ಈ ಬ್ಯಾಟರಿ ಒಂದು ಇದ್ದರೆ ಸಾಕು ಎಲೆಕ್ಟ್ರಿಕ್ ಕಾರು ಸಿಂಗಲ್ ಚಾರ್ಜ್‌ನಲ್ಲೇ 1260ಕಿಮೀ ಹೋಗುತ್ತೆ | ಅಂದ ಹಾಗೆ ಇದರ ಬೆಲೆ ನಿಜಕ್ಕೂ ಕಡಿಮೆ
ದಿನಂಪ್ರತಿ ಪ್ರತಿ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಈ ನಡುವೆ ಜನತೆ ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿರುವ ನಡುವೆ ಸಿಹಿ ಸುದ್ದಿಯೊಂದು ನಿಮಗಾಗಿ ಕಾದಿವೆ.
ಹೌದು!! ಈ ಬ್ಯಾಟರಿ ಇದ್ದರೆ ಅಗ್ಗದ ಎಲೆಕ್ಟ್ರಿಕ್ ಕಾರು ಸಿಂಗಲ್ ಚಾರ್ಜ್ ನಲ್ಲಿ ಕ್ರಮಿಸಬಹುದಾಗಿದ್ದು, 1260KM ದೂರದ ಜೊತೆಗೆ ಕೈಗೆ ಎಟಕುವ ದರದಲ್ಲಿ ನಿಮಗೆ ದೊರೆಯಲಿದೆ. ಲಿಥಿಯಂ ಬ್ಯಾಟರಿಗಳಿಗೆ ಹೋಲಿಸಿದರೆ ಈ ಬ್ಯಾಟರಿ ಅಗ್ಗವಾಗಿದ್ದು, ಇಷ್ಟೇ ಅಲ್ಲದೆ, ನಾಲ್ಕು ಪಟ್ಟು ಹೆಚ್ಚು ಎನರ್ಜಿ ಶೇಖರಣೆ ಮಾಡುವ ಸಾಮರ್ಥ್ಯ ಹೊಂದಿದೆ. ಇದನ್ನು ” ಸೀ ಸಾಲ್ಟ್ ಬ್ಯಾಟರಿ ” ಅಥವಾ “ಸೋಡಿಯಂ-ಸಲ್ಫರ್ ಬ್ಯಾಟರಿ” ಎನ್ನಲಾಗುತ್ತದೆ.
ಕೆಲ ವರದಿಗಳ ಅನುಸಾರ, ಸಿಡ್ನಿ ವಿಶ್ವವಿದ್ಯಾನಿಲಯದ ಸಂಶೋಧಕರು ಸಮುದ್ರದ ನೀರಿನಿಂದ ಬ್ಯಾಟರಿಗಳನ್ನು ತಯಾರಿಸಿದ್ದಾರೆ ಎನ್ನಲಾಗಿದ್ದು, ಲಿಥಿಯಂ ಬ್ಯಾಟರಿಗಳಿಗೆ ಹೋಲಿಸಿದರೆ ಈ ಬ್ಯಾಟರಿ ಅಗ್ಗವೆಂದು ಹೇಳಲಾಗುತ್ತಿದೆ. ಇಷ್ಟೇ ಅಲ್ಲದೆ, ನಾಲ್ಕು ಪಟ್ಟು ಹೆಚ್ಚು ಎನರ್ಜಿ ಸ್ಟೋರ್ ಮಾಡವ ಸಾಮರ್ಥ್ಯ ಹೊಂದಿದೆ. ಇದನ್ನು ” ಸೀ ಸಾಲ್ಟ್ ಬ್ಯಾಟರಿ ” ಅಥವಾ “ಸೋಡಿಯಂ-ಸಲ್ಫರ್ ಬ್ಯಾಟರಿ” ಎಂದು ಕರೆಯಲಾಗುತ್ತದೆ. ಇದರಲ್ಲಿ ಸೋಡಿಯಂ-ಸಲ್ಫರ್ ಅನ್ನು ಬಳಕೆ ಮಾಡಲಾಗುತ್ತದೆ.
