ಬಾತ್‌ರೂಂನಲ್ಲಿ ಗೀಸರ್ ಫಿಟ್ ಮಾಡುವಾಗ ಈ ತಪ್ಪು ಖಂಡಿತ ಮಾಡಬೇಡಿ
ಮನೆಯಲ್ಲಿ ಅಡಿಗೆ ಮನೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಬಾತ್ ರೂಮ್ ಸಹ ಆಗಿರುತ್ತದೆ. ಇನ್ನು ಬಾತ್ ರೂಮ್ ನಲ್ಲಿ ಮುಖ್ಯವಾಗಿ ಗೀಸರ್ ಇರುವುದು ಸಾಮಾನ್ಯ. ಆದರೆ ಗೀಸರ್ ಎಷ್ಟು ಉಪಯೋಗಕಾರಿಯೋ ಅಷ್ಟೇ ಅಪಾಯಕಾರಿಯೂ ಹೌದು ಇದು ನಮಗೆ ಗೊತ್ತಿರುವ ವಿಚಾರ . ಅದಲ್ಲದೆ ಗೀಸರ್ ನಿಂದಾಗಿ ಎಷ್ಟೋ ಅಪಾಯಗಳು ಆಗಿರುವುದನ್ನು ಕೇಳಿದ್ದೇವೆ ಮತ್ತು ನೋಡಿದ್ದೇವೆ. ಆದ್ದರಿಂದ ಗೀಸರ್ ಬಗೆಗಿನ ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
- ISI ಗುರುತು ಇರುವ ಗೀಸರ್ ಅನ್ನೇ ಖರೀದಿಸಿ ಇದು
ಅಗ್ಗದ ಬೆಲೆಗೆ ಸಿಗುತ್ತದೆ ಎನ್ನುವ ಕಾರಣಕ್ಕೆ ಜನ ಲೋಕಲ್ ಗೀಸರ್‌ಗಳನ್ನು ಖರೀದಿಸುತ್ತಾರೆ. ಇವುಗಳಲ್ಲಿ ISI ಗುರುತು ಇರುವುದಿಲ್ಲ. ಗೀಸರ್ ಖರೀದಿಸಬೇಕಾದರೆ, ISI ಮಾರ್ಕ್ ಹೊಂದಿರುವ ಗೀಸರ್ ಅನ್ನು ಮಾತ್ರ ಖರೀದಿಸಿ. ಲೋಕಲ್ ಗೀಸರ್‌ಗಳು ಕಡಿಮೆ ಸ್ಟಾರ್ ರೇಟಿಂಗ್‌ನೊಂದಿಗೆ ಬರುತ್ತವೆ. ಈ ಕಾರಣದಿಂದಾಗಿ ವಿದ್ಯುತ್ ಬಳಕೆ ಹೆಚ್ಚಾಗಿರುತ್ತದೆ ಮಾತ್ರವಲ್ಲ ಅವುಗಳು ಶಾಕ್‌ಪ್ರೂಫ್ ಕೂಡಾ ಆಗಿರುವುದಿಲ್ಲ. - ಜನರು ಅಗತ್ಯವಿರುವ ಸಮಯದಲ್ಲಿ ಗೀಸರ್ ಅನ್ನು ಆನ್ ಮಾಡುತ್ತಾರೆ. ಆದರೆ ಕೆಲಸ ಮುಗಿದ ನಂತರ ಗೀಸರ್ ಅನ್ನು ಆಫ್ ಮಾಡಲು ಮರೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಸ್ವಯಂಚಾಲಿತವಾಗಿ ಆಫ್ ಹೊಂದಿರುವ ಗೀಸರ್‌ಗಳು ಬರಲಾರಂಭಿಸಿವೆ. ಆದರೆ ಈಗಲೂ ಹಳೆಯ ಗೀಸರ್ ಬಳಸುವವರಿಗೆ ಈ ಸೌಲಭ್ಯ ಲಭ್ಯ ಇರುವುದಿಲ್ಲ. ಗೀಸರ್ ಬಹಳ ಸಮಯದವರೆಗೆ ಆನ್ ಆಗಿದ್ದರೆ, ಗೀಸರ್‌ನಲ್ಲಿ ಸ್ಫೋಟದ ಸಂಭವ ಹೆಚ್ಚು.
- ಹೊಸ ಗೀಸರ್ ಖರೀದಿಸಿ ತರುವಾಗ, ಕಂಪನಿ ಯವರು ಬಂದು ಇನ್ಸ್ಟಾಲ್ ಮಾಡುವುದು ತಡವಾಗುತ್ತದೆ ಎನ್ನುವ ಕಾರಣಕ್ಕೋ, ಅಥವಾ ದುಡ್ಡು ಉಳಿಸುವ ಕಾರಣಕ್ಕೋ ಕೆಲವರು ತಾವಾಗಿಯೇ ಗೀಸರ್ ಅಳವಡಿಸಲು ಮುಂದಾಗುತ್ತಾರೆ. ಆದರೆ ಹೀಗೆ ಮಾಡುವುದು ಅಪಾಯ. ಯಾವಾಗಲೂ ಗೀಸರ್ ಫಿಟ್ ಮಾಡಲು ಎಂಜಿನಿಯರ್ ಸಹಾಯವನ್ನೇ ಪಡೆಯಿರಿ.
- ವಿದ್ಯುತ್ ಗೀಸರ್ ಗಳು ದುಬಾರಿಯಾಗಿ ಪರಿಣಮಿಸುತ್ತವೆ ಎನ್ನುವ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಜನ ಗ್ಯಾಸ್ ಗೀಸರ್ ಕಡೆಗೆ ಮುಖ ಮಾಡುತ್ತಾರೆ. ಈ ಗೀಸರ್‌ಗಳು ಇಂಗಾಲದ ಡೈಆಕ್ಸೈಡ್ ಅನ್ನು ಉತ್ಪಾದಿಸುವ ಬ್ಯುಟೇನ್ ಮತ್ತು ಪ್ರೋಪೇನ್ ಎಂಬ ಅನಿಲವನ್ನು ಹೊಂದಿರುತ್ತವೆ. ಸ್ನಾನದ ಮನೆಯಲ್ಲಿ ಗ್ಯಾಸ್ ಗೀಸರ್ ಅನ್ನು ಹಾಕಿದ್ದಾರೆ ಸ್ನಾನ ಮಾಡುವಾಗ ಎಕ್ಸಾಸ್ಟ್ ಫ್ಯಾನ್ ಅನ್ನು ಆನ್ ಮಾಡಿಕೊಳ್ಳಿ.
- ಬಾತ್ ರೂಂನಲ್ಲಿ ಗೀಸರ್ ಅನ್ನು ಫಿಟ್ ಮಾಡುವಾಗ ಜನರು ಸಾಮಾನ್ಯವಾಗಿ ತಪ್ಪುಗಳನ್ನು ಮಾಡುತ್ತಾರೆ. ಅದೇನೆಂದರೆ ಗೀಸರ್ ಅನ್ನು ಕೆಳಗೆ ಫಿಟ್ ಮಾಡುತ್ತಾರೆ. ಮನೆಯಲ್ಲಿ ಮಕ್ಕಳಿದ್ದರೆ, ಈ ತಪ್ಪು ಮಾಡದಿರುವುದು ಉತ್ತಮ.
ಹೀಗೆ ಗೀಸರ್ ಬಳಸುವಾಗ ಮತ್ತು ಬಳಸುವ ಮುನ್ನ ಮುನ್ನೆಚ್ಚರಿಕೆ ವಹಿಸುವುದರಿಂದ ಅಪಾಯವನ್ನು ತಪ್ಪಿಸಿಕೊಳ್ಳಬಹುದಾಗಿದೆ.