ಈ ಮನೆಯ ಕಿಚನ್ ಇರೋದು ತೆಲಂಗಾಣದಲ್ಲಿ, ಬೆಡ್ ರೂಂ ಮಹಾರಾಷ್ಟದಲ್ಲಿ | ಇದು ಮನೆಯೊಂದು ರಾಜ್ಯ ಎರಡು ಎಂಬ ವಿಶೇಷ ಘಟನೆಯ ವಿಷ್ಯ !

Share the Article

ಈ ಮನೆಯ ಕಿಚನ್ ಇರೋದು ತೆಲಂಗಾಣದಲ್ಲಿ. ಮನೆಮಂದಿ ರಾತ್ರಿಯ ಊಟ ಮುಗಿಸಿ ಮಲಗಲು ಪ್ರತಿದಿನ ಮಹಾರಾಷ್ಟ್ರಕ್ಕೆ ತೆರಳಬೇಕು. ಇದು ಪ್ರತಿದಿನದ ರೋಟೀನ್ ! ಅದು ಯಾಕೆ ಹಾಗೆ ಅಂತೀರಾ, ಈ ಪೋಸ್ಟ್ ಓದಿ. ಮಹಾರಾಷ್ಟ್ರ ಮತ್ತು ತೆಲಂಗಾಣದ ಗಡಿಜಾಗಯಲ್ಲಿ ಚಂದ್ರಾಪುರ ಜಿಲ್ಲೆಯ ಸಿಮಾವರ್ತಿ ಜೀವತಿ ತಹಸಿಲ್‌ನ ಮಹಾರಾಜಗುಡ ಗ್ರಾಮದಲ್ಲಿ ನೆಲೆಸಿರುವ ಕುಟುಂಬವೊಂದು ಎರಡೂ ರಾಜ್ಯಗಳಲ್ಲಿ ಒಂದೇ ಮನೆ ಮಾಡಿಕೊಂಡು ವಾಸಿಸುತ್ತಿದೆ.

ಹೌದು, 8 ರೂಮಿನ ಆ ಮನೆ ಎರಡೂ ರಾಜ್ಯಗಳಲ್ಲಿ ಪಡೆದುಕೊಂಡಿದೆ. ಎರಡೂ ರಾಜ್ಯಗಳಿಗೆ ಮನೆ ತೆರಿಗೆ ಕಟ್ಟಬೇಕು ಈ ಕುಟುಂಬ ! ಪವಾರ್ ಕುಟುಂಬ ಮನೆಯೊಂದನ್ನು ಕಟ್ಟಿತ್ತು. ಆದರೆ ಮಹಾರಾಷ್ಟ್ರ ಮತ್ತು ತೆಲಂಗಾಣದ ಮಧ್ಯೆ ಗಾಡಿ ವಿವಾದ ಉಂಟಾದ ಹಿನ್ನೆಲೆಯಲ್ಲಿ ಈ ಮನೆಯ ಕಿಚನ್ ತೆಲಂಗಾಣಕ್ಕೆ ಸಿಗ್ತು, ಹಾಲ್ ಮತ್ತು ಬೆಡ್ ರೂಮ್ ಮಹಾರಾಷ್ಟ್ರದ ಆಡಳಿತಕ್ಕೆ ಒಲೀತು. ಈ ಮನೆಯಲ್ಲಿ ಒಟ್ಟು 13 ಸದಸ್ಯರಿದ್ದಾರೆ. ಇವರು ಈಗ ಎರಡೂ ರಾಜ್ಯಗಳ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಎರಡೂ ಸರ್ಕಾರಕ್ಕೆ ಮನೆ ತೆರಿಗೆ ಕಟ್ಟುತ್ತಾರೆ. ಮನೆಯವರು ಮಹಾರಾಷ್ಟ್ರ ಮತ್ತು ತೆಲಂಗಾಣದ ಡ್ಯುವಲ್ ನಂಬರ್ ಪ್ಲೇಟ್ ಹೊಂದಿರುವ ವಾಹನಗಳನ್ನು ಹೊಂದಿದ್ದಾರೆ.

