ಪ್ರಿಯತಮೆಯ ಮನೆಮುಂದೆ ವೀಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ! ಅಷ್ಟಕ್ಕೂ ಕಾರಣವೇನು ಗೊತ್ತೇ?

ಪ್ರೇಮಿಗಳಿಗೆ ಬಣ್ಣ, ವಯಸ್ಸು, ಹಣ, ಅಂತಸ್ತು, ಜಾತಿ, ಧರ್ಮ ಯಾವುದು ಲೆಕ್ಕಕ್ಕೆ ಇರಲ್ಲ. ಪ್ರೀತಿ ಒಂದೇ ಶಾಶ್ವತ ಅನ್ನೋ ವೇದಾಂತ ಪ್ರೀತಿಸುವವರಿಗೆ. ಆದರೆ ಹೆಣ್ಣು ಒಂದು ಮಾಯೆ ಯಾರನ್ನು ಯಾವಾಗ ಯಾಮಾರಿಸುತ್ತಾಳೆ ಅನ್ನೋದು ಊಹಿಸೋಕೆ ಸಾಧ್ಯ ಆಗಲ್ಲ. ಇನ್ನು ಹುಡುಗ ಹುಡುಗಿ ಒಪ್ಪಿದರೆ ಮನೆಯವರ ವಿರೋಧ ಗಳು ಹೀಗೆ ಪ್ರೀತಿ ಕೆಲವೊಮ್ಮೆ ಅನಾಹುತದಲ್ಲಿ ಕೊನೆಗೊಳ್ಳುವ ಎಷ್ಟೋ ನಿದರ್ಶನ ಕೇಳಿದ್ದೇವೆ ಮತ್ತು ನೋಡಿದ್ದೇವೆ. ಹಾಗೆಯೇ ಇಲ್ಲೊಬ್ಬ ಹುಡುಗಿಯ ಮನೆ ಮುಂದೆ ಕತ್ತಲಲ್ಲೆ ವಿಡಿಯೋ ಮಾಡುತ್ತಾ ಮರಕ್ಕೆ ನೇಣು ಬಿಗಿದುಕೊಂಡು ಸತ್ತಿದ್ದಾನೆ.

ಮೋಹನ್ ಎಂಬಾತ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಕೈ ತುಂಬಾ ಸಂಬಳ ಕೂಡ ಬರುತ್ತಿತ್ತು. ಈ ಮಧ್ಯೆ ತನ್ನ ಗ್ರಾಮದ ಪಕ್ಕದ ಯುವತಿ ಕಾವ್ಯ ಳನ್ನು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ. ಆ ಯುವತಿಯೂ ಅಷ್ಟೇ ಪ್ರೀತಿ ಮಾಡುತ್ತಿದ್ದಳು. ಎರಡು ಕುಟುಂಬದವರು ಮದುವೆ ಮಾಡಲು ಸಹ ಒಪ್ಪಿದ್ದರು. ಆದರೆ ಇದಕ್ಕಿದ್ದ ಹಾಗೆ ಯುವತಿ ಮನೆಯವರು ಮದುವೆಗೆ ನಿರಾಕರಿಸಿದ್ದಾರೆ.

ಮದುವೆ ನಿರಾಕರಣೆ ಕಾರಣದಿಂದ ಮನವೊಂದ ಆ ಯುವಕ ಅದೇ ಯುವತಿಯ ಮನೆ ಸಮೀಪವೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದೀಗ ಕುಟುಂಬಸ್ಥರು ಇದು ಆತ್ಮಹತ್ಯೆಯಲ್ಲ, ಕೊಲೆ ಎನ್ನುತ್ತಿದ್ದಾರೆ.

ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಹೊಸಪಾಳ್ಯ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಾಗಡಿ ತಾಲೂಕಿನ ದೊಡ್ಡಸೋಮನಹಳ್ಳಿ ಗ್ರಾಮದ ಮೋಹನ್ ಕುಮಾರ್ ಮರಣ ಹೊಂದಿರುವುದಾಗಿದೆ .

ದೊಡ್ಡಸೋಮನಹಳ್ಳಿ ಹಾಗೂ ಹೊಸಪಾಳ್ಯ ಅಕ್ಕಪಕ್ಕದ ಗ್ರಾಮಗಳಾಗಿದ್ದು ದೊಡ್ಡಸೋಮನಹಳ್ಳಿ ಗ್ರಾಮದ ಮೋಹನ್, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಪಕ್ಕದ ಗ್ರಾಮವಾದ ಹೊಸಪಾಳ್ಯದ ಕಾವ್ಯಾ ಎಂಬ ಯುವತಿಯನ್ನ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ. ಆಕೆ ಕೂಡ ಪ್ರೀತಿಸುತ್ತಿದ್ದಳು. ಎರಡು ಮನೆಯವರು ಸಹಾ ಮದುವೆ ಮಾಡಲು ಒಪ್ಪಿಗೆ ಸೂಚಿಸಿದ್ರು. ಈ ಮಧ್ಯೆ ಕಾವ್ಯಾಳ ಕುಟುಂಬಕ್ಕೆ ಕಷ್ಟ ಎಂಬ ಕಾರಣಕ್ಕೆ ಏಳು ಲಕ್ಷ ಹಣವನ್ನ ಸಹಾ ಮೋಹನ್ ಕೊಟ್ಟಿದ್ದನಂತೆ.
ಆದರೆ ಈ ಮಧ್ಯೆ ಮದುವೆಯಾಗಲು ಕಾವ್ಯ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಡೆತ್ ನೋಟ್ ಬರೆದಿಟ್ಟು, ಕತ್ತಲಲ್ಲೆ ವಿಡಿಯೋ ಮಾಡುತ್ತಾ ಮರಕ್ಕೆ ನೇಣು ಬಿಗಿದುಕೊಂಡು ಮೋಹನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ತಾಯಿ ಜಯಲಕ್ಷಮ್ಮ ಹೇಳಿದ್ದಾರೆ.

ಮೋಹನ್ ಆತ್ಮಹತ್ಯೆ ಮಾಡಿಕೊಂಡಿರೋ ವಿಚಾರ ಮೊದಲಿಗೆ ಕಾವ್ಯ ಕುಟುಂಬಕ್ಕೆ ತಿಳಿದಿದೆ. ಹೀಗಾಗಿ ಕೆಲವೊಂದು ಡೆತ್ ನೋಟ್ ಗಳನ್ನ ಎತ್ತಿಟ್ಟುಕೊಂಡಿದ್ದಾರೆ ಎಂಬುದು ಮೋಹನ್ ಕುಟುಂಬಸ್ಥರ ಆರೋಪ. ಅಲ್ಲದೆ ಮೋಹನ್ ಆತ್ಮಹತ್ಯೆ ಮಾಡಿಕೊಂಡಿಲ್ಲ. ಯುವತಿಯರ ಮನೆಯವರೆ ಕೊಲೆ ಮಾಡಿ ಮರಕ್ಕೆ ನೇಣು ಹಾಕಿದ್ದಾರೆ ಎಂದು ಕಾವ್ಯಾಳ ಕುಟುಂಬಸ್ಥರ ಮೇಲೆ ಆರೋಪ ಮಾಡುತ್ತಿದ್ದಾರೆ.

ಇನ್ನು ಕಾವ್ಯಾ, ಮೊಹನನನ್ನು ಪ್ರೀತಿ ಮಾಡಲು ಶುರು ಮಾಡಿದ ಮೇಲೆ ಬಹಳಷ್ಟು ಬಾರಿ ಮೋಹನ್ ಮನೆಗೆ ಬಂದಿದ್ದು, ಆದರೆ ಮತ್ತೊಬ್ಬ ಯುವಕ ಹೆಚ್ಚಿನ ಹಣ ಕೊಟ್ಟು ಮದುವೆಯಾಗಲು ಒಪ್ಪಿದ ಮೇಲೆ ಮೋಹನನನ್ನು ನಿರಾಕರಿಸಿದ್ದಾಳಂತೆ. ಇನ್ನು ಮೋಹನ್ ಸಹ ಸಾಯುವುದಕ್ಕೂ ಮೊದಲು ಡೆತ್ ನೋಟ್ ನಲ್ಲಿ ನನ್ನ ಸಾವಿಗೆ ಜಯರಾಮು, ಮಾರೇಗೌಡ, ಕಾವ್ಯಾಳ ತಾಯಿ ವರಲಕ್ಷಿ, ರಾಜು ಎಂಬುವವರು ಕಾರಣವೆಂದು ಉಲ್ಲೇಖ ಮಾಡಿದ್ದಾನೆ.

ಈ ಘಟನೆ ಕುರಿತಂತೆ ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವರಲಕ್ಷಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಉಳಿದವರು ತಲೆ ಮರೆಸಿಕೊಂಡಿದ್ದಾರೆ. ಒಟ್ಟಾರೆ ಪ್ರೀತಿಸಿದ ಯುವತಿ ಮದುವೆಯಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ತನ್ನ ಕುಟುಂಬವನ್ನು ಅನಾಥ ಮಾಡಿ ಪರಲೋಕ ಸೇರಿದ್ದಾನೆ.

Leave A Reply

Your email address will not be published.