Home Health Covid 19 Guidelines : ಸಾರ್ವಜನಿಕರೇ ಇತ್ತ ಗಮನಿಸಿ | ಕ್ರಿಸ್ ಮಸ್, ನ್ಯೂ ಇಯರ್...

Covid 19 Guidelines : ಸಾರ್ವಜನಿಕರೇ ಇತ್ತ ಗಮನಿಸಿ | ಕ್ರಿಸ್ ಮಸ್, ನ್ಯೂ ಇಯರ್ ಗೆ ಮಾರ್ಗಸೂಚಿ ಬಿಡುಗಡೆ!

Hindu neighbor gifts plot of land

Hindu neighbour gifts land to Muslim journalist

ವ್ಯಕ್ತಿಯಿಂದ ವ್ಯಕ್ತಿಗೆ ಸುಲಭವಾಗಿ ಹರಡುತ್ತಿದ್ದ ಕಣ್ಣಿಗೆ ಕಾಣದ ಕೊರೋನ ಮಹಾಮಾರಿಯಿಂದ ಜನರು ಸೋತು ಹೋಗಿದ್ದರು. ಮರಣಗಳಿಗೆ ಬೆಲೆ ಇರದ ಆ ಕಾಲ ಮೈ ಜುಮ್ ಎನ್ನಿಸುತ್ತೆ. ಅದಲ್ಲದೆ ಕೊರೋನಾ ಸೋಂಕು ಸಂಪೂರ್ಣ ಜಗತ್ತನ್ನೇ ತಟಸ್ಥ ಮಾಡಿತ್ತು. ಇದೀಗ ಜನರಲ್ಲಿ ಸ್ವಲ್ಪ ಚೇತರಿಕೆ ಕಾಣಿಸುತ್ತಿದೆ. ಹೌದು
ಈಗಾಗಲೇ ಹೊಸ ವರ್ಷ ವನ್ನು ಅದ್ದೂರಿಯಾಗಿ ಸ್ವಾಗತ ಮಾಡಲು ಜಗತ್ತಿನಾದ್ಯಂತ ಸಿದ್ಧತೆಗಳು ನಡೆಯುತ್ತಿದೆ. ಆದರೆ ಇದರ ಮಧ್ಯೆ ಮತ್ತೇ ಆತಂಕದ ಛಾಯೆ ಮೂಡಿಸುತ್ತಿದೆ ಅದುವೇ BF.7 ಉಪತಳಿ ಆಗಿದೆ.

ಹೌದು BF.7 ಉಪತಳಿ ಹಿನ್ನೆಲೆಯಲ್ಲಿ ಕರ್ನಾಟಕ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಕ್ರಿಸ್‌ಮಸ್ ಹಾಗೂ ಹೊಸ ವರ್ಷ ಆಚರಣೆಗೆ ಗೈಡ್‌ಲೈನ್ಸ್‌ ಪ್ರಕಟಿಸಿದೆ. ಡಿಸೆಂಬರ್ 22 ಮಧ್ಯರಾತ್ರಿಯಿಂದಲೇ ಹೊಸ ಗೈಡ್‌ಲೈನ್ಸ್‌ ಅನ್ವಯವಾಗಲಿದ್ದು, ಮುಂದಿನ ಆದೇಶದವರೆಗೆ ಜಾರಿಯಲ್ಲಿರುವ ಹೊಸ ಗೈಡ್‌ಲೈನ್ಸ್‌ ಮುಂದುವರಿಯಲಿದೆ.

