ಎಷ್ಟೇ ಚಳಿ ಇದ್ರೂ ಉಷ್ಣತೆ ಹೆಚ್ಚಿಸುತ್ತೆ ಈ ಸಾಧನ | ಜಸ್ಟ್ ನಿಮ್ಮ ಜೇಬಲ್ಲಿ ಇಟ್ರೆ ಸಾಕು
ಚಳಿಗಾಲದಲ್ಲಿ ಚಳಿಯನ್ನು ತಡೆದುಕೊಳ್ಳಲಾಗದೆ ಹಲವಾರು ಜನರು ಸ್ವೆಟರ್, ಹೀಟರ್ ನಂತಹ ಸಾಧನಗಳನ್ನು ಬಳಸುತ್ತಾರೆ. ಆದರೆ ಇದು ಮನೆಯಲ್ಲಿ ಮಾತ್ರ ಬಳಸಬಹುದು. ಹೊರಗಡೆ ಹೋದಾಗ ಚಳಿಯನ್ನು ತಡೆದುಕೊಳ್ಳಲೇಬೇಕು. ಆದರೆ ಇದೀಗ ಟೆಕ್ನಾಲಜಿ ಕಂಪನಿಯೊಂದು ಪಾಕೆಟ್ ಹೀಟರ್ ಅನ್ನು ಪರಿಚಯಿಸಿದೆ. ಚಳಿಗಾಲದಲ್ಲಿ ಈ ಪಾಕೆಟ್ ಹೀಟರ್ ಜೇಬಿನಲ್ಲಿ ಇಟ್ಟುಕೊಂಡು ಎಲ್ಲಿ ಬೇಕಾದರೂ ಸುತ್ತಾಡಬಹುದು.
ಟೆಕ್ನಾಲಜಿ ಮಾರುಕಟ್ಟೆಯಲ್ಲಿ ಲಾಂಚ್ ಆಗಿರುವ ಪಾಕೆಟ್ ಹೀಟರ್ನ ಹೆಸರು ಪ್ಲೇಸ್ಹ್ಯಾಬ್ ಗೋಲ್ಡನ್ ಪಾಕೆಟ್ ಹೀಟರ್ ಎಂದಾಗಿದ್ದು, ಈ ಪ್ಲೇಸ್ಹ್ಯಾಬ್ ಗೋಲ್ಡನ್ ಪಾಕೆಟ್ ಹೀಟರ್ ಅನ್ನು ಗ್ರಾಹಕರು ಪ್ರಮುಖ ಇಕಾಮರ್ಸ್ ವೆಬ್ಸೈಟ್ ಆಗಿರುವ ಅಮೆಜಾನ್ ಮೂಲಕ ಖರೀದಿ ಮಾಡಬಹುದಾಗಿದೆ. ಇದು ಬಳಕೆದಾರರಿಗೆ ಚಳಿಗಾಲದಲ್ಲಿ ದೇಹದ ಉಷ್ಣತೆ ಹೆಚ್ಚಿಸಿ, ಉತ್ತಮ ಅನುಭವವನ್ನು ನೀಡುತ್ತದೆ.
ಹಾಗೇ ಈ ಪ್ಲೇಸ್ಹ್ಯಾಬ್ ಪಾಕೆಟ್ ಹೀಟರ್ ಅನ್ನು ನೀವು ಎಲ್ಲಿ ಹೋಗುತ್ತಿರೋ ಅಲ್ಲಿಗೆ ಕೊಂಡೊಯ್ಯಬಹುದು. ಇದನ್ನು ನಿಮ್ಮ ಬೆಡ್ರೂಮ್, ಲಿವಿಂಗ್ ರೂಮ್ಗಳಲ್ಲಿ ಇಟ್ಟುಕೊಂಡು ಬಳಸಬಹುದು. ಹೊರಗಡೆ ಹೋಗಬೇಕಾದರೆ ಪಾಕೆಟ್ ನಲ್ಲಿ ಇಟ್ಟುಕೊಳ್ಳಿ. ಆಗ ನಿಮ್ಮ ದೇಹವನ್ನು ಇದು ಬೆಚ್ಚಗಿರಿಸುತ್ತದೆ.
