ಜಿಯೋನ 200 ರೂ.ಒಳಗಿನ ಬೆಸ್ಟ್‌ ಪ್ಲ್ಯಾನ್‌ ರೀಚಾರ್ಜ್‌ ಇದು | ನಿಮಗ್ಯಾವುದು ಇಷ್ಟ ?

ಭಾರತದ ಟೆಲಿಕಾಂ ಕಂಪನಿಯಲ್ಲಿ ರಿಲಯನ್ಸ್​ ಜಿಯೋ ಹೆಚ್ಚಿನ ಜನಪ್ರಿತೆ ಪಡೆದಿದ್ದೂ, ನಂಬರ್ 1 ಸ್ಥಾನದಲ್ಲಿ ಭದ್ರವಾಗಿ ನಿಂತಿದೆ. ಅಗ್ಗದ ರೀಚಾರ್ಜ್ ಪ್ಲಾನ್​ ಆದರೂ, ಹಲವಾರು ಪ್ರಯೋಜನಗಳನ್ನು ಹೊಂದಿದೆ. ಜನ ಸಾಮಾನ್ಯರ ಕೈಗೆಟಕುವ ಬೆಲೆಯಲ್ಲಿ ಯೋಜನೆಯನ್ನು ಬಿಡುಗಡೆ ಮಾಡುವ ಮೂಲಕವೇ ಸಾಕಷ್ಟು ಗ್ರಾಹಕರನ್ನು ಹೊಂದಿದೆ. ಜಿಯೋದಲ್ಲಿ ಬಿಡುಗಡೆಯಾದಂತಹ ಪ್ಲಾನ್​ಗಳಲ್ಲಿ ಒಂದಾದ 200 ರೂಪಾಯಿ ಒಳಗಿನ ರೀಚಾರ್ಜ್​ನಲ್ಲಿ ನಾಲ್ಕು ಬೆಸ್ಟ್ ಯೋಜನೆಗಳ ಬಗ್ಗೆ ನಾವಿಂದು ನಿಮಗೆ ಹೇಳಲಿದ್ದೇವೆ.

ಜಿಯೋ ರೂ.119 ಪ್ಲಾನ್:- ಕಡಿಮೆ ವೆಚ್ಚದ ಯೋಜನೆಯನ್ನು ಹುಡುಕುತ್ತಿರುವ ಜಿಯೋ ಗ್ರಾಹಕರಿಗೆ ಇದೊಂದು ಬೆಸ್ಟ್ ಆಪ್ಶನ್ ಅಂದರೆ ತಪ್ಪಾಗಲಾರದು. ಈ ಯೋಜನೆಯು 14 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದೂ , 1.5 GB ದೈನಂದಿನ ಡೇಟಾವನ್ನು ಪಡೆಯುತ್ತಾರೆ. ಇದರ ಜೊತೆಗೆ ಅನ್ಲಿಮಿಟೆಡ್ ಉಚಿತವಾಗಿ​ ಕಾಲ್ ಮಾಡುವಂತಹ ಅವಕಾಶವನ್ನು ಒದಗಿಸುತ್ತದೆ. ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್, ಜಿಯೋ ಸಿನೆಮಾದಂತಹ ಇತರ ಜಿಯೋ ಅಪ್ಲಿಕೇಶನ್‌ಗಳಲ್ಲೂ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.

