ಮಕ್ಕಳ ಆರೋಗ್ಯ ಬಹಳ ಮುಖ್ಯ, ಶಾಲಾ ಸಮಯ ಬದಲಾಗಬೇಕು – ಹೃದ್ರೋಗ ಮಧ್ಯಾಹ್ನ ತಜ್ಞ ಡಾ.ಸಿ.ಎನ್. ಮಂಜುನಾಥ್​

7 ರಿಂದ 8 ವರ್ಷದ ಮಕ್ಕಳಿಗೆ ಹೆಚ್ಚು ನಿದ್ರೆ ಮಾಡಲೇಬೇಕು. ಆದರೆ, ಈಗಿನ ಶಾಲಾ ಅವಧಿಯಿಂದ ಮಕ್ಕಳಿಗೆ ತುಂಬಾ ಕಿರಿ ಕಿರಿಯಾಗುತ್ತಿದೆ. ಅಂದ್ರೆ, ಮಕ್ಕಳ ತನವನ್ನೇ ಕಿತ್ತುಕೊಂಡ ಹಾಗಿದೆ.

ನಿದ್ರೆ ಕಡಿಮೆ ಆದರೆ ದೇಹದಲ್ಲಿ ರೋಗನಿರೋಧಕ ಶಕ್ತಿಯು ಕಡಿಮೆ ಆಗುತ್ತದೆ. ಇದರಿಂದ ಅವರ ಆರೋಗ್ಯಕ್ಕೆ ನಾವೇ ಜವಬ್ದಾರರು ಎಂದು ಹೃದ್ರೋಗ ತಜ್ಞ ಡಾ. ಸಿ. ಎನ್​. ಮಂಜುನಾಥ್​ ಅವರು ಶಾಲಾ ಸಮಯ ಬದಲಾಗಬೇಕು ಎಂದು ತಿಳಿಸಿದ್ದಾರೆ. ಕನಿಷ್ಠ ಎರಡನೇ ತರಗತಿವರೆಗೆ ಶಾಲೆಯ ಸಮಯವನ್ನು ಬೆಳಗ್ಗೆ 10 ರಿಂದ ಮಧ್ಯಾಹ್ನ 12.30ರವರೆಗೆ ಬದಲಾವಣೆ ಮಾಡಬೇಕೆಂದು ಸಿದ್ಧಗಂಗಾ ಮಠದ ಶ್ರೀ ಗೋಸಲ ಸಿದ್ಧೇಶ್ವರ ವೇದಿಕೆಯಲ್ಲಿ ಭಾನುವಾರ ಈ ಮಾತನ್ನು ತಿಳಿಸಿದ್ದಾರೆ.

ಇದನ್ನು ಶ್ರೀ ಸಿದ್ಧಗಂಗಾ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘ ಆಯೋಜಿಸಿದ್ದ ಸರ್ವ ಸದಸ್ಯರ 66ನೇ ಮಹಾಧಿವೇಶನದಲ್ಲಿ “ಸಿದ್ಧಗಂಗಾ ಶ್ರೀ ಪ್ರಶಸ್ತಿ” ಸ್ವೀಕರಿಸಿ ಮಾತನಾಡಿದ ಡಾ. ಮಂಜುನಾಥ್​, ಕನಿಷ್ಠ ಎರಡನೇ ತರಗತಿವರೆಗೆ ಶಾಲೆಯ ಸಮಯವನ್ನು ಬದಲಾಯಿಸಲು ಆಗ್ರಹಿಸಲಾಗಿದೆ. ಇತ್ತೀಚಿನ ಕಾಲದಲ್ಲಿ ಮಕ್ಕಳಿಗೆ ಮೊಬೈಲ್​ ಮಕ್ಕಳ ಮೇಲೆ ದುಷ್ಪರಿಣಾಮವನ್ನು ಬೀರುತ್ತಾ ಇದೆ. ಮಕ್ಕಳ ಆರೋಗ್ಯದ ಮೇಲೆ ಗಾಢಪರಿಣಾಮ ಬೀರುತ್ತಿದೆ. ದೈಹಿಕ ಆರೋಗ್ಯ ಮಾತ್ರವಲ್ಲ ಮಾನಸಿಕವಾಗಿ ಆರೋಗ್ಯ ಹದಗೆಡುತ್ತಾ ಇದೆ. ಇದಕ್ಕಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

Leave A Reply

Your email address will not be published.