ಮತ್ತೊಂದು ಪೀಸ್‌ ಪೀಸ್‌ ಪ್ರಕರಣ | ಪಾಪಿ ಪತಿಯಿಂದಲೇ ನಡೆಯಿತು ಪತ್ನಿಯ ಭೀಕರ ಹತ್ಯೆ | ಈತನಾಡಿದ ನಾಟಕಕ್ಕೆ ಮನೆಯವರೇ ಬೆಸ್ತು

Share the Article

ದೇಶದಲ್ಲಿ ಹತ್ಯೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಈ ಹಿಂದೆ ನಡೆದ ಶ್ರದ್ಧಾ ವಾಕರ್ ಭೀಕರ ಹತ್ಯೆ ಪ್ರಕರಣದಂತೆ ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಕೊಂದು ಆಕೆಯ ದೇಹವನ್ನು 12 ತುಂಡುಗಳಾಗಿ ಪೀಸ್ ಮಾಡಿರುವ ಆಘಾತಕಾರಿ ಘಟನೆ ಜಾರ್ಖಂಡ್‌ ನ ಸಾಹೇಬ್‌ ಜಂಗ್‌ ಜಿಲ್ಲೆಯಲ್ಲಿ ನಡೆದಿದೆ.

ಪೊಲೀಸರ ಹೇಳಿಕೆಯ ಪ್ರಕಾರ, ಮೃತ ರೂಬಿಕಾ ಪಹಾಡಿನ್ ಎಂಬಾಕೆ ದಿಲ್ದಾರ್‌ ನ ಎರಡನೇ ಪತ್ನಿಯಾಗಿದ್ದರು. ಹಾಗೂ ಕಳೆದ ಎರಡು ವರ್ಷಗಳಿಂದ ಇವರಿಬ್ಬರು ಜೊತೆಯಾಗಿದ್ದರು. ಕೆಲವು ದಿನಗಳ ಬಳಿಕ ಆಕೆ ನಾಪತ್ತೆಯಾಗಿದ್ದಾರೆ ಎಂದು ಮೃತ ಮಹಿಳೆಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು ಎನ್ನಲಾಗಿದೆ.

ತನಿಖೆಯ ವೇಳೆ ಪತಿಯ ಬಣ್ಣ ಬಯಲಾಗಿದ್ದು, ಪತಿ ದಿಲ್ದಾರ್‌ ಅನ್ಸಾರಿ ಕೊಲೆ ಮಾಡಿ ಆಕೆಯ ದೇಹವನ್ನು 12 ಭಾಗಗಳಾಗಿ ತುಂಡರಿಸಿದ್ದ ಎಂಬುದು ಬೆಳಕಿಗೆ ಬಂದಿದೆ. ಸಂತಾಲಿ ವೊಮಿನ್‌ ಟೋಲ್‌ ಬಳಿಯ ಹಳೆಯ ಮನೆಯೊಂದರಲ್ಲಿ ಆದಿವಾಸಿ ಬುಡಕಟ್ಟು ಸಮುದಾಯಕ್ಕೆ ಸೇರಿದ 22 ವರ್ಷದ ಮಹಿಳೆಯ ಕೊಳೆತು ದೇಹದ 12 ಭಾಗಗಳು ಪತ್ತೆಯಾಗಿವೆ. ಉಳಿದ ದೇಹದ ಭಾಗಗಳ ಹುಡುಕಾಟ ನಡೆಸಲಾಗುತ್ತಿದೆ. ಆರೋಪಿ ದಿಲ್ದಾರ್ ಅನ್ಸಾರಿಯನ್ನು ಬಂಧಿಸಲಾಗಿದ್ದು, ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಸಾಹೇಬ್‌ಗಂಜ್ ಎಸ್‌ಪಿ ತಿಳಿಸಿದ್ದಾರೆ.

Leave A Reply