ಜಿಯೋ ರೂ.149 ಯೋಜನೆ:- ಹಿಂದಿನ ಯೋಜನೆಗೆ ಹೋಲಿಸಿದರೆ ಈ ಯೋಜನೆಯ ವ್ಯಾಲಿಡಿಟಿ ಸ್ವಲ್ಪ ಹೆಚ್ಚು ದಿನಗಳವರೆಗೆ ಇರುತ್ತದೆ. ಈ ಯೋಜನೆ ಒಟ್ಟು 20 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಈ 20 ದಿನಗಳಲ್ಲಿ ಪ್ರತಿದಿನ ಬಳಕೆದಾರರು 1ಜಿಬಿ ಡೇಟಾವನ್ನು ಬಳಸಬಹುದು. ಜೊತೆಗೆ ಈ ರಿಚಾರ್ಜ್ ಪ್ಲಾನ್ ನಲ್ಲಿ ಅನ್ಲಿಮಿಟೆಡ್​ ಉಚಿತ ಕಾಲ್​​ ಸೇವೆಗಳು ಇದೆ. ಪ್ರತಿದಿನ 100 ಎಸ್​​ಎಮ್​​ಎಸ್​ ಫ್ರೀ ಆಗಿ ಮಾಡುವ ಅವಕಾಶವಿದೆ. ಅದಲ್ಲದೇ, ಜಿಯೋ ನ ಇತರ ಪ್ರೀ ಪೇಯ್ಡ್ ಯೋಜನೆಗಳಂತೆಯೇ ಈ ಯೊಜನೆಯಲ್ಲಿ ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್, ಜಿಯೋ ಸಿನಿಮಾದಂತಹ ಇತರ ಜಿಯೋ ಅಪ್ಲಿಕೇಶನ್‌ಗಳಲ್ಲಿ ಉಚಿತ ಚಂದಾದಾರಿಕೆ ಪಡೆಯಬಹುದು.

ಜಿಯೋ ರೂ.155 ಪ್ಲಾನ್:- ಹೆಚ್ಚು ಡೇಟಾ ಬಳಸದವರಿಗೆ ಈ ಪ್ಲಾನ್ ಅತ್ಯುತ್ತಮ ಆಯ್ಕೆ ಎಂದು ಹೇಳಬಹುದು. ಈ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿಯೊಂದಿಗೆ ನಿಮಗೆ ಲಭ್ಯವಿದೆ. ಪ್ರತಿದಿನ ಬಳಕೆದಾರರು ಒಟ್ಟಾಗಿ 2ಜಿಬಿ ಡೇಟಾವನ್ನು ಬಳಸಬಹುದು. ಜೊತೆಗೆ ಅನ್ಲಿಮಿಟೆಡ್​ ಉಚಿತವಾಗಿ ಕಾಲ್​ ಮಾಡುವ ಪ್ರಯೋಜನವನ್ನು ಸಹ ಪಡೆಯುತ್ತಾರೆ.

ಜಿಯೋ ರೂ.179 ಯೋಜನೆ: ಈ ಯೋಜನೆ ಒಟ್ಟು 24 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಈ 24 ದಿನಗಳಲ್ಲಿ ಪ್ರತಿದಿನ ಬಳಕೆದಾರರು 1ಜಿಬಿ ಡೇಟಾವನ್ನು ಬಳಸಬಹುದು. ಜೊತೆಗೆ ಈ ರಿಚಾರ್ಜ್ ಪ್ಲಾನ್ ನಲ್ಲಿ ಅನ್ಲಿಮಿಟೆಡ್​ ಉಚಿತ ಕಾಲ್​​ ಸೇವೆಗಳು ಇದೆ. ಪ್ರತಿದಿನ 100 ಎಸ್​​ಎಮ್​​ಎಸ್​ ಫ್ರೀ ಆಗಿ ಮಾಡುವ ಅವಕಾಶವಿದೆ. ಅದಲ್ಲದೇ ಹೆಚ್ಚುವರಿ ಪ್ರಯೋಜನವಾಗಿ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್ ಮತ್ತು ಜಿಯೋ ಸಿನೆಮಾದಂತಹ ಇತರ ಜಿಯೋ ಅಪ್ಲಿಕೇಶನ್‌ಗಳಲ್ಲಿ ಉಚಿತ ಚಂದಾದಾರಿಕೆ ಪಡೆಯಬಹುದು.

Leave A Reply

Your email address will not be published.