ಸೋಡಿಯಂ-ಸಲ್ಫರ್ ಎಂದರೆ ಇದು ಕರಗಿದ ಉಪ್ಪು ಎಂದು ಪರಿಗಣಿಸಲಾಗುತ್ತದೆ. ಇದನ್ನು ಸಮುದ್ರದ ನೀರಿನಿಂದ ಪಡೆಯಲಾಗುತ್ತದೆ. ಈ ಸೋಡಿಯಂ ಬ್ಯಾಟರಿಯ ಬೆಲೆ ಈಗಿರುವ ಲಿಥಿಯಂ ಬ್ಯಾಟರಿಗಿಂತ ಬಹಳ ಅಗ್ಗವಾಗಿದ್ದು, ಇದರ ಜೊತೆಗೆ, ನಾಲ್ಕು ಪಟ್ಟು ಹೆಚ್ಚು ಪವರ್ ಸ್ಟೋರ್ ಮಾಡುವುದು ಕೂಡಾ ಸರಳವಾಗಲಿದೆ ಎಂದು ಪ್ರಧಾನ ಸಂಶೋಧಕ ಡಾ. ಶೋನ್ ಲಾಂಗ್ ಝಾವೋ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಟಾಟಾ ಟಿಯಾಗೊ ಇವಿ ನಂತಹ ಕೈಗೆಟುಕುವ ದರದ ಎಲೆಕ್ಟ್ರಿಕ್ ಕಾರುಗಳು ಕೂಡಾ ದೇಶದಲ್ಲಿದ್ದು, ಇದು ದೇಶದ ಅತ್ಯಂತ ಅಗ್ಗದ ಎಲೆಕ್ಟ್ರಿಕ್ ಕಾರು ಎಂದು ಪರಿಗಣಿಸಲಾಗಿದೆ. ಇದರ ಬೆಲೆ 8.49 ಲಕ್ಷಗಳಿಂದ ಆರಂಭವಾಗುತ್ತದೆ. ಇದು ಕಡಿಮೆ ರೇಂಜ್ ವೆರಿಯೇಂಟ್ ನ ಆರಂಭಿಕ ಬೆಲೆಯಾಗಿದೆ.
ಇದರ ನೆಕ್ಸ್ಟ್ ವೆರಿಯೇಂಟ್ ನ ಬೆಲೆ , 10.79 ಲಕ್ಷದಿಂದ ಶುರುವಾಗುತ್ತದೆ. ಆದ್ದರಿಂದ ಈ “ಸೀ ಸಾಲ್ಟ್ ಬ್ಯಾಟರಿ” ಅನ್ನು ಹೆಚ್ಚಿನ ರೇಂಜ್ ನೀಡುವ ಟಾಟಾ ಟಿಯಾಗೊ EV ಯ ಮೂಲ ರೂಪಾಂತರದಲ್ಲಿ ಬಳಸಿದರೆ, ಈ ಕಾರಿನ ಬೆಲೆ ಸುಮಾರು ಅರ್ಧದಷ್ಟು ಇಳಿಯುತ್ತದೆ. ಮಾತ್ರವಲ್ಲ ಮತ್ತು ನಾಲ್ಕು ಪಟ್ಟು ಹೆಚ್ಚು ರೇಂಜ್ ಕೂಡಾ ನಿಮಗೆ ಲಭ್ಯವಾಗಲಿದೆ.
ಸದ್ಯ, ಯಾವುದೇ ಎಲೆಕ್ಟ್ರಿಕ್ ಕಾರು ಖರೀದಿ ಮಾಡುವಾಗ ಜನರಿಗೆ ಎರಡು ದೊಡ್ಡ ಸವಾಲುಗಳು ಎದುರಾಗಲಿದ್ದು, ಇಲೆಕ್ಟ್ರಿಕ್ ಕಾರುಗಳು ಈಗಿರುವ ICE ಕಾರುಗಳಿಗಿಂತ ಹೆಚ್ಚು ದುಬಾರಿಯಾಗಿದೆ. ಇದರ ಜೊತೆಗೆ ಒಂದೇ ಚಾರ್ಜ್‌ನಲ್ಲಿ ಹೆಚ್ಚಿನ ರೇಂಜ್ ನೀಡುವುದು ಈ ಕಾರುಗಳಿಗೆ ತುಸು ಕಷ್ಟ ಎಂದು ಪರಿಗಣಿಸಲಾಗುತ್ತದೆ.
ಆದರೆ ಈಗ ತಂತ್ರಜ್ಞಾನ ಕ್ರಮೇಣ ಸುಧಾರಿಸುತ್ತಿದ್ದು, ಎಲೆಕ್ಟ್ರಿಕ್ ಕಾರುಗಳ ರೇಂಜ್ ಹೆಚ್ಚಿಸುವಲ್ಲಿ ಯಶಸ್ಸನ್ನು ಸಾಧಿಸಲಾಗುತ್ತಿದೆ. ಇದೀಗ ಮಾರುಕಟ್ಟೆಯಲ್ಲಿ 800 ಕಿಲೋ ಮೀಟರ್ ಗಿಂತ ಹೆಚ್ಚು ರೇಂಜ್ ನೀಡುವ ಕಾರುಗಳು ಲಭ್ಯವಿದ್ದು, ಆದರೆ ಅದರ ಬೆಲೆ ಕೂಡಾ ದುಬಾರಿಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ.