Home ಕೃಷಿ ರೈತರೇ ಗಮನಿಸಿ | ಈ ದಾಖಲೆಗಳ ಮೂಲಕ ಜಮೀನಿನ ಮೇಲಿನ ಸಾಲ ಮಾಹಿತಿಯನ್ನು ಈ ರೀತಿ...

ರೈತರೇ ಗಮನಿಸಿ | ಈ ದಾಖಲೆಗಳ ಮೂಲಕ ಜಮೀನಿನ ಮೇಲಿನ ಸಾಲ ಮಾಹಿತಿಯನ್ನು ಈ ರೀತಿ ತಿಳಿಯಿರಿ!!!

Hindu neighbor gifts plot of land

Hindu neighbour gifts land to Muslim journalist

ನೀವು ನಿಮ್ಮ ಜಮೀನಿನ ಮೇಲಿರುವ ಸಾಲದ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು ಎಂದಿದ್ದರೆ, ಇಲ್ಲಿದೆ ಇದರ ಬಗೆಗಿನ ಸಂಪೂರ್ಣ ವಿವರ. ಆದರೆ ಇದು ಪಹಣಿಯಿಂದ ಸಾಧ್ಯವಿಲ್ಲ. ಸಾಲದ ಮಾಹಿತಿಯನ್ನು ಪಡೆಯಲು ಎಂಕಂಬೆರಂನ್ಸ್ ಸರ್ಟಿಫಿಕೇಟ್ (EC) ಬೇಕಿದೆ.

ಇನ್ನೂ, ನೀವು ಬ್ಯಾಂಕಿನಲ್ಲಿ ಸಾಲ ತೆಗೆದುಕೊಳ್ಳುವಾಗ, ಬ್ಯಾಂಕಿನವರು ನಿಮ್ಮ ಪಹಣಿಯ ಮೇಲೆ ಭೋಜ ಕೂರಿಸಲು ಹೇಳುತ್ತಾರೆ. ಆದರೆ ನೀವು ಮೂರನೇ ವ್ಯಕ್ತಿಯ ಬಳಿ ನಿಮ್ಮ ಜಮೀನನ್ನು ಹಾಫ್ ನೋಂದಣಿ ಮಾಡಿ ಪಡೆದಿರುವ ಸಾಲದ ಮಾಹಿತಿಯನ್ನು ಪಹಣಿಯ ಮೂಲಕ ಪಡೆಯಲು ಸಾಧ್ಯವಿಲ್ಲ. ಪಹಣಿಯ ಮೂಲಕ ಕೇವಲ ನಿರ್ದಿಷ್ಟವಾಗಿ ಮಾಡಿದ ಸಾಲದ ಮಾಹಿತಿಯನ್ನು ಪಡೆಯಬಹುದು. ಅದರ EC ಯ ಮೂಲಕ ಎಲ್ಲಾ ಮಾಹಿತಿಯನ್ನು ನೀವು ಪಡೆಯಬಹುದು. ಹಾಗಾಗಿ ಬ್ಯಾಂಕ್ ನವರು EC ಸರ್ಟಿಫಿಕೇಟ್ ಅನ್ನು ತರಲು ಹೇಳುತ್ತಾರೆ.

ಹಾಗೇ ನೀವು ಯಾವುದಾದರೂ ಜಮೀನನ್ನು ಖರೀದಿಸಲಿದ್ದರೆ, ಮೊದಲು ನೀವು ಅದರ EC ಸರ್ಟಿಫಿಕೇಟ್ ಅನ್ನು ಚೆಕ್ ಮಾಡಿ, ಅದರ ಮೇಲೆ ಸಾಲ ಇದೆಯೋ? ಇಲ್ಲವೋ? ಎಂಬುದನ್ನು ಖಚಿತಪಡಿಸಿಕೊಳ್ಳಿ. ಅಲ್ಲದೆ, ನೀವು ಖರೀದಿಸುತ್ತಿರುವ ಭೂಮಿ ಯಾರಿಗಾದರೂ ಹಾಫ್ ನೋಂದಣಿ ಆಗಿದೆಯಾ ಎಂಬುದನ್ನು ಕೂಡ ಖಚಿತಪಡಿಸಿಕೊಳ್ಳಿ ನಂತರವೆ ಜಮೀನನ್ನು ಖರೀದಿಸಿ. ಒಂದು ವೇಳೆ ಹಾಪ್ ನೋಂದಣಿ ಆಗಿದ್ದರೆ, ಆ ಋಣವನ್ನು ಋಣ ಮುಕ್ತ ಮಾಡಿಸಿದ ನಂತರ ಖರೀದಿ ಮಾಡಬೇಕು. ಭೂಮಿ ಖರೀದಿ ಮಾಡಬೇಕಾದರೆ ಜಾಗೃತರಾಗಿರೋದು ಒಳ್ಳೆಯದು.

ಇನ್ನು, ಈ ಸರ್ಟಿಫಿಕೇಟ್ ಅನ್ನು ಹೇಗೆ ಪಡೆಯೋದು ಎಂಬುದರ ಮಾಹಿತಿ ಇಲ್ಲಿದೆ. ಇದನ್ನು ಆನ್ನೈನ್ ಹಾಗೂ ಆಫ್ಲೈನ್ ಎರಡರ ಮೂಲಕವೂ ಪಡೆಯಬಹುದು. ಇದಕ್ಕೆ ಬೇಕಾಗಿರುವ ದಾಖಲೆಗಳು ಯಾವುದೆಲ್ಲಾ ಎಂದರೆ, ಆಧಾರ್ ಕಾರ್ಡ್‌ ಪಹಣಿ ಪತ್ರ ಹಾಗೂ ಖಾತೆ ಉತಾರ. ಆಫ್ಲೈನ್ ಮೂಲಕ ಪಡೆಯಲು, ಅರ್ಜಿ ನಮೂನೆಯನ್ನು ಪಡೆದುಕೊಂಡು ಭರ್ತಿ ಮಾಡಿ. ಹಾಗೂ ದಾಖಲೆಗಳನ್ನು ಲಗತ್ತಿಸಿ ಸಂಬಂಧಪಟ್ಟ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ. ನಂತರ ನೀವು ನಿಮ್ಮ ಸರ್ಟಿಫಿಕೇಟ್ ಅನ್ನು ಪಡೆಯಬಹುದು.

ಇನ್ನೂ, ಆನ್ಲೈನ್ ಮೂಲಕ ಹೇಗೆ ಪಡೆಯುವುದೆಂದರೆ, ಈ ಸರ್ಟಿಫಿಕೇಟ್ ಅನ್ನು www.kaverionline.karnataka.gov.in
ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು.

ಈ ಸರ್ಟಿಫಿಕೇಟ್ ಬ್ಯಾಂಕಿನಲ್ಲಿ ನಿಮ್ಮ ಜಮೀನಿನ ಮೇಲೆ ಅಥವಾ ಮನೆಯ ಮೇಲೆ ಸಾಲ ಪಡೆದುಕೊಳ್ಳಲು ಬೇಕಾಗುತ್ತದೆ. ಹಾಗೂ ಸರ್ಕಾರ ನಿಮ್ಮ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುವಾಗ ಈ ಸರ್ಟಿಫಿಕೇಟ್ ಬೇಕಾಗುತ್ತದೆ. ಅಲ್ಲದೆ, ಈ ಸರ್ಟಿಫಿಕೇಟ್ ನೀವು ಹೊಸ ಜಮೀನು ಅಥವಾ ನಿವೇಶನವನ್ನು ಖರೀದಿಸುವಾಗ ಅದರ ಮೇಲೆ ಸಾಲ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಬೇಕಾಗುತ್ತದೆ. ಇಷ್ಟೆಲ್ಲಾ ಉಪಯೋಗಗಳಿವೆ ಈ ಸರ್ಟಿಫಿಕೇಟ್ ನಿಂದ ಹಾಗಾಗಿ ಇಂದೇ ಇದನ್ನು ಪಡೆದುಕೊಳ್ಳಿ.