Home News iPhone 13 Discount: ರಿಯಾಯಿತಿ ದರದಲ್ಲಿ ಸಿಗುತ್ತಿದೆ ಐಫೋನ್ 13: ಈಗಲೇ ಖರೀದಿಸಿ, ಅಂಡ್ರಾಯ್ಡ್‌ ಫೋನ್‌ಗಿಂತಲೂ...

iPhone 13 Discount: ರಿಯಾಯಿತಿ ದರದಲ್ಲಿ ಸಿಗುತ್ತಿದೆ ಐಫೋನ್ 13: ಈಗಲೇ ಖರೀದಿಸಿ, ಅಂಡ್ರಾಯ್ಡ್‌ ಫೋನ್‌ಗಿಂತಲೂ ಕಡಿಮೆ ಬೆಲೆಯಲ್ಲಿ, ಈ ಅವಕಾಶ ಮಿಸ್‌ ಮಾಡ್ಬೇಡಿ

Hindu neighbor gifts plot of land

Hindu neighbour gifts land to Muslim journalist

ಮಾರುಕಟ್ಟೆಯಲ್ಲಿ ಬ್ರ್ಯಾಂಡೆಡ್ ಫೋನ್ ಎಂದು ಕರೆಸುಕೊಳ್ಳುವ ಆ್ಯಪಲ್ ಕಂಪನಿಯ ಐಫೋನ್’ನ ಹೊಸ ಸರಣಿ, ಐಫೋನ್ 14 ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಅಷ್ಟೇನು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿಲ್ಲ. ಈ ಸರಣಿಗಿಂತ ಐಫೋನ್ 13 ಸರಣಿಗಳೇ ಅತ್ಯುತ್ತಮ ಆಗಿದೆ ಎಂಬುದು ಅನೇಕರ ಅಭಿಪ್ರಾಯ. ಐಫೋನ್ 13 ರ ಕ್ರೇಜ್ ಮಾತ್ರ ಎಂದಿಗೂ ಕಡಿಮೆಯಾಗೋದಿಲ್ಲ. ಅದರ ವಿನ್ಯಾಸ ಅಥವಾ ವಿಶೇಷತೆಗೆ ಅದು ಫುಲ್ ಟ್ರೆಂಡಿಂಗ್ ನಲ್ಲಿದೆ. ಹೀಗಾಗಿ ಐಫೋನ್ ತನ್ನ ಹಳೆಯ ಮಾಡೆಲ್​ಗಳ ಸ್ಮಾರ್ಟ್​ಫೋನ್ ಬೆಲೆಯಲ್ಲಿ ಭರ್ಜರಿ ಡಿಸ್ಕೌಂಟ್ ಘೋಷಿಸಿದ್ದೂ, ದುಬಾರಿ ಬೆಲೆಯ ಐ ಫೋನ್ ಅಂಡ್ರಾಯ್ಡ್ ಗಿಂತಲೂ ಕಡಿಮೆ ದರದಲ್ಲಿ, ಕೈಗೆಟಕುವ ಬೆಲೆಯಲ್ಲಿ ಸಿಗಲಿದೆ!!

ಹೌದು, ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್ ದುಬಾರಿ ಬೆಲೆಯ ಆ್ಯಪಲ್ ಐಫೋನ್ ಖರೀದಿಸಬೇಕು ಎಂಬವರಿಗೆ ಈಗ (Flipkart) ಬಂಪರ್ ಆಫರ್ ನೀಡಿದೆ. ಇದೀಗ ಐಫೋನ್ 13 ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ಉತ್ತಮ ರಿಯಾಯಿತಿಯೊಂದಿಗೆ ಮಾರಾಟ ಮಾಡಲಾಗುತ್ತಿದೆ. ಈ ಮಾದರಿಯ ಆಫರ್ ಏನು ಮತ್ತು ವಿಶೇಷತೆ ಏನು ಎಂಬುದನ್ನು ತಿಳಿಯೋಣ.

ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 13 ಖರೀದಿಯ ಮೇಲೆ ಈ ಕೊಡುಗೆ ನೀಡಲಾಗುತ್ತಿದೆ. ಇದು ಕೆಲವೇ ದಿನ ಲಭ್ಯವಿರುವ ರಿಯಾಯಿತಿ. ಫ್ಲಿಪ್‌ಕಾರ್ಟ್‌ನಲ್ಲಿ iPhone 13ನ ಮೂಲ ಬೆಲೆ 69,900 ರೂ. ಆಗಿದೆ, ಆದರೆ ಈಗಾಗಲೇ ಇದರ ಮೇಲೆ ಭರ್ಜರಿ ರಿಯಾಯಿತಿ ನೀಡಲಾಗುತ್ತಿದೆ. ಭರ್ಜರಿ ಡಿಸ್ಕೌಂಟ್ ಆಫರ್ ಬಳಿಕ ಐಫೋನ್ 13 ಸ್ಮಾರ್ಟ್‍ಪೋನ್‍ ನಿಮಗೆ ಕೇವಲ 62,999 ರೂ.ಗೆ ಸಿಗಲಿದೆ.

APPLE iPhone 13 Starlightನ 128 GB ಸ್ಟೋರೇಜ್ ಮಾದರಿಯ ಮೇಲೆ ಈ ಡಿಸ್ಕೌಂಟ್ ನಿಮಗೆ ಸಿಗುತ್ತಿದೆ. ನೀವು ಈಗಲೇ ಇದನ್ನು ಖರೀದಿಸಿದರೆ, ಇದು ನಿಮಗೆ ಉತ್ತಮವಾದ ಡೀಲ್ ಅಂತಾನೇ ಹೇಳಬಹುದು. ಇದರ ಜೊತೆಗೆ ನೀವು ಹಳೆಯ ಐಫೋನ್ ಮಾದರಿ ಫೋನ್ ಹೊಂದಿದ್ದರೆ ಇನ್ನೂ ಹೆಚ್ಚಿನ ರಿಯಾಯಿತಿ ಪಡೆಯಬಹುದು. ಐಫೋನ್ 13 ರ ಈ ರೂಪಾಂತರದಲ್ಲಿ ನಿಮಗೆ 22,500 ರೂಪಾಯಿಗಳ ವಿನಿಮಯ ಕೊಡುಗೆಯನ್ನು ನೀಡಲಾಗುತ್ತಿದೆ. ಅಚ್ಚರಿ ಎನಿಸಿದರೂ ಇದು ನಿಜ.

APPLE iPhone 13 Starlightನ 128 GB ಮಾದರಿಯ ಮೇಲೆ ಗ್ರಾಹಕರಿಗೆ 22,500 ರೂ.ಗಳ ರಿಯಾಯಿತಿ ನೀಡಲಾಗುತ್ತಿದೆ. ಇದು ವಾಸ್ತವವಾಗಿ ವಿನಿಮಯ ಬೋನಸ್ ಆಗಿದ್ದು, ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ Exchange ಮಾಡಿಕೊಂಡಾಗ ಲಭ್ಯವಾಗಲಿದೆ. ನಿಮ್ಮ ಹಳೆಯ ಐಫೋನ್‌ನ ಸ್ಥಿತಿ ಉತ್ತಮವಾಗಿದ್ದರೆ ಇನ್ನೂ ಉತ್ತಮ ರಿಯಾಯಿತಿ ನಿಮಗೆ ದೊರೆಯಲಿದೆ. ಈ ಡಿಸ್ಕೌಂಟ್ ಪಡೆದ ಬಳಿಕ ನೀವು ಅತ್ಯಂತ ಕಡಿಮೆ ಬೆಲೆಗೆ ಕೇವಲ 42,499 ರೂ. ಗೆ ಐಫೋನ್ 13 ಅನ್ನು ನಿಮ್ಮದಾಗಿಸಬಹುದು.

ಐಪೋನ್ ಬ್ರ್ಯಾಂಡ್ ಇಷ್ಟೊಂದು ರಿಯಾಯಿತಿ ಬೆಲೆಗೆ ಸಿಗುತ್ತಿರುವುದು ಅಚ್ಚರಿಯಾದರೂ ಸತ್ಯ. ಆಂಡ್ರಾಯ್ಡ್ ಫೋನ್ ಗಳ ಬೆಲೆಗಿಂತಲೂ ಕಡಿಮೆ ದರಕ್ಕೆ ಐಫೋನ್ ಲಭಿಸುತ್ತಿದ್ದೂ, ಈ ಆಫರ್ ಶೀಘ್ರವೇ ಮುಗಿಯಲಿದೆ. ಹಾಗಾಗಿ ಈ ಚಾನ್ಸ್ ಅನ್ನು ಮಿಸ್ ಮಾಡ್ಕೋಬೇಡಿ. ಈಗಲೇ ಖರೀದಿ ಮಾಡಿ.