ಪ್ರೊ ಕಬಡ್ಡಿ ಕಣದಲ್ಲಿ ಮತ್ತೆ ಚಾಂಪಿಯನ್ ಆಗಿ ಹೊರಹೊಮ್ಮಿದ ಜೈಪುರ್ ಪಿಂಕ್ ಪ್ಯಾಂಥರ್ಸ್

Share the Article

ಮುಂಬೈ: ಪ್ರೋ ಕಬಡ್ಡಿಯ 9ನೇ ಆವೃತ್ತಿಯ ಆಟ ಇಂದಿಗೆ ಮುಕ್ತಾಯಗೊಂಡಿದ್ದು, ಚೊಚ್ಚಲ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಮತ್ತೊಂದು ಬಾರಿ ಇದೀಗ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪುಣೇರಿ ಪಲ್ಟನ್ ತಂಡವನ್ನು ಸೋಲಿಸಿ ಅಭಿಷೇಕ್ ಬಚ್ಚನ್ ನಾಯಕತ್ವದ, ಸಂಜೀವ್ ಬಲಿಯಾನ್ ಕೋಚಿಂಗ್ ನ ಪ್ಯಾಂಥರ್ಸ್ ಹೆಮ್ಮೆಯ ನಗೆ ಬೀರಿದೆ.

ಡಿ.17 ರಂದು ಸಂಜೆ 8 ಗಂಟೆಗೆ ಪ್ರೊ ಕಬಡ್ಡಿ 2022 ಫೈನಲ್ ಧಮಾಕಾ ಆರಂಭವಾಗಿದ್ದು, ಫೈನಲ್ ಗೆ ಜೈಪುರ್ ಮತ್ತು ಪುಣೇರಿ ಪಲ್ಟನ್ ತಂಡಗಳೂ ಭರ್ಜರಿ ಸಿದ್ಧತೆ ನಡೆಸಿಕೊಂಡು, ಲೀಗ್ ಅಂತ್ಯದ ಪಂದ್ಯಗಳನ್ನು ಮುಗಿಸಿಕೊಂಡು, ಸೆಮಿಫೈನಲ್ ನಲ್ಲಿ ಸೆಣಸಿ ಫೈನಲ್ ಗೆ ಪ್ರವೇಶಿಸಿತ್ತು. ಈ ಆಟವಂತು ನೋಡುಗರಿಗೆ ಮೈನವಿರೇಳಿಸುವ ರೋಮಾಂಚಕಾರಿ ಆಟವಾಗಿತ್ತು.

ಎರಡೂ ತಂಡಗಳು ಬಲಿಷ್ಠವಾದ ತಂಡಗಳಾಗಿದ್ದು, ಜಯಗಳಿಸಲು ಸೆಣಸಾಟಕ್ಕೆ ಇಳಿದ ಅಭಿಷೇಕ್ ಬಚ್ಚನ್ ಮಾಲಿಕತ್ವದ ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ಪುನರಿ ಪಲ್ಟನ್ ತಂಡಗಳು ಪ್ರೇಕ್ಷಕರ ಕಣ್ಮನ ಸೆಳೆಯುವಂತೆ ಅದ್ಭುತವಾಗಿ ಮನರಂಜಿಸಿದ್ದಾರೆ.

ಇದೀಗ ತಾನೆ ನಡೆದ ಫೈನಲ್ ಪಂದ್ಯದಲ್ಲಿ ಪುಣೇರಿ ಪಲ್ಟನ್ ವಿರುದ್ಧ 33-29 ಅಂಕಗಳ ಅಂತರದಿಂದ ಜೈಪುರ ತಂಡ ಮೇಲುಗೈ ಸಾಧಿಸಿತು. ಪ್ರೋ ಕಬಡ್ಡಿ ಲೀಗ್ ನಲ್ಲಿ ಜೈಪುರ ಎರಡನೇ ಬಾರಿಗೆ ಟ್ರೋಫಿ ಗೆದ್ದಿದೆ. ಇದಕ್ಕೂ ಮೊದಲು ಅಂದರೆ 2014ರ ಉದ್ಘಾಟನಾ ಆವೃತ್ತಿಯಲ್ಲಿ ಪ್ಯಾಂಥರ್ಸ್ ತಂಡ ಚಾಂಪಿಯನ್ ಆಗಿತ್ತು.

ಜೈಪುರ ತಂಡ ಮೊದಲಾರ್ಧದಲ್ಲಿ 14-12 ಅಂಕಗಳ ಮುನ್ನಡೆ ಸಾಧಿಸಿದ್ದು, ವಿರಾಮದ ಬಳಿಕವೂ ಜೈಪುರ್‌ ಮುನ್ನಡೆಯನ್ನು ಕಾಯ್ದುಕೊಳ್ಳುತ್ತ ಹೋಯಿತು. ಪುಣೆಗೆ ಓವರ್‌ಟೇಕ್‌ ಸಾಧ್ಯವಾಗಲೇ ಇಲ್ಲ. ರೈಡರ್‌ಗಳಾದ ಅರ್ಜುನ್‌ ದೇಶ್ವಾಲ್‌, ವಿ. ಅಜಿತ್‌, ನಾಯಕ ಹಾಗೂ ಡಿಫೆಂಡರ್‌ ಸುನೀಲ್‌ ಕುಮಾರ್‌ ಜೈಪುರ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಇವರು ಐದು ಟ್ಯಾಕಲ್‌ಗಳೊಂದಿಗೆ ಒಟ್ಟು ಆರು ಪಾಯಿಂಟ್‌ಗಳನ್ನು ಗಳಿಸಿದರು. ಜೈಪುರ ಪಿಂಕ್ ಪ್ಯಾಂಥರ್ಸ್‌ಗೆ ಇದು ಎರಡನೇ ಪಿಕೆಎಲ್ ಪ್ರಶಸ್ತಿಯಾಗಿದೆ.

ಹಾಗೇ ಪುಣೇರಿ ಪಲ್ಟಾನ್ ನಲ್ಲಿ ಆದಿತ್ಯ ಶಿಂಧೆ ಐದು ರೇಡ್ ಪಾಯಿಂಟ್ ಗಳು, ಆಕಾಶ್ ಶಿಂಧೆ ನಾಲ್ಕು ರೇಡ್ ಪಾಯಿಂಟ್ಸ್ ಗಳಿಸಿದರು. ಇನ್ನೂ, ಡಿಫೆಂಡರ್‌ ಅಭಿಷೇಕ್‌ ನಾದರಾಜನ್‌ ಮತ್ತು ಆಲ್‌ರೌಂಡರ್‌ ಮೊಹಮ್ಮದ್‌ ನಭಿಬಕ್ಷ್ ನಾಲ್ಕು ಟ್ಯಾಕಲ್ ಪಾಯಿಂಟ್‌ ಗಳಿಸಿದರೂ ಕೂಡ ಪುಣೇರಿ ಪಲ್ಟನ್ ಅವರನ್ನು ವಿಜೇತರನ್ನಾಗಿ ಮಾಡಲು ಸಾಧ್ಯವಾಗಲಿಲ್ಲ.

ಇನ್ನೂ, 2014ರ ಚೊಚ್ಚಲ ಆವೃತ್ತಿಯ ಚಾಂಪಿಯನ್‌ ಆಗಿದ್ದ ಜೈಪುರ್‌, 2016ರಲ್ಲೂ ಫೈನಲ್‌ ಪ್ರವೇಶಿಸಿತ್ತಾದರೂ ಅಲ್ಲಿ ಪಾಟ್ನಾ ಪೈರೆಟ್ಸ್‌ಗೆ ಶರಣಾಗಿತ್ತು. ಆ ಮುನ್ನಡೆಯನ್ನು ನಿರಂತರವಾಗಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಕಾಯ್ದುಕೊಂಡು ಬಂದಿತ್ತು. ಹಾಗೇ ಪಂದ್ಯದ ಕೊನೆಗೆ ಜೈಪುರ 32-29 ಅಂಕಗಳೊಂದಿಗೆ ಗೆಲುವಿನ ನಗೆ ಬೀರಿತು.

ಪ್ರೋ ಕಬಡ್ಡಿ 2022 ಫೈನಲ್​ ಪಂದ್ಯದ ರಂಗನ್ನು ಆಟಗಾರರು ಮಾತ್ರವಲ್ಲದೇ ಸಿನಿ ತಾರೆಯರು ಕೂಡ ಹೆಚ್ಚಿಸಿದರು. ಈ ವೇಳೆ ಅಭಿಷೇಕ್ ಬಚ್ಚನ್, ಐಶ್ವರ್ಯ ರೈ, ರಣವೀರ್ ಸಿಂಗ್,ಪೂಜಾ ಹೆಗ್ಡೆ, ರೋಹಿತ್ ಶೆಟ್ಟಿಯಂತಹ ಸಿನಿ ಗಣ್ಯರು ಪ್ರೊ ಕಬಡ್ಡಿಯ ಫೈನಲ್ ಪಂದ್ಯದ ರಂಗನ್ನು ಹಿಮ್ಮಡಿಗೊಳಿಸಿದರು.

Leave A Reply