ಈ ಸ್ಕೂಟರ್‌ಗೆ ಹೆಚ್ಚಿದ ಬೇಡಿಕೆ | ನೀವು ಊಹಿಸಲಸಾಧ್ಯವಾದ ರೀತಿಯಲ್ಲಿ ಮಾರಾಟ ಅದು ಕೂಡಾ ತೀರಾ ಕಡಿಮೆ ಬೆಲೆಯಲ್ಲಿ

ಜನರು ಅತಿಯಾಗಿ ಮೆಚ್ಚಿ ಹೆಚ್ಚು ಪ್ರಸಿದ್ಧಿ ಯಲ್ಲಿರುವ ಹೋಂಡಾ ಆಕ್ಟಿವಾ ಈಗಾಗಲೇ ಮಾರುಕಟ್ಟೆಯಲ್ಲಿ ಮಿಂಚುತ್ತಿದೆ. ಹೌದು ಭಾರತದಲ್ಲಿ ದ್ವಿಚಕ್ರ ವಾಹನಗಳು ಎಂದೊಡನೆ ಹೋಂಡಾ ಆಕ್ಟಿವಾ ಅಥವಾ ಟಿವಿಎಸ್ ಜೂಪಿಟರ್. ಆದರೆ, ಪ್ರಸ್ತುತ ದೇಶದಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಸ್ಕೂಟರ್ ಎಂದರೆ ಅದು ಟಿವಿಎಸ್ ಐಕ್ಯೂಬ್. ಅದರಲ್ಲೂ ಪ್ರಸ್ತುತ ಮಾರುಕಟ್ಟೆಯಲ್ಲಿ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮೂರು ರೂಪಾಂತರಗಳಾದ TVS iQube, TVS iQube S, TVS iQube ST ಲಭ್ಯವಿದೆ.

ಸದ್ಯ ಈ ವರ್ಷ ನವೆಂಬರ್ 2022 ರಲ್ಲಿ ಒಟ್ಟು 10,056 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದ್ದು, ಇದರ ಮಾರಾಟದಲ್ಲಿ 13.38% ಹೆಚ್ಚು ಮಾರಾಟವಾಗಿದೆ. ಅದಲ್ಲದೆ ಕಳೆದ ತಿಂಗಳೂ ಕೂಡ ಹೋಂಡಾ ಕಂಪನಿಯು ದಾಖಲೆಯ ಮಟ್ಟದಲ್ಲಿ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ ಎಂಬ ಮಾಹಿತಿ ಇದೆ.

ಪ್ರಸ್ತುತ ಟಾಪ್-10 ಮಾರಾಟವಾದ ಸ್ಕೂಟರ್‌ಗಳ ಪಟ್ಟಿಯಲ್ಲಿ ಇನ್ನೊಂದು ಕಂಪನಿಯ ಸ್ಕೂಟರ್ ಕೂಡ ಭಾರೀ ಬೇಡಿಕೆ ಕಂಡಿದೆ. ಅದೇ, ಟಿವಿಎಸ್ ಐಕ್ಯೂಬ್. ಈ ಎಲೆಕ್ಟ್ರಿಕ್ ಸ್ಕೂಟರ್ ಪ್ರಸ್ತುತ ಭಾರೀ ಬೇಡಿಕೆಯಿರುವ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. 2021ರ ನವೆಂಬರ್ ತಿಂಗಳಿಗೆ ಹೋಲಿಸಿದರೆ ಈ ವರ್ಷ ನವೆಂಬರ್‌ನಲ್ಲಿ ಈ ಸ್ಕೂಟರ್ 1000 ಪ್ರತಿಶತಕ್ಕಿಂತ ಹೆಚ್ಚು ಮಾರಾಟವಾಗಿದೆ ಎಂದು ಅಂಕಿಅಂಶಗಳಿಂದ ತಿಳಿದುಬಂದಿದೆ.

ಟಿವಿಎಸ್ ಕಂಪನಿಯ ಮೂಲಗಳ ಪ್ರಕಾರ, 2021ರ ನವೆಂಬರ್ ತಿಂಗಳಿನಲ್ಲಿ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಕೇವಲ 699 ಯುನಿಟ್‌ಗಳನ್ನು ಮಾತ್ರ ಮಾರಾಟ ಮಾಡಲಾಗಿತ್ತು. ಈ ವರ್ಷ ನವೆಂಬರ್‌ನಲ್ಲಿ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ನ ಒಟ್ಟು 10,056 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ವಾಲ್ಯೂಮ್ ಗಳಿಕೆಯ ಬಗ್ಗೆ ಹೇಳುವುದಾದರೆ, ನವೆಂಬರ್ 2021 ಕ್ಕಿಂತ ನವೆಂಬರ್ 2022 ರಲ್ಲಿ 9357 ಯುನಿಟ್‌ಗಳು ಹೆಚ್ಚು ಮಾರಾಟವಾಗಿವೆ.

ಅದಲ್ಲದೆ ನವೆಂಬರ್ 2022 ರಲ್ಲಿ ಟಾಪ್-10 ಹೆಚ್ಚು ಮಾರಾಟವಾದ ಸ್ಕೂಟರ್‌ಗಳ ಪಟ್ಟಿಯಲ್ಲಿ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಒಂಬತ್ತನೇ ಸ್ಥಾನದಲ್ಲಿದೆ. ಆದರೆ ವಾರ್ಷಿಕ ಆಧಾರದ ಮೇಲೆ ಮಾರಾಟದಲ್ಲಿನ ಹೆಚ್ಚಳವನ್ನು ನಾವು ಗಣನೆಗೆ ತೆಗೆದುಕೊಂಡರೆ, ಅದರ ಮಾರಾಟವು ಹೆಚ್ಚು ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

ಪ್ರಸ್ತುತ ಅತಿ ಹೆಚ್ಚು ಬೇಡಿಕೆಯಲ್ಲಿರುವ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1.67 ಲಕ್ಷ ರೂಪಾಯಿಗಳು ಆಗಿದೆ. ಆದರೆ, FAME II ಸಬ್ಸಿಡಿ ನಂತರ, ಅದರ ಆನ್-ರೋಡ್ ಬೆಲೆ 99 ಸಾವಿರ ರೂ.ಗಳು ಆಗಿದೆ.

ಟಿವಿಎಸ್ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, FAME II ಸಬ್ಸಿಡಿ ಅಡಿಯಲ್ಲಿ, ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಯ ಮೇಲೆ 51,000 ರೂಪಾಯಿಗಳ ರಿಯಾಯಿ ಲಭ್ಯವಿದೆ. ಇದರೊಂದಿಗೆ, 3 ವರ್ಷಗಳ ವಾರಂಟಿ ಮತ್ತು ಒಂದು ವರ್ಷದ ರೋಡ್ ಸೈಡ್ ಅಪಘಾತ ಸೌಲಭ್ಯವೂ ಇದರಲ್ಲಿ ಲಭ್ಯವಾಗಲಿದೆ.

ಹೌದು ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬೇಡಿಕೆ ಹೆಚ್ಚಾಗಿದ್ದು ಜನರು ಅತೀ ಕಡಿಮೆ ಬೆಲೆಯಲ್ಲಿ ಈ ಸ್ಕೂಟರನ್ನು ಖರೀದಿಸಬಹುದಾಗಿದ್ದು ಜೊತೆಗೆ 3 ವರ್ಷಗಳ ವಾರಂಟಿ ಮತ್ತು ಒಂದು ವರ್ಷದ ರೋಡ್ ಸೈಡ್ ಅಪಘಾತ ಸೌಲಭ್ಯವೂ ಇದರಲ್ಲಿ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.

Leave A Reply

Your email address will not be published.