IVF Treatement : ರಾಜ್ಯದ ಮಹಿಳೆಯರಿಗೊಂದು ಭರ್ಜರಿ ಗುಡ್‌ನ್ಯೂಸ್‌ ನೀಡಿದ ಸರಕಾರ

ಇತ್ತೀಚಿಗೆ ಐವಿಎಫ್ ಚಿಕಿತ್ಸೆಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ ಖಾಸಗೀ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆಗಾಗಿ ಹೆಚ್ಚು ವೆಚ್ಚ ಭರಿಸೋದಕ್ಕೆ ಬಡ, ಮಧ್ಯಮ ವರ್ಗದವರಿಗೆ ಕಷ್ಟವಾಗಿದೆ. ಆದರೆ ಮಹಿಳೆಯರು ಐವಿಎಫ್ ಚಿಕೆತ್ಸೆಗಾಗಿ ಖಾಸಗಿ ಆಸ್ಪತ್ರೆ ಗೆ ಇನ್ನು ಮುಂದೆ ಭೇಟಿ ನೀಡುವ ಅವಶ್ಯಕತೆ ಇರುವುದಿಲ್ಲ. ಹೌದು ಇನ್ನುಮುಂದೆ ಖಾಸಗಿ ಆಸ್ಪತ್ರೆಗಳಲ್ಲಿ ಸಿಗುತ್ತಿರುವಂತ ಐವಿಎಫ್ ಚಿಕಿತ್ಸಾ ( IVF Treatment ) ಸೌಲಭ್ಯವನ್ನು ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿಯೂ ದೊರೆಯುವಂತೆ, ಕ್ಲಿನಿಕ್ ಗಳನ್ನು ಪ್ರಾರಂಭಿಸಲು ಸರ್ಕಾರ ಮುಂದಾಗಿದೆ.

ಈ ಕುರಿತಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಗೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ ವಾಣಿವಿಲಾಸ ಆಸ್ಪತ್ರೆಯು ಪ್ರಸ್ತಾವನೆಯನ್ನು ಮನವಿ ಸಲ್ಲಿಸಿದೆ ಎಂದು ತಿಳಿದು ಬಂದಿದೆ.

ಈ ಕುರಿತಂತೆ ಮನವಿಗೆ ಪ್ರತಿಕ್ರಿಯಿಸಿದಂತ ಸಚಿವ ಸುಧಾಕರ್ ಪ್ರಕಾರ ಬದಲಾದ ಜೀವನ ಶೈಲಿಯಿಂದ ಜನರಲ್ಲಿ ಫಲಪತ್ತತೆ ದರ ಕುಸಿಯುತ್ತಿದೆ. ಇದರಿಂದಾಗಿ ಐವಿಎಫ್ ಚಿಕಿತ್ಸೆಗೆ ಬೇಡಿಕೆ ಹೆಚ್ಚುತ್ತಿದೆ. ಆದರೇ ಖಾಸಗೀ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆಗಾಗಿ ಹೆಚ್ಚು ವೆಚ್ಚ ಭರಿಸೋದಕ್ಕೆ ಬಡ, ಮಧ್ಯಮ ವರ್ಗದವರಿಗೆ ಕಷ್ಟವಾಗಿದೆ. ಹೀಗಾಗಿ ಸರ್ಕಾರಿ ವ್ಯವಸ್ಥೆಯಡಿ ಐವಿಎಫ್ ಚಿಕಿತ್ಸೆ ಪ್ರಾರಂಭಿಸುವ ಅಗ್ಯವಿದೆ ಎಂದಿದ್ದಾರೆ.

ಸದ್ಯ ರಾಜ್ಯ ಸರ್ಕಾರದಿಂದ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಹಾಗೂ ಕಲಬುರಗಿಯಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಐವಿಎಫ್ ಕ್ಲಿನಿಕ್ ಗಳನ್ನು ಸ್ಥಾಪಿಸುವ ಯೋಜನೆಯಿದೆ. ಈ ಮೂಲಕ ಕೈಗೆಟುಕುವ ದರ ಅಥವಾ ಉಚಿತವಾಗಿ ಚಿಕಿತ್ಸೆ ಒದಗಿಸುವ ಯೋಚನೆಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ. ಇದರಿಂದಾಗಿ ಮಹಿಳೆಯರಿಗೆ ಅಪಾರ ಪ್ರಯೋಜನ ಆಗಲಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

Leave A Reply

Your email address will not be published.