Whatsapp Features: ಕ್ರಿಸ್‌ಮಸ್‌ ಟೋಪಿ ವಾಟ್ಸಪ್​ ಐಕಾನ್​ ಮೇಲೆ | ಹೇಗೆ ಹಾಕೋದು ಅಂತೀರಾ ? ಇಲ್ಲಿದೆ ಟ್ರಿಕ್ಸ್​

ವಿಶ್ವದಲ್ಲಿಂದು ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ  ಅಪ್ಲಿಕೇಶನ್  ಆಗಿ ಬೆಳೆದಿರುವ ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಪ್ಲಾಟ್‌ಫಾರ್ಮ್ (Messaging Platform) ವಾಟ್ಸಪ್ (WhatsApp) ದಿನಕ್ಕೊಂದು ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿರುವ ವಾಟ್ಸ್​ಆ್ಯಪ್ ಜನರ ಮನಸೆಳೆಯುವಲ್ಲಿ ಯಶಸ್ವಿಯಾಗಿದೆ.

ಯಾವುದೇ ಹಬ್ಬ (Festival) ಬಂದಾಗ ಸೋಶಿಯಲ್​ ಮೀಡಿಯಾಗಳಲ್ಲಿ (Social Media) ಫೋಟೊ ಇಲ್ಲವೇ ಸ್ಟೇಟಸ್  ಹಾಕುವುದು  ಟ್ರೆಂಡ್ (Trend) ಆಗಿದೆ. ಅದೇ ರೀತಿ ಹಬ್ಬಗಳ ಸಂದರ್ಭ ಸೋಶಿಯಲ್​ ಮೀಡಿಯಾ ಮೂಲಕ  ಮೂಲಕ ವಿಡಿಯೋ ಹಾಕುವ ಇಲ್ಲವೇ  ಫೋಟೋ ಹಾಕುವುದು, ಇಲ್ಲದಿದ್ದರೆ  ಡಿಪಿ ಹಾಕುವ ಮೂಲಕ ಆಚರಣೆ ಮಾಡೋದು ಕಾಮನ್. ಆದರೆ, ನಾಳೆಯೇ ಅಂದ್ರೆ ಡಿಸೆಂಬರ್ 25 ಕ್ಕೆ ಕ್ರಿಸ್​ಮಸ್ (Christmus)​ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಇದೀಗ, ನೀವು ಕೂಡ  ವಾಟ್ಸಪ್​ನಲ್ಲಿ ಸ್ಪೆಷಲ್ ಆಗಿ ಆಚರಿಸಬಹುದು. ಅರೇ ಹೌದಾ??  ಅದು ಹೇಗೆ ಅಂತೀರಾ??

ಕೆಲವು ಆ್ಯಪ್​ಗಳು ಹಬ್ಬದ ಸಂದರ್ಭದಲ್ಲಿ ಹೊಸ ಫೀಚರ್ಸ್​​ಗಳನ್ನು ಬಿಡುಗಡೆ ಮಾಡುತ್ತವೆ. ಅದೇ ರೀತಿ ಈ ಬಾರಿ ಕ್ರಿಸ್​ಮಸ್​ ಹಬ್ಬದ ಪ್ರಯುಕ್ತ ವಾಟ್ಸಪ್​ ಐಕಾನ್​ನಲ್ಲಿ ಕ್ರಿಸ್​ಮಸ್​ ಟೋಪಿ ಹಾಕುವಂತಹ ಫೀಚರ್ಸ್​ ಅನ್ನು ಬಿಡುಗಡೆ ಮಾಡಿದೆ. ಇದನ್ನು ಹೇಗೆ ಸೆಟ್​ ಮಾಡುವುದು ಎಂಬ ಕುತೂಹಲಕಾರಿ ಸಂಗತಿ ನಾವು ಹೇಳ್ತೀವಿ ಕೇಳಿ!!

