ಒಂದೇ ಚಾರ್ಜ್ ಅಷ್ಟೇ ಸಾಕು | ಬರೋಬ್ಬರಿ 135 ಕಿ.ಮೀ ಮೈಲೇಜ್ ಕೊಡೋ ‘ecoDryft’ ಬೈಕ್ ಶೀಘ್ರವೇ ನಿಮ್ಮ ತೆಕ್ಕೆಗೆ!!!
ಕಾಲ ಸರಿಯುತ್ತಿದ್ದಂತೆ ಹೊಸ ವಾಹನ ಖರೀದಿ ಮಾಡಲು ನಿಮಗೆ ಸಾಕಷ್ಟು ಆಯ್ಕೆಗಳಿವೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮಗೆ ಬೇಕು ಬೇಕಾದ ಆಯ್ಕೆಗಳು ಹಲವಾರು ರೀತಿಯಲ್ಲಿ, ಅನುಕೂಲ ದರದಲ್ಲಿ ಲಭ್ಯ ಇದೆ. ಅಲ್ಲದೆ ಜನರ ಬೇಡಿಕೆಗಳು ಸಹ ಬದಲಾಗುತ್ತಲೇ ಇರುತ್ತವೆ ಮತ್ತು ಹೆಚ್ಚುತ್ತಲೇ ಇರುತ್ತವೆ. ಹೌದು ಭಾರತದ ದ್ವಿಚಕ್ರ ವಾಹನ ತಯಾರಕರು ಸಹ ಇಂತಹದೇ ಬೈಕ್ ತಯಾರಿಕೆಗೆ ಮುಂದಾಗಿದ್ದು, ಇದೀಗ ಪ್ಯೂರ್ ಇವಿಯ ‘ಇಕೋಡ್ರೈಫ್ಟ್’ ಮೋಟಾರ್‌ಸೈಕಲ್ ಶೀಘ್ರ ಖರೀದಿಗೆ ಲಭ್ಯವಾಗಲಿದೆ.
ಹೈದರಾಬಾದ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿಲಿರುವ ಪ್ಯೂರ್ ಇವಿ, ತನ್ನ ‘ಇಕೋಡ್ರೈಫ್ಟ್’ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಹಿರಂಗಪಡಿಸಿದೆ. ಈ ಇವಿ ಬೈಕ್ ಒಂದೇ ಚಾರ್ಜ್‌ನಲ್ಲಿ 135 ಕಿ.ಮೀ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದ್ದು, ಕಂಪನಿಯು ತನ್ನ ಡೀಲರ್‌ಶಿಪ್‌ಗಳಲ್ಲಿ ಟೆಸ್ಟ್ ಡ್ರೈವ್ ಅನ್ನು ಪ್ರಾರಂಭಿಸಿದೆ. ಜನವರಿ 2023ರ ಮೊದಲ ವಾರದಲ್ಲಿ ಬೆಲೆಗಳನ್ನು ಘೋಷಿಸುವ ನಿರೀಕ್ಷೆ ಇದೆ.
ಇಕೋಡ್ರೈಫ್ಟ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ನ ವಿಶೇಷತೆ :
- ಈ EcoDryft ಬೈಕ್, ಕೋನೀಯ ಲ್ಯಾಂಪ್‌ಗಳು, ಟೆಲಿಸ್ಕೋಪಿಂಗ್ ಫ್ರಂಟ್ ಸಸ್ಪೆನ್ಷನ್, ಟ್ವಿನ್ ಶಾಕ್ ರಿಯರ್, ಅಲಾಯ್ ವೀಲ್ಸ್ ಅನ್ನು ಹೊಂದಿದೆ.
- ಈ ಎಲೆಕ್ಟ್ರಿಕ್ ಬೈಕ್ ಮೂರು ಮೋಡ್‌ಗಳಲ್ಲಿ ಗ್ರಾಹಕರಿಗೆ ಲಭ್ಯವಿರುತ್ತವೆ. ಅವುಗಳೆದರೇ ಡ್ರೈವ್, ಕ್ರಾಸ್‌ಒವರ್ ಹಾಗೂ ಥ್ರಿಲ್.
- AIS 156 ಪ್ರಮಾಣೀಕೃತ 3.0 kWh ಬ್ಯಾಟರಿಯನ್ನು ಈ ಹೊಸ ಮೋಟಾರ್ ಸೈಕಲ್ ಹೊಂದಿದೆ.
- ಇದು ಪ್ರತಿ ಚಾರ್ಜ್‌ಗೆ 135 ಕಿ,ಮೀ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದ್ದು, ಗಂಟೆಗೆ 75 ಕಿ.ಮೀ ಟಾಪ್ ಸ್ವೀಡ್ ಹೊಂದಿದೆಯಂತೆ.