ಇನ್ನೂ ಇದರ ಫೀಚರ್ಸ್ ಹೀಗಿದೆ. ಈ ಪ್ಲೇಸ್ಹ್ಯಾಬ್ ಗೋಲ್ಡನ್ ಪಾಕೆಟ್ ಹೀಟರ್ 5200mAh ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದ್ದು, ಇದರಲ್ಲಿ ಚಾರ್ಜಿಂಗ್ ಕೇಬಲ್ ಅನ್ನು ಕೂಡ ನೀಡಲಾಗಿದೆ. ಇದರಿಂದ ನೀವು ಎಲ್ಲಿ ಬೇಕಾದರು ಚಾರ್ಜ್ ಮಾಡಿಕೊಳ್ಳಬಹುದು.
ಇನ್ನೂ ಇದನ್ನು ಹೇಗೆ ಬಳಸುವುದು ಎಂದರೆ, ಪ್ಲೇಸ್ಹ್ಯಾಬ್ ಗೋಲ್ಡನ್ ಪಾಕೆಟ್ ಹೀಟರ್ ಅನ್ನು ಪಾಕೆಟ್ನಲ್ಲಿ ಅಥವಾ ಎಲ್ಲಿಗಾದರು ತೆಗೆದುಕೊಂಡು ಹೋಗಬೇಕಾದರೆ ಅದರ ಪವರ್ ಬಟನ್ ಆನ್ ಮಾಡಬೇಕು ಆಗ ಈ ಸಾಧನ ಕಾರ್ಯನಿರ್ವಹಿಸುತ್ತದೆ.
ಹಾಗೇ ಇದೇ ರೀತಿಯ ಹೀಟರ್ ಜ್ಯಾಕೆಟ್ ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರ ಹೆಸರು ಐಹೆಚ್ಜಿ ಹೀಟೆಡ್ ವೆಸ್ಟ್ ಆಗಿದ್ದು, ಇದು ಸಾಮಾನ್ಯ ಜಾಕೆಟ್ಗಿಂತ ಹೆಚ್ಚು ಬಿಸಿಯಾಗಿರುತ್ತದೆ. ಹಾಗೇ ಸಾಮಾನ್ಯ ಜಾಕೆಟ್ ಗಿಂತ ವಿಭಿನ್ನವಾಗಿದೆ. ಇದರಲ್ಲಿ ಪವರ್ಬಟನ್ ಆನ್ ಮಾಡುವ ಮೂಲಕ ಈ ಜಾಕೆಟ್ ಬಿಸಿಯಾಗುತ್ತದೆ. ಹಾಗೇ ಜಾಕೆಟ್ನ ಹಿಂಭಾಗದಲ್ಲಿ ಹೀಟಿಂಗ್ ಎಲಿಮೆಂಟ್ ಮತ್ತು ಯುಎಸ್ಬಿ ಪ್ಲಗ್ ಅನ್ನು ಕೂಡ ಅಳವಡಿಸಲಾಗಿದೆ. ಇದರಲ್ಲಿ ಆನ್ ಆದ ತಕ್ಷಣ ಎಲ್ಇಡಿ ಲೈಟ್ ಆನ್ ಆಗುತ್ತದೆ. ಇನ್ನೂ ಈ ಜಾಕೆಟ್ ವಿವಿಧ ಇ-ಕಾಮರ್ಸ್ ವೆಬ್ಸೈಟ್ಗಳಲ್ಲಿ ಲಭ್ಯವಿದೆ. ಹಾಗೇ ಅತಿಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದನ್ನ ಅಮೆಜಾನ್ನಿಂದ ಕೇವಲ ₹ 3709 ಕ್ಕೆ ಖರೀದಿಸಬಹುದಾಗಿದೆ.