Home News ದೇವಸ್ಥಾನದಲ್ಲಿ ವ್ಯಕ್ತಿಯೋರ್ವನಿಂದ ಅಸಭ್ಯ ವರ್ತನೆ| ಮಹಿಳೆಯರ ಎದುರು ಖಾಸಗಿ ಅಂಗ ಪ್ರದರ್ಶನ, ವೀಡಿಯೋ ವೈರಲ್!!!

ದೇವಸ್ಥಾನದಲ್ಲಿ ವ್ಯಕ್ತಿಯೋರ್ವನಿಂದ ಅಸಭ್ಯ ವರ್ತನೆ| ಮಹಿಳೆಯರ ಎದುರು ಖಾಸಗಿ ಅಂಗ ಪ್ರದರ್ಶನ, ವೀಡಿಯೋ ವೈರಲ್!!!

Hindu neighbor gifts plot of land

Hindu neighbour gifts land to Muslim journalist

ಮನುಷ್ಯರು ಎಲ್ಲಿ ಹೇಗೆ ವರ್ತಿಸುತ್ತಾರೆ ಎಂಬುದನ್ನು ಊಹಿಸಲು ಸಹ ಸಾಧ್ಯವಿಲ್ಲ. ಅದಲ್ಲದೆ ಕಾಮುಕರ ಅಟ್ಟಹಾಸ ಇತ್ತೀಚಿಗೆ ಮಿತಿಮೀರುತ್ತಿದೆ. ಈ ಕುರಿತಂತೆ ಇಂದೋರ್‌ನ ಶಿವ ದೇವಾಲಯದೊಳಗೆ ವ್ಯಕ್ತಿಯೊಬ್ಬರು ಕುಳಿತು ಬರುವ ಮಹಿಳೆಯರಿಗೆ ತನ್ನ ಖಾಸಗಿ ಅಂಗಗಳನ್ನು ತೋರಿಸಿ ಅಶ್ಲೀಲವಾಗಿ ವರ್ತಿಸಿರುವ ಹೀನಾಯ ಘಟನೆ ನಡೆದಿದೆ.

ಸದ್ಯ ಆರೋಪಿಯನ್ನು ವಾಸಿಂ ಎಂದು ಗುರುತಿಸಲಾಗಿದ್ದು ಜನರ ದೂರಿನ ಮೇರೆಗೆ ವ್ಯಕ್ತಿಯನ್ನು ಬಂಧಿಸಲಾಗಿದೆ. ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪ್ರಕಾಶ್ ನಗರದ ವಿಶ್ವೇಶ್ವರ ಮಹಾದೇವ ದೇವಸ್ಥಾನದಲ್ಲಿ ವಾಸಿಂ ಎಂಬವನು ದೇವಸ್ಥಾನದ ಒಳಗೆ ಹೋಗಿ ಕುಳಿತಿದ್ದಾನೆ. ನಂತರ ತನ್ನ ಖಾಸಗಿ ಅಂಗವನ್ನು ತೋರಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಸದ್ಯ ಮಾಹಿತಿ ಪಡೆದ ಪೊಲೀಸರು ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

ಪೊಲೀಸ್ ಮಾಹಿತಿ ಪ್ರಕಾರ ಆರೋಪಿಯು ನಶೆಯಲ್ಲಿದ್ದು, ಆತನೊಬ್ಬ “ ಮಾದಕ ವ್ಯಸನಿಯಾಗಿದ್ದಾನೆ. ಆತನ ವಿರುದ್ಧ ಎನ್‌ಎಸ್‌ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತಿದೆ.

ಅದಲ್ಲದೆ ಆತನ ಚಟುವಟಿಕೆ ಮತ್ತು ಹಿನ್ನೆಲೆ ಬಗ್ಗೆ ಮಾಹಿತಿ ಸಂಗ್ರಹಿಸಿ ವಿಚಾರಣೆ ನಡೆಸುವುದಾಗಿ ಪೊಲೀಸರು ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ.