Home Entertainment ದಾರಿ ಬಿಡಿ ಸ್ವಲ್ಪ.. ಒಪ್ಪೋದಿಂದ ಎರಡು ಫೋಲ್ಡೇಬಲ್‌ ಫೋನ್‌ ಬಿಡುಗಡೆ | ವ್ಹಾವ್‌ ಏನ್‌...

ದಾರಿ ಬಿಡಿ ಸ್ವಲ್ಪ.. ಒಪ್ಪೋದಿಂದ ಎರಡು ಫೋಲ್ಡೇಬಲ್‌ ಫೋನ್‌ ಬಿಡುಗಡೆ | ವ್ಹಾವ್‌ ಏನ್‌ ಲುಕ್‌ ಗುರೂ…

Hindu neighbor gifts plot of land

Hindu neighbour gifts land to Muslim journalist

ಹೇಳಿ ಕೇಳಿ ಇದು ಡಿಜಿಟಲ್ ಯುಗದಲ್ಲಿ ಮೊಬೈಲ್ ಎಂಬ ಸಾಧನವನ್ನು ಬಳಸದೆ ಇರುವವರೇ ವಿರಳ. ಅದರಲ್ಲಿ ಕೂಡ ದಿನಕ್ಕೊಂದು ಹೊಸ ಹೊಸ ವೈಶಿಷ್ಟ್ಯದ ಮೂಲಕ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಈ ವೈಶಿಷ್ಟ್ಯಗಳನ್ನು ನೋಡಿ ಗ್ರಾಹಕರೇ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಚಿಂತಿಸಿದರೂ ಅಚ್ಚರಿಯಿಲ್ಲ!!. ಇದೀಗ, ಸ್ಯಾಮ್​ಸಂಗ್​ಗೆ ಪ್ರತಿಸ್ಪರ್ಧಿಯಾಗುವತ್ತ ಒಪ್ಪೋ ಕಂಪನಿ​​ ದಾಪುಗಾಲಿಡುತ್ತಿದೆ.

ಒಪ್ಪೋದಿಂದ ಫೈಂಡ್​ ಎನ್​2 ಮತ್ತು ಒಪ್ಪೋ ಫೈಂಡ್​ ಎನ್​2 ಫ್ಲಿಪ್​ ಎಂಬ ಸ್ಮಾರ್ಟ್​ಫೋನ್​​ ಅನ್ನು ಬಿಡುಗಡೆ ಮಾಡಿದ್ದು, ಇದು ಒಪ್ಪೋದಿಂದ ಬಿಡುಗಡೆಯಾಗಿರುವಂತಹ ನವೀನ ಮಾದರಿಯ ಮೊಬೈಲ್ ಆಗಿದೆ. ಈ ಮೊಬೈಲುಗಳು ಮಾರುಕಟ್ಟೆಯಲ್ಲಿ ಸ್ಯಾಮ್​ಸಂಗ್​ ಸ್ಮಾರ್ಟ್​​ಫೋನ್​ಗಳಿಗೆ ಬಹಳಷ್ಟು ಪೈಫೋಟಿ ನೀಡಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಒಪ್ಪೋ ಕಂಪನಿ (Oppo Company) ತನ್ನದೇ ಆದ ವಿಭಿನ್ನ ವಿನ್ಯಾಸದಲ್ಲಿ ಈಗಾಗಲೇ ಅನೇಕ ಸ್ಮಾರ್ಟ್​ಫೋನ್​ಗಳನ್ನು ಗ್ರಾಹಕರಿಗೆ ಪರಿಚಯಿಸಿದೆ. ಈ ನಡುವೆ ಇತ