ಅನಗತ್ಯ ಕರೆಗಳಿಂದ ಬೇಸತ್ತಿದ್ದೀರಾ ? ಹಾಗಾದರೆ ಈ ಒಂದು ಸಣ್ಣ ಕೆಲಸ ಮಾಡಿ

ಈ ಮೊಬೈಲ್‌ ಎಂಬ ಸಾಧನ ಈಗ ಎಲ್ಲರಿಗೂ ಬಹಳ ಹತ್ತಿರವಾಗಿಬಿಟ್ಟಿದೆ. ಈ ಸಾಧನದಿಂದ ಎಷ್ಟು ಉಪಕಾರವಿದೆಯೋ ಅಷ್ಟೇ ಮನುಷ್ಯನಿಗೆ ಕಿರಿಕಿರಿ ಕೂಡಾ ಉಂಟು. ಅದರಲ್ಲೂ ಮುಖ್ಯವಾಗಿ ಈ ಸ್ಪ್ಯಾಮ್‌ ಕರೆಗಳು. ಅನಗತ್ಯ ಕರೆಗಳು. ಇಂತಹುವುಗಳಿಂದ ಬೇಸತ್ತ ಬಳಕೆದಾರರಿಗೆ ಪರಿಹಾರ ನೀಡಲು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಬಳಕೆದಾರರಿಗೆ ಒಂದು ಗುಡ್‌ ನ್ಯೂಸ್‌ ನೀಡಿದೆ. ಈ ಎಲ್ಲಾ ವಲಯಗಳಿಂದ ಎಲ್ಲಾ ಸ್ಪ್ಯಾಮ್ ಕರೆಗಳು ಮತ್ತು ಸಂದೇಶಗಳನ್ನು ನಿರ್ಬಂಧಿಸಲು ಅನುಮತಿ ಇದೆ. ಡು ನಾಟ್ ಡಿಸ್ಟರ್ಬ್ (DND) ಸೇವೆಯನ್ನು ಸಕ್ರಿಯಗೊಳಿಸುವ ಮೂಲಕ ನೀವು ಇಂತಹ ಕಿರಿಕಿರಿಯನ್ನು ತಪ್ಪಿಸಬಹುದಾಗಿದೆ.

ಬಳಕೆದಾರರಿಗೆ ಈ ಸಮಸ್ಯೆಯಿಂದ ಪರಿಹಾರ ನೀಡುವ ನಿಟ್ಟಿನಲ್ಲಿ TRAI ಟೆಲಿಕಾಂ ಸೇವಾ ಪೂರೈಕೆದಾರರಿಗೆ ಆದೇಶವನ್ನು ನೀಡಿದೆ. ಬಳಕೆದಾರರಿಗೆ ಡಿಎನ್ಡಿ ಸೇವೆಯನ್ನು ಪ್ರಾರಂಭಿಸಲು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಕಂಪನಿಗಳನ್ನು ಕೇಳಿದೆ.

ಭಾರತೀಯ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ (TRAI) ರಾಷ್ಟ್ರೀಯ ಗ್ರಾಹಕರ ಆದ್ಯತೆಯ ನೋಂದಣಿ (NCPR) ಅನ್ನು ಪ್ರಾರಂಭಿಸಿತು, ಈ ಹಿಂದೆ ರಾಷ್ಟ್ರೀಯ ಡೋಂಟ್ ಕಾಲ್ ರಿಜಿಸ್ಟ್ರಿ (NDNC) ಉಪಕ್ರಮವು ಸ್ಪ್ಯಾಮ್ ಕರೆಗಳನ್ನು ನಿರ್ಬಂಧಿಸಲು ಜನರಿಗೆ ಸಹಾಯ ಮಾಡುತ್ತದೆ. ಜನರು ಎಲ್ಲಾ ಟೆಲಿಮಾರ್ಕೆಟಿಂಗ್ ಸಂವಹನ ಅಥವಾ ಆಯ್ದ ವಲಯಗಳಿಂದ ಕರೆಗಳನ್ನು ನಿಲ್ಲಿಸಲು ಸೇವೆಗೆ ಸೈನ್-ಅಪ್ ಮಾಡಬಹುದು.

ಈ ವಿಧಾನದ ಮೂಲಕ ನೀವು ಸ್ಪ್ಯಾಮ್ ಅಥವಾ ಟೆಲಿಮಾರ್ಕೆಟಿಂಗ್ ಕರೆಗಳನ್ನು ತಪ್ಪಿಸ ಬಹುದು :
ಡು ನಾಟ್ ಡಿಸ್ಟರ್ಬ್ (DND) ಸೇವೆ ಬಳಸಬಹುದು. ಒಂದು ಎಸ್ಎಂಎಸ್ ಮೂಲಕ ಮತ್ತು ಇನ್ನೊಂದು ಕರೆ ಮೂಲಕ. ಈ ಎರಡು ಸುಲಭ ವಿಧಾನಗಳಲ್ಲಿ DND ಸೇವೆಯನ್ನು ಆನ್ ಮಾಡಬಹುದು.
ಎಸ್ಎಂಎಸ್ ಮೂಲಕ DND ಸೇವೆಯನ್ನು ಸಕ್ರಿಯಗೊಳಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:

  • ಇದಕ್ಕಾಗಿ ಮೊದಲು ನೀವು ಸಂದೇಶ ಅಪ್ಲಿಕೇಶನ್‌ಗೆ ಹೋಗಬೇಕು.
  • ಅಲ್ಲಿ START ಎಂದು ಟೈಪ್ ಮಾಡಿ.
  • ಈಗ ಈ ಸಂದೇಶವನ್ನು 1909 ಗೆ ಕಳುಹಿಸಿ.
  • ನಿಮ್ಮ ಟೆಲಿಕಾಂ ಸೇವಾ ಪೂರೈಕೆದಾರರು ನಿಮ್ಮ ವಿನಂತಿಯನ್ನು ದೃಢೀಕರಿಸುವ ಸಂದೇಶವನ್ನು ಕಳುಹಿಸುತ್ತಾರೆ.
  • DND ಸೇವೆಯು 24 ಗಂಟೆಗಳ ಒಳಗೆ ಪ್ರಾರಂಭವಾಗುತ್ತದೆ.

ಕರೆ ಮಾಡುವ ಮೂಲಕ DND ಸೇವೆಯನ್ನು ಸಕ್ರಿಯಗೊಳಿಸುವುದು ಹೇಗೆ?

  • ಮೊದಲು ಡಯಲರ್ ಅಪ್ಲಿಕೇಶನ್ ತೆರೆಯಿರಿ.
  • 1909 ಗೆ ಕರೆ ಮಾಡಿ.
  • ನೀವು ಕೆಲವು ಸೂಚನೆಗಳನ್ನು ಅನುಸರಿಸಬೇಕು.
  • ಇದನ್ನು ಮಾಡಿದ ನಂತರ, DND ಸೇವೆಯನ್ನು ಸಕ್ರಿಯಗೊಳಿಸಲಾಗುತ್ತದೆ.

ಇದಲ್ಲದೆ ನೀವು ನಿಮ್ಮ ಟೆಲಿಕಾಂ ಸೇವಾ ನಿರ್ವಾಹಕರ ಮೂಲಕವೂ DND ಅನ್ನು ನೋಂದಾಯಿಸಬಹುದು.

Leave A Reply

Your email address will not be published.