ವಾಟ್ಸಪ್​ ಐಕಾನ್​ನಲ್ಲಿ (Whatsapp Icon) ನೀವು ಕ್ರಿಸ್​ಮಸ್​ ಟೋಪಿಯನ್ನು ಹಾಕುವ ಮೂಲಕ ಈ ಬಾರಿ ಕ್ರಿಸ್​ಮಸ್​ ಹಬ್ಬವನ್ನು ಸಂಭ್ರಮಿಸಬಹುದಾಗಿದೆ. ಆದರೆ ವಾಟ್ಸಪ್​ ಐಕಾನ್​ಗೆ ಕ್ರಿಸ್​ಮಸ್​ ಟೋಪಿ ಹಾಕಲು ಕೆಲವೊಂದು ಸಿಂಪಲ್ ಟಿಪ್ಸ್​ಗಳಿವೆ.

ವಾಟ್ಸಪ್​ನಲ್ಲಿ ಇದುವರೆಗೆ ಹಲವಾರು ಫೀಚರ್ಸ್​​ಗಳು ಬಿಡುಗಡೆಯಾಗಿದೆ. ಆದರೆ ವಾಟ್ಸಪ್​ ಐಕಾನ್​ ಅನ್ನು ಕಸ್ಟಮೈಸ್​ ಮಾಡುವಂತಹ ಫೀಚರ್ಸ್​ ಇದುವರೆಗೆ ಬಿಡುಗಡೆ ಮಾಡಲಾಗಿಲ್ಲ. ಆದ್ದರಿಂದ ಈ ಐಕಾನ್​ಗಳನ್ನು ಕಸ್ಟಮೈಸ್ ಮಾಡಬೇಕಾದರೆ ಥರ್ಡ್​​ ಪಾರ್ಟಿ ಆ್ಯಪ್​ ಅನ್ನು ಡೌನ್​ಲೋಡ್​ ಮಾಡಿಕೊಳ್ಳಬೇಕಾಗುತ್ತದೆ.

ಆಂಡ್ರಾಯ್ಡ್​ ಬಳಕೆದಾರರು ತಮ್ಮಲ್ಲಿರುವಂತ ಆ್ಯಪ್​ಗಳ ಐಕಾನ್​ಗಳನ್ನು ತಮಗೆ ಬೇಕಾದಂತೆ ಬದಲಾಯಿಸಲು ಹಲವಾರು ಲಾಂಚರ್​ಗಳು ಗೂಗಲ್​ ಪ್ಲೇ ಸ್ಟೋರ್​ನಿಂದ ಇನ್​ಸ್ಟಾಲ್​ ಮಾಡಿಕೊಳ್ಳಬಹುದಾಗಿದೆ. ಸದ್ಯ ಈ ಲಾಂಚರ್​ಗಳಲ್ಲಿ ಬಹಳ ಖ್ಯಾತಿ ಗಳಿಸಿರುವ ಹಾಗೂ  ಯೋಗ್ಯವಾಗಿರುವ ಆ್ಯಪ್  ನೋವಾ ಲಾಂಚರ್ ಆಗಿದ್ದು,  ಈ ಆ್ಯಪ್​ ಮೂಲಕ ವಾಟ್ಸಪ್​ ಐಕಾನ್ ಅನ್ನು ಬಳಕೆದಾರರಿಗೆ ಬೇಕಾದ ರೀತಿಯಲ್ಲಿ ಕಸ್ಟಮೈಸ್​ ಮಾಡಿಕೊಳ್ಳಬಹುದಾಗಿದೆ. ಆದರೆ ಅದಕ್ಕಾಗಿ ಕೆಲವು ಹಂತಗಳನ್ನು ಅನುಸರಿಸಬೇಕು. ಇದು ನಿಮ್ಮ ವಾಟ್ಸಪ್​ ಐಕಾನ್​ ಅನ್ನು ಕಸ್ಟಮೈಸ್​ ಮಾಡಲಿರುವಂತಹ ಸ್ಪೆಷಲ್​ ಫೀಚರ್ ಆಗಿದೆ.

ಮೊದಲಿಗೆ ನಿಮ್ಮ ವಾಟ್ಸಪ್​ ಐಕಾನ್​ನಲ್ಲಿ ಯಾವ ಚಿತ್ರವನ್ನು ಹಾಕಬೇಕು ಇಲ್ಲವೇ  ಅದರಲ್ಲಿ ಯಾವುದೆಲ್ಲ  ಡಿಸೈನ್​ಗಳು ಬೇಕು ಎಂಬುದನ್ನು ಗಮನಿಸಬೇಕು. ಬಳಿಕ ನಿಮಗೆ ಬೇಕಾದ ರೀತಿಯಲ್ಲಿ ಬ್ರೌಸರ್​ನಲ್ಲಿ ಫೋಟೋಗಳನ್ನು ಡೌನ್​ಲೋಡ್ ಮಾಡಿಕೊಂಡು, ನಿಮಗೆ ಬೇಕಾದ ಹಾಗೆ ಸೆಟ್​ ಮಾಡಿಟ್ಟುಕೊಳ್ಳಬೇಕು.

ಡೌನ್​​ಲೋಡ್​ ಮಾಡಿಟ್ಟುಕೊಂಡ ಬಳಿಕ ನೀವು ಈಗಾಗಲೇ ಇನ್‌ಸ್ಟಾಲ್‌ ಮಾಡಿಕೊಂಡಿರುವ ನೋವಾ ಆ್ಯಪ್​ ಅನ್ನು ಓಪನ್‌ ಮಾಡಿಕೊಂಡು ಅದರಲ್ಲಿ ಕೇಳಲಾಗುವ ಷರತ್ತನ್ನು ಓದಿಕೊಂಡು ಸಮ್ಮತಿ ಸೂಚಿಸಬೇಕು. ವಾಟ್ಸಾಪ್‌ ಐಕಾನ್‌ ಬಳಿ ಬಂದು ಅದನ್ನು ಕೆಲವು ಸೆಕೆಂಡುಗಳ ಕಾಲ ಹಾಗೆ ಟ್ಯಾಪ್‌ ಮಾಡಿ ಹಿಡಿದಿಟ್ಟುಕೊಳ್ಳಬೇಕು.

ಈ ರೀತಿ ಹಿಡಿದಿಟ್ಟ ಮೇಲೆ ನಿಮಗೆ ಎಡಿಟ್ ಬಟನ್‌ ಕಾಣಿಸಿಕೊಳ್ಳುತ್ತದೆ. ಅದನ್ನು ಕ್ಲಿಕ್​ ಮಾಡಬೇಕು. ಬಳಿಕ, ಈಗಾಗಲೇ ಡೌನ್‌ಲೋಡ್ ಮಾಡಲಾದ ಚಿತ್ರವನ್ನು ಆರಿಸಿಕೊಳ್ಳಬೇಕು. ಈ  ಬಳಿಕ ನಿಮಗೆ ಬೇಕಾದ ಹೇಗೆ  ಕಸ್ಟಮೈಸ್‌ ಮಾಡಿಕೊಳ್ಳಬೇಕು.

ನಿಮ್ಮ ವಾಟ್ಸಾಪ್‌ ಲೋಗೋ ಸುಂದರವಾಗಿ ಕಾಣುವುದನ್ನು ಗಮನಿಸಬಹುದು.ಈ ಆ್ಯಪ್​ ಮೂಲಕ ನಿಮ್ಮ ಮೊಬೈಲ್​ನಲ್ಲಿ ಪ್ರಸ್ತುತವಾಗಿ ಇರಬಹುದಾದ ಯಾವುದೇ ಆ್ಯಪ್​ನ ಐಕಾನ್​ ಅನ್ನು ಕೂಡ ಕಸ್ಟಮೈಸ್​ ಮಾಡಿಕೊಳ್ಳಬಹುದಾಗಿದೆ.

Leave A Reply

Your email address will not be published.