ಪ್ಯೂರ್ ಇವಿಯ ಸಹ-ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೋಹಿತ್ ವಡೇರಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ‘ನಾವು ಈ ಹಿಂದೆ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದ eTryst 350 ಬೈಕಿಗೆ ಗ್ರಾಹಕರಿಂದ ಅದ್ಭುತ ಪ್ರತಿಕ್ರಿಯೆಯನ್ನು ಪಡೆದಿದ್ದೇವೆ. ಇದೀಗ ಹೊಸ ecoDryftನ ಬಿಡುಗಡೆಯು ಕಂಪನಿಯ ಬೆಳವಣಿಗೆಯಲ್ಲಿ ಪ್ರಮುಖ ಮೈಲಿಗಲ್ಲು ಆಗಿರುತ್ತದೆ. ಈ ಬಿಡುಗಡೆಯೊಂದಿಗೆ ನಾವು ಸ್ಕೂಟರ್ ಮತ್ತು ಮೋಟಾರ್‌ಸೈಕಲ್‌ಗಳಲ್ಲಿ ಅತ್ಯುತ್ತಮ ಕ್ಯಾಟಲಾಗ್ ಅನ್ನು ಹೊಂದಿರುವ ಭಾರತದಲ್ಲಿನ ಏಕೈಕ EV2W ಕಂಪನಿಯಾಗಿದ್ದೇವೆ’ ಎಂದು ಹೇಳಿದ್ದಾರೆ.
ಈಗಾಗಲೇ ಪ್ಯೂರ್ ಇವಿಯ ಮೂರು ಮಾದರಿಗಳು ತಯಾರಿಸಿತ್ತು. ಅವುಗಳೆಂದರೆ, ETRYST 350, EPLUTO 7G ಮತ್ತು ETRANCE NEO. ಆದರೆ, ETRYST 350 ಬೈಕ್ ಅನ್ನು ಮಾತ್ರ ಕಂಪನಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು.
ಸದ್ಯ ಮಾರುಕಟ್ಟೆಯಲ್ಲಿರುವ ಪ್ಯೂರ್ ಎಟ್ರಿಸ್ಟ್ 350 ಎಲೆಕ್ಟ್ರಿಕ್ ಬೈಕ್ 1,54,999 (ಎಕ್ಸ್ ಶೋ ರೂಂ) ಬೆಲೆಯನ್ನು ಹೊಂದಿದೆ. ಈ ಬೈಕ್ ಭಾರತದ ದೊಡ್ಡ ನಗರಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿದೆ. ಇದೊಂದು ಹೈ-ಸ್ಪೀಡ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನವಾಗಿದ್ದು, ಇದು ಗಂಟೆಗೆ 85 ಕಿ.ಮೀ ಟಾಪ್ ಸ್ವೀಡ್ ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ 140 ಕಿ.ಮೀ ಮೈಲೇಜ್ ನೀಡುತ್ತದೆ. ಈ ಬೈಕ್ 3.5 kWh ಬ್ಯಾಟರಿಯನ್ನು ಒಳಗೊಂಡಿದೆ. ಇದು 84 V 8A ಚಾರ್ಜರ್ ಜೊತೆ ಲಭ್ಯವಿದ್ದು, 6 ಗಂಟೆಗಳ ಅವಧಿಯಲ್ಲಿ ಬೈಕ್ ಅನ್ನು ಸಂಪೂರ್ಣ ಚಾರ್ಜ್ ಮಾಡಬಹುದಾಗಿದೆ ಎಂದು ತಿಳಿಸಿದೆ.
ಒಟ್ಟು ಮೂರು ಆಯ್ಕೆಗಳನ್ನು ಹೊಂದಿದೆ. ಡ್ರೈವ್ ಮೋಡ್, ಗರಿಷ್ಠ ವೇಗವನ್ನು 60 kmphಗೆ ಸೀಮಿತಗೊಳಿಸುತ್ತದೆ. ಎರಡನೇ ಮೋಡ್ ಕ್ರಾಸ್ ಓವರ್ ಗರಿಷ್ಠ ವೇಗವನ್ನು 75 kmphಗೆ ಸೀಮಿತಗೊಳಿಸುತ್ತದೆ. ಥ್ರಿಲ್ ಮೋಡ್ ರೈಡರ್‌ಗೆ ಗರಿಷ್ಠ ಶಕ್ತಿಯನ್ನು ಒದಗಿಸುತ್ತದೆ. 85 kmph ಗರಿಷ್ಠ ವೇಗವನ್ನು ಹೊಂದಿದೆ. ಈ ಬೈಕ್ ಬ್ಲಾಕ್, ಟ್ಯಾನ್ ರೆಡ್ ಮತ್ತು ಸೀ ಬ್ಲೂ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದು Revolt RV400 ಮತ್ತು Tork Kratos ಎಲೆಕ್ಟ್ರಿಕ್ ಬೈಕ್‌ಗಳೊಂದಿಗೆ ಪೈಪೋಟಿ ನೀಡಲಿದೆ.
ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಖರೀದಿಗೆ ಸಿಗಲಿರುವ ಈ ಇಕೋಡ್ರೈಫ್ಟ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನ ಬುಕ್ಕಿಂಗ್‌ಗಳು ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಇಕೋಡ್ರೈಫ್ಟ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ನಾಲ್ಕು ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ.
ಅವುಗಳೆಂದರೆ, ಬ್ಲಾಕ್, ರೆಡ್, ಬ್ಲೂ ಮತ್ತು ಗ್ರೇ ಆಗಿದೆ.