ಮಹಾರಾಜಗುಡ ಗ್ರಾಮದ ಈ ಮನೆಯಲ್ಲಿ ಇವರಿಗೆ 10 ಕೊಠಡಿಗಳ ಮನೆ‌ ಇದೆ. ಮನೆಯಲ್ಲಿ ನಾಲ್ಕು ಕೋಣೆಗಳು ತೆಲಂಗಾಣದ ಒಳಗೆ ಬಂದರೆ ಉಳಿದ ಕೋಣೆಗಳು ಮಹಾರಾಷ್ಟ್ರ ವ್ಯಾಪ್ತಿಯಲ್ಲಿವೆ. ನಿಯತ್ತಾಗಿ ಮನೆ ತೆರಿಗೆ ಇತ್ಯಾದಿ ತೆರಿಗೆ ಕಟ್ಟುತ್ತಿರುವ ಅವರಿಗೆ ಈ ತನಕ ಯಾವುದೆ ಸಮಸ್ಯೆ ಕಂಡುಬಂದಿಲ್ಲ.  ಅಂದು1969ರಲ್ಲಿ, ಗಡಿ ಸಮಸ್ಯೆಯ ವಿವಾದದ ತೀರ್ಮಾನದ ಬಳಿಕ ಅಂತಿಮವಾಗಿ ಪವಾರ್ ಕುಟುಂಬದ ಭೂಮಿ ಎರಡು ರಾಜ್ಯಗಳಿಗೆ ಹಂಚಿ ಹೋಯ್ತು. ಎರಡೂ ರಾಜ್ಯಗಳ ಸವಲತ್ತುಗಳ ಬಳಕೆ ಕೂಡಾ ಮಾಡಿಕೊಂಡು ನೆಮ್ಮದಿಯಾಗಿ ಬದುಕುತ್ತಿದೆ.

ಅಡುಗೆ ಮನೆ ತೆಲಂಗಾಣದಲ್ಲಿದ್ದರೆ, ಮಲಗುವ ಕೋಣೆ ಮತ್ತು ಹಾಲ್ ಮಹಾರಾಷ್ಟ್ರದಲ್ಲಿದೆ. ಇಬ್ಬರು ಸಹೋದರರಾದ ಉತ್ತಮ್ ಪವಾರ್ ಮತ್ತು ಚಂದು ಪವಾರ್ ಅವರ ಕುಟುಂಬದ ಒಟ್ಟು 13 ಸದಸ್ಯರು ಈ 10 ಕೋಣೆಗಳ ಮನೆಯಲ್ಲಿ ವಾಸಿಸುತ್ತಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ಬಳಕೆದಾರರು ವಿಭಿನ್ನವಾಗಿ ಬರೆದುಕೊಂಡಿದ್ದಾರೆ. ‘ಎರಡು ರಾಜ್ಯಗಳ ಮಧ್ಯೆ ಕೇವಲ ಒಂದು ಸೆಕುಂಡಿನ ಒಳಗೆ ಪ್ರಯಾಣಿಸಿ’ ಎಂದು ಒಬ್ಬರು ಹೇಳಿದರೆ, ಇನ್ನೊಬ್ಬರು, ‘ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ತೆರಳಲು ರಸ್ತೆ ಬೇಕಿಲ್ಲ, ಮನೆಯೊಳಗಿನಿಂದಲೇ ಹೋಗಬಹುದು’ ಎಂದಿದ್ದಾರೆ. ‘ ಹೋಮ್ ಡೆಲಿವರಿ ಹುಡುಗರಿಗೆ ದೊಡ್ಡ ತಾಪತ್ರಯ. ಯಾವ ರಾಜ್ಯಕ್ಕೆ ಫುಡ್ ತಲುಪಿಸಲಿ ಎಂಬ ಟೆನ್ಷನ್ ಅವರಿಗೆ ಆಗೋದು ಖಚಿತ ‘ ಎಂದು ಇನ್ನೊಬ್ಬರು ತಮಾಷೆಯಾಗಿ ಹೇಳಿದ್ದಾರೆ.

Leave A Reply