ಕ್ರಿಸ್‌ಮಸ್ ಹಾಗೂ ಹೊಸವರ್ಷ ಆಚರಣೆಗೆ ಮಾರ್ಗಸೂಚಿ:

  • ಸಾರ್ವಜನಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಆದಷ್ಟೂ ಹೊರಾಂಗಣದಲ್ಲಿ ಮತ್ತು ಒಳ್ಳೆಯ ಗಾಳಿ ಬೆಳಕಿನ ಮಧ್ಯೆ ಆಯೋಜಿಸಬೇಕು.
  • ಹಗಲು ವೇಳೆಯಲ್ಲಿಯೇ ಕಾರ್ಯಕ್ರಮ ಆಯೋಜನೆಗೆ ಸಲಹೆ.
  • ಹಗಲು ಹೊತ್ತಿನಲ್ಲಿ ನಡೆಸುವುದರಿಂದ ಆರೋಗ್ಯದ ಮೇಲೆ ಮುಂಜಾನೆ ಹಾಗೂ ಸಂಜೆಯ ಶೀತ ಗಾಳಿಯ ಪರಿಣಾಮವನ್ನು ತಡೆಗಟ್ಟಬಹುದು.

•ಒಳಾಂಗಣ ಕಾರ್ಯಕ್ರಮಗಳಲ್ಲಿ ಮಾಸ್ಕ್ ಧರಿಸುವಂತೆ ಸಲಹೆ.

  • ದೈಹಿಕ ಅಂತರವನ್ನು ಪಾಲಿಸುವುದು ಅಗತ್ಯವಾಗಿದೆ
  • ಹೆಚ್ಚಿನ ಜನರು ಗುಂಪುಗೂಡುವಿಕೆಯನ್ನು ತಡೆಯಬೇಕು.
  • ಸಾಮಾಜಿಕ ಅಂತರ ಪಾಲನೆ ಮಾಡುವಂತೆ ಸಲಹೆ.
  • ಬೂಸ್ಟರ್ ಡೋಸ್ ಲಸಿಕೆಯನ್ನು ಪಡೆದುಕೊಳ್ಳಬೇಕು.
  • ಉಸಿರಾಟದ ಸಮಸ್ಯೆ, ಸೋಂಕಿನ ಲಕ್ಷಣ ಹೊಂದಿರುವವರು ಸ್ವಯಂಪ್ರೇರಿತವಾಗಿ ಪ್ರತ್ಯೇಕವಾಗಿದ್ದು ಪರೀಕ್ಷೆ ಮಾಡಿಸಿಕೊಳ್ಳಬೇಕು.
  • ವೃದ್ಧರು, ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಮಾಸ್ಕ್‌ ಧರಿಸಿ ಸಾರ್ವಜನಿಕವಾಗಿ ಓಡಾಡುವಂತೆ ಸಲಹೆ ನೀಡಲಾಗಿದೆ.

ಅದಲ್ಲದೆ ಸಾರ್ವಜನಿಕರು ಹಾಗೂ ಸಭೆ ಸಮಾರಂಭ ಆಯೋಜಕರಿಗೆ ಮಾರ್ಗಸೂಚಿ ಪ್ರಕಟಿಸಲಾಗಿದ್ದು, ಅದು ಈ ಕೆಳಗಿನಂತಿದೆ :

  • ಸಾರ್ವಜನಿಕವಾಗಿ ಓಡಾಡುವಾಗ ಮಾಸ್ಕ್‌ ಧರಿಸುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ ಪಬ್‌, ಬಾರ್‌, ರೆಸ್ಟೋರೆಂಟ್‌, ಸಿನಿಮಾ ಹಾಲ್‌, ಶಾಪಿಂಗ್ ಮಾಲ್‌, ಕಚೇರಿ, ಬಸ್‌, ರೈಲು, ಮೆಟ್ರೋ, ವಿಮಾನಯಾನ ವೇಳೆ ಮಾಸ್ಕ್‌ ಧರಿಸಬೇಕು ಎಂದು ಗೈಡ್​​ಲೈನ್ಸ್​ನಲ್ಲಿ ತಿಳಿಸಲಾಗಿದೆ.

ಜನರು ಈ ಮೇಲಿನ ನಿಯಮಗಳನ್ನು ಪಾಲಿಸಲು ಪ್ರಕಟಣೆ ಮೂಲಕ ಆದೇಶ ನೀಡಲಾಗಿದೆ.