Pan Card ಹೊಂದಿರುವವರೇ ನಿಮಗೊಂದು ಎಚ್ಚರಿಕೆಯ ಸಂದೇಶ Income Tax ಇಲಾಖೆಯಿಂದ!!!
ಪ್ರಸ್ತುತ ದಿನಗಲ್ಲಿ ಪ್ಯಾನ್ ಕಾರ್ಡ್ ಪ್ರಮುಖ ದಾಖಲೆಯಾಗಿದ್ದೂ, ಇದು ನಮ್ಮ ಆರ್ಥಿಕ ಚಟುವಟಿಕೆಯ ಸಮಯದಲ್ಲಿ ತುಂಬಾ ಉಪಯುಕ್ತವಾಗಿದೆ. ಆದಾಯ ತೆರಿಗೆ ಇಲಾಖೆಯಿಂದ ನೀಡಲಾದ 10 ಅಕ್ಷರಗಳ ಶಾಶ್ವತ ಖಾತೆ ಸಂಖ್ಯೆಯಾಗಿದ್ದೂ (PAN), ಇತ್ತೀಚಿನ ದಿನಗಳಲ್ಲಿ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ತೆರಿಗೆ ವಂಚನೆಯನ್ನು ನಿಯಂತ್ರಿಸಲು ವ್ಯಕ್ತಿಗಳು ಮತ್ತು ಘಟಕಗಳಿಂದ ಪ್ಯಾನ್ ಕಾರ್ಡ್ ಅನ್ನು ನೀಡಲಾಗುತ್ತದೆ. ಏಕೆಂದರೆ ಇದು ನಿರ್ದಿಷ್ಟ ವ್ಯಕ್ತಿ ಅಥವಾ ಘಟಕದ ಮೂಲಕ ಮಾಡಿದ ಎಲ್ಲಾ ಹಣಕಾಸಿನ ವಹಿವಾಟುಗಳನ್ನು ದಾಖಲಿಸುತ್ತದೆ. ಪ್ಯಾನ್ ಕಾರ್ಡ್‌ಗೆ ಯಾವುದೇ ಭಾರತೀಯ ನಾಗರಿಕರು ಅರ್ಜಿ ಸಲ್ಲಿಸಬಹುದಾಗಿದೆ.
ಆದಾಯ ತೆರಿಗೆ ಇಲಾಖೆಯು ಟ್ವೀಟ್ ಮೂಲಕ ಪ್ಯಾನ್ ಕಾರ್ಡ್ ಹೊಂದಿರುವವರಿಗೆ ಮಹತ್ವದ ಹೇಳಿಕೆಯೊಂದನ್ನು ಪ್ರಕಟಿಸಿದೆ. ಮಾರ್ಚ್ 31, 2023 ರೊಳಗೆ ಪ್ಯಾನ್ ಕಾರ್ಡ್ ಅನ್ನು ಆಧಾರ್‌ಗೆ ಲಿಂಕ್ ಮಾಡಬೇಕು, ಇಲ್ಲದಿದ್ದರೆ ಏಪ್ರಿಲ್ 1, 2023 ರಂದು ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳಿಸಲಾಗುವುದು ಎಂದು ಇಲಾಖೆಯು ಎಚ್ಚರಿಸಿದೆ.
ಹಣಕಾಸಿನ ವಹಿವಾಟುಗಳ ದಾಖಲೆಗಳನ್ನು ನಿರ್ವಹಿಸಲು ಪ್ಯಾನ್ ಕಾರ್ಡ್ ಅತ್ಯವಶ್ಯಕ. ಆದಾಯ ತೆರಿಗೆ ಇಲಾಖೆಯು ಸಂಪೂರ್ಣವಾಗಿ ಎಲೆಕ್ಟ್ರಾನಿಕ್ ಸಿಸ್ಟಮ್ ಅಡಿಯಲ್ಲಿ ಹಣಕಾಸಿನ ವಹಿವಾಟಿನ ದಾಖಲೆಯನ್ನು ಇಡುತ್ತದೆ. ದೇಶದ ಯಾವುದೇ ವ್ಯಕ್ತಿ ಅಥವಾ ಕಂಪನಿಯ ಮಾಹಿತಿಯನ್ನು ಒಂದೇ ಪ್ಯಾನ್ ಸಂಖ್ಯೆಯೊಂದಿಗೆ ದಾಖಲಿಸಲಾಗುತ್ತದೆ. ಹೀಗಾಗಿ, ಸರ್ಕಾರದ ನಿಯಮಗಳ ಪ್ರಕಾರ, ಒಬ್ಬರು ಒಂದೇ ಪ್ಯಾನ್ ಕಾರ್ಡ್ ಅನ್ನು ನೀಡಬಹುದು.
ಆದರೆ ಹಿಂದಿನ ಕಾಲದಲ್ಲಿ ಯಾರಾದರೂ ಎರಡು ಅಥವಾ ಅದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್‌ಗಳನ್ನು ಮಾಡಿದ್ದರೆ, ಅವರನ್ನು ಸುಲಭವಾಗಿ ಕಂಡು ಹಿಡಿಯಲು ಸಾಧ್ಯವಿಲ್ಲ. ಆದರೆ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಿದರೆ ಅದು ಸ್ವಯಂಚಾಲಿತವಾಗಿ ನಿಷ್ಕ್ರಿಯಗೊಳ್ಳುತ್ತದೆ. ಆದರೆ, ಎರಡು ಪ್ಯಾನ್ ಸಂಖ್ಯೆಗಳನ್ನು ಹೊಂದಿರುವುದು ಕಾನೂನು ಬಾಹಿರ.
ನೀವು ಮನೆಯಲ್ಲಿಯೇ ಸುಲಭವಾಗಿ ಆಧಾರ್‌ನೊಂದಿಗೆ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಬಹುದು.
ಮೊದಲು ನೀವು ಆದಾಯ ತೆರಿಗೆಯ ಇ-ಫೈಲಿಂಗ್ https://www.incometaxindiaefiling.gov.in/home ವೆಬ್’ಸೈಟ್ ಗೆ ಹೋಗಿ, ನೀವು ಲಾಗಿನ್ ಆಗಬೇಕು. ಆ ನಂತರ ವೆಬ್‌ಸೈಟ್‌ನಲ್ಲಿರುವ ಹೋಮ್‌ಪೇಜ್‌ನ ಎಡಭಾಗದ ಕ್ವಿಕ್ ಲಿಂಕ್ ವಿಭಾಗದಲ್ಲಿರುವ ಲಿಂಕ್ ಆಧಾರ್ ಬಟನ್ ಮೇಲೆ ಕ್ಲಿಕ್ ಮಾಡಿ. ಬಳಿಕ ನಿಮ್ಮ ಪಾನ್ ನಂಬರ್, ಆಧಾರ್ ನಂಬರ್ ಮತ್ತು ಆಧಾರ್ ದಾಖಲಾತಿಯಲ್ಲಿರುವ ಹಾಗೆ ನಿಮ್ಮ ಹೆಸರನ್ನು ದಾಖಲಿಸಿ. ಒಂದೊಮ್ಮೆ ನೀವು ಆಧಾರ್ ಕಾರ್ಡ್‌ನಲ್ಲಿ ಹುಟ್ಟಿದ ವರ್ಷವನ್ನು ಮಾತ್ರ ಹೊಂದಿದ್ದರೆ ಚೆಕ್ ಬಾಕ್ಸ್ ಕ್ಲಿಕ್ ಮಾಡಿ ಮತ್ತು ನಂತರ ನಿಮ್ಮ ಆಧಾರ್ ವಿವರಗಳನ್ನು ಯುಐಡಿಎಐನೊಂದಿಗೆ ಮೌಲ್ಯೀಕರಿಸಲು ಒಪ್ಪಿದ್ದಕ್ಕಾಗಿ ಚೆಕ್ ಬಾಕ್ಸ್ ಕ್ಲಿಕ್ ಮಾಡಿ. ಇಷ್ಟಾದ ಮೇಲೆ ನಿಮ್ಮ ಸ್ಕ್ರೀನ್ ಮೇಲೆ ಕಾಣಿಸುವ ಕ್ಯಾಪ್ಚಾ ಕೋಡ್ ಎಂಟರ್ ಮಾಡಿ. ಆಗ ನಿಮಗೆ, ನಿಮ್ಮ ನೋಂದಾಯಿತ ಫೋನ್ ನಂಬರ್‌ಗೆ ಓಟಿಪಿ ಬರುತ್ತದೆ. ಆ ಸಂಖೆಯನ್ನು ನಮೂದಿಸಿ. ಕೊನೆಗೆ ಲಿಂಕ್ ಆಧಾರ್ ಬಟನ್ ಮೇಲೆ ಕ್ಲಿಕ್ ಮಾಡಿ ರಿಕ್ವೆಸ್ಟ್ ಸಬ್ಮಿಟ್ ಮಾಡಿ. ಈ ಮೂಲಕ ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಬಹುದು.