಿಬರುತ್ತಿದ್ದು, ಕೊಲೆ ನಡೆಯಲು ಮೂಲ ಕಾರಣ – ಮಹಿಳೆ ಎನ್ನಲಾಗುತ್ತಿದೆ ಹಿಂದೂ ಮಹಿಳೆಯೊಬ್ಬಳ ಜತೆ ಗೆಳೆತನ ಸಾಧಿಸಿದ್ದೇ ಕೊಲೆಗೆ ಮೂಲ ಕಾರಣ ಎನ್ನುತ್ತಿದೆ ಒಂದು ತನಿಖಾ ಮೂಲ. ಆದರೆ ಪೊಲೀಸರು ಅದನ್ನು ಸ್ಪಷ್ಟಪಡಿಸಬೇಕಷ್ಟೆ. ಆ ಹಿನ್ನೆಯಲ್ಲಿಯೇ ಮಹಿಳೆಯನ್ನೂ (ಮಹಿಳೆಯರನ್ನೂ) ಕರೆಸಿ ವಿಚಾರಣೆ ಮಾಡಲಾಗಿದೆ ಎನ್ನಲಾಗುತ್ತಿದೆ, ಆದರೆ ಪೊಲೀಸರಿಂದ ಈ ಬಗ್ಗೆ ಮಾಹಿತಿ ಬಂದಿಲ್ಲ.

ಹತ್ಯೆ ಪ್ರಕರಣ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ, ಹಾಗೂ ಸ್ಥಳೀಯವಾಗಿ ಕೆಲ ವಿಚಾರಗಳು ಚರ್ಚೆಗೆ ಬಂದಿದ್ದು ಈ ಬಗ್ಗೆ ನಿನ್ನೆಯಷ್ಟೇ ಹೇಳಿಕೆ ನೀಡಿದ ಸಿಎಂ ಬೊಮ್ಮಾಯಿಯವರು, ಪ್ರಕರಣ ಸಂಬಂಧ ಯಾವುದೇ ವದಂತಿಗಳಿಗೆ ಕಿವಿಗೊಡದಂತೆ ದಕ್ಷಿಣ ಕನ್ನಡ ಮತ್ತು ಉಡುಪಿಯ ಕಾಟಿಪಳ್ಳದ ಜನರ ಬಳಿ ಮನವಿ ಮಾಡಿಕೊಂಡರು. ಅಲ್ಲದೆ, ಪೊಲೀಸರು ನ್ಯಾಯಯುತ ತನಿಖೆ ನಡೆಸಲಿದ್ದಾರೆಂದು ಭರವಸೆ ನೀಡಿದ್ದರು. ಅದರಂತೆ ಈಗ ಇಬ್ಬರ ಬಂಧನ ಆಗಿದೆ ತನಿಖೆ ಪ್ರಗತಿಯಲ್ಲಿದ್ದು ಶೀಘ್ರ ನಿಜವಾದ ಕಾರಣ ಈಚೆಗೆ ಬರಲಿದೆ.

Leave A Reply

Your email address will not be published.