Airtel : ಏರ್‌ಟೆಲ್‌ ನ ಈ ಎರಡು ಪ್ಲ್ಯಾನ್‌ಗಳ ಬಗ್ಗೆ ನಿಮಗೆ ಗೊತ್ತೇ ?

ಭಾರತದ ಟೆಲಿಕಾಂ ಕಂಪನಿಗಳು ಹಲವಾರು ಇವೆ. ಅವುಗಳಲ್ಲಿ ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ಕಂಪೆನಿಗಳ ನಡುವಿನ ದರ ಪೈಪೋಟಿ ದಿನೇ ದಿನೇ ಮುಂದುವರಿಯುತ್ತಲೇ ಇದೆ ಅಂದರೆ ತಪ್ಪಾಗಲಾರದು .

ಪ್ರಸ್ತುತ ಜಿಯೋ ದೇಶದ ಅತಿದೊಡ್ಡ ಟೆಲಿಕಾಂ ಕಂಪೆನಿಯಾಗಿ ಹೊರಹೊಮ್ಮಿದ ನಂತರ ಇತ್ತ ಏರ್‌ಟೆಲ್ ಕೂಡ ವಿಭಿನ್ನ ಪ್ರಯೋಜನಗಳ ಮೂಲಕ ಹೆಚ್ಚು ಗ್ರಾಹಕರನ್ನು ಸೆಳೆಯಲು ಮುಂದಾಗಿದ್ದು, ಇದೀಗ ಪೋಸ್ಟ್‌ಪೇಡ್ ಗ್ರಾಹಕರನ್ನು ಸೆಳೆಯಲು ಹೆಚ್ಚು ಡೇಟಾ, ಓಟಿಟಿ ಚಂದಾದಾರಿಕೆಗಳು ಸೇರಿದಂತೆ ಹಲವಾರು ಪ್ರಯೋಜನಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ. ಒಂದೇ ರೀಚಾರ್ಜ್ ಯೋಜನೆಯಲ್ಲಿ ಮನೆಮಂದಿಯಲ್ಲಾ ಟೆಲಿಕಾಂ ಸೇವೆಗಳ ಜೊತೆಗೆ ಓಟಿಟಿ ಮನರಂಜನೆಯನ್ನು ಪಡೆಯಬಹುದಾದ ಏರ್‌ಟೆಲ್‌ನ ಪೋಸ್ಟ್‌ಪೇಡ್ ಯೋಜನೆಗಳು ಇದಾಗಿದೆ.

ಏರ್‌ಟೆಲ್‌ನ ಈ ಎರಡು ರಿಚಾರ್ಜ್ ಪ್ಲ್ಯಾನ್‌ಗಳು ಇಂತಿವೆ :

  • ಮನೆಮಂದಿಯಲ್ಲಾ ಒಂದೇ ರೀಚಾರ್ಜ್ ಯೋಜನೆಯಲ್ಲಿ ಸೇವೆ ಪಡೆಯಲು ಏರ್‌ಟೆಲ್‌ನ 1199 ರೂ ಮತ್ತು 1499 ರೂ. ಪೋಸ್ಟ್‌ಪೇಯ್ಡ್ ಯೋಜನೆಗಳು ಬೆಸ್ಟ್ ಆಯ್ಕೆಗಳಾಗಿವೆ. ಈ ಎರಡೂ ಪೋಸ್ಟ್‌ಪೇಡ್ ಯೋಜನೆಗಳು ಗ್ರಾಹಕರಿಗೆ ಪ್ರಮುಖ OTT ಫ್ಲಾಟ್‌ಫಾರ್ಮ್ ಪ್ರಯೋಜನಗಳನ್ನು ಒದಗಿಸುತ್ತವೆ. ಇವುಗಳಲ್ಲಿ ಯಾವುದೇ ಯೋಜನೆಯನ್ನು ನೀವು ಆರಿಸಿಕೊಂಡರೆ, ಏರ್‌ಟೆಲ್‌ನಿಂದ ನಿಂದ Disney+ Hotstar, Amazon Prime Video ಮತ್ತು Netflix ಚಂದಾದಾರಿಕೆಯನ್ನು ಉಚಿತವಾಗಿ ಪಡೆಯಬಹುದು. ಆದರೆ, OTT ಫ್ಲಾಟ್‌ಫಾರ್ಮ್ ಪ್ರಯೋಜನಗಳ ಹೊರತಾಗಿಯೂ ಈ ಎರಡೂ ಯೋಜನೆಗಳು ವಿಭಿನ್ನ ಡೇಟಾದ ಪ್ರಯೋಜನಗಳನ್ನು ಒದಗಿಸಲಿವೆ.

ಈ ಮೇಲಿನ ಎರಡೂ ಯೋಜನೆಗಳು ಒದಗಿಸುತ್ತಿರುವ ಪ್ರಯೋಜನಗಳು ಹೀಗಿವೆ :

1199 ರೂ. ಬೆಲೆಯ ಏರ್‌ಟೆಲ್‌ ಪೋಸ್ಟ್‌ಪೇಯ್ಡ್ ಯೋಜನೆ:

  • ನೀವು 1199 ರೂ. ಬೆಲೆಯ ಏರ್‌ಟೆಲ್‌ ಪೋಸ್ಟ್‌ಪೇಯ್ಡ್ ಯೋಜನೆಗೆ ಚಂದಾದಾರರಾದರೆ 1 ಬಳಕೆದಾರ ಮತ್ತು 3 ಕುಟುಂಬ ಆಡ್-ಆನ್ ಕನೆಕ್ಷನ್ ಸೇರಿದಂತೆ ಒಟ್ಟು ನಾಲ್ಕು ಜನರು ಒಂದೇ ರೀಚಾರ್ಜ್‌ನಲ್ಲಿ ಸೇವೆ ಪಡೆಯಬಹುದು.
  • ಈ ಯೋಜನೆಯು ಒಟ್ಟು 150GB + 30GB ಡೇಟಾ, ಅನಿಯಮಿತ ಉಚಿತ ಕರೆಗಳು ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನಗಳನ್ನು ಹೊಂದಿದೆ.
  • ಈ ಯೋಜನೆಯಲ್ಲಿ 200GB ಡೇಟಾ ರೋಲ್‌ಓವರ್ ಆಯ್ಕೆ ಇದೆ.
  • ಇದರೊಂದಿಗೆ ಹೆಚ್ಚುವರಿಯಾಗಿ, ಗ್ರಾಹಕರು Disney+ Hotstar, Amazon Prime Video ಮತ್ತು Netflix ಚಂದಾದಾರಿಕೆಗಳ ಜೊತೆಗೆ Wynk ಮ್ಯೂಸಿಕ್ ಮತ್ತು ಶಾ ಅಕಾಡೆಮಿ ಪ್ರೀಮಿಯಂ ಚಂದಾದಾರಿಕೆ, ಉಚಿತ ಹೆಲೋಟೂನ್ಸ್, ಫಾಸ್ಟ್‌ಟ್ಯಾಗ್ ಸೌಲಭ್ಯಗಳನ್ನು ಪಡೆಯಲಿದ್ದಾರೆ ಎಂದು ಏರ್‌ಟೆಲ್ ಕಂಪೆನಿ ತಿಳಿಸಿದೆ.

1499 ರೂ. ಬೆಲೆಯ ಏರ್‌ಟೆಲ್‌ ಪೋಸ್ಟ್‌ಪೇಯ್ಡ್ ಯೋಜನೆ:

  • 1499 ರೂ. ಬೆಲೆಯ ಏರ್‌ಟೆಲ್‌ ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ನೀವು 1199 ರೂ. ಬೆಲೆಯ ಏರ್‌ಟೆಲ್‌ ಪೋಸ್ಟ್‌ಪೇಯ್ಡ್ ಯೋಜನೆಗೆ ಚಂದಾದಾರರಾದರೂ ಸಹ 1 ಬಳಕೆದಾರ ಮತ್ತು 3 ಕುಟುಂಬ ಆಡ್-ಆನ್ ಕನೆಕ್ಷನ್ ಸೇರಿದಂತೆ ಒಟ್ಟು ನಾಲ್ಕು ಜನರು ಒಂದೇ ರೀಚಾರ್ಜ್‌ನಲ್ಲಿ ಸೇವೆ ಪಡೆಯಬಹುದು.
  • ಈ ಯೋಜನೆಯು ಪ್ರತಿ ಆಡ್-ಆನ್ ಕನೆಕ್ಷನ್‌ಗೆ 30GB ನಿಡುತ್ತದೆ.
  • ಜೊತೆಗೆ ಅನಿಯಮಿತ ಉಚಿತ ಕರೆಗಳು ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನಗಳನ್ನು ಹೊಂದಿದೆ.
  • ಈ ಯೋಜನೆಯಲ್ಲಿಯೂ ಸಹ 200GB ಡೇಟಾ ರೋಲ್‌ಓವರ್ ಆಯ್ಕೆ ಇದೆ.
  • ಇದರೊಂದಿಗೆ ಹೆಚ್ಚುವರಿಯಾಗಿ, Disney+ Hotstar, Amazon Prime Video ಮತ್ತು Netflix ಚಂದಾದಾರಿಕೆಗಳ ಜೊತೆಗೆ Wynk ಮ್ಯೂಸಿಕ್ ಪ್ರೀಮಿಯಂ ಚಂದಾದಾರಿಕೆ, ಫಾಸ್ಟ್‌ಟ್ಯಾಗ್ ಸೌಲಭ್ಯ ಇದೆ.
  • ಅದಲ್ಲದೆ 10-ದಿನದ ಅಂತರಾಷ್ಟ್ರೀಯ ರೋಮಿಂಗ್ ಪ್ಯಾಕ್ ಸಹ ದೊರೆಯಲಿದೆ.

ಈ ಮೇಲಿನಂತೆ ಏರ್‌ಟೆಲ್‌ನ ಈ ಎರಡು ರಿಚಾರ್ಜ್ ಪ್ಲ್ಯಾನ್‌ಗಳು ಹಲವಾರು ರೀತಿಯ ಪ್ರಯೋಜನಗಳನ್ನು ಚಂದಾದಾರರಿಗೆ ನೀಡುತ್ತದೆ.

Leave A Reply

Your email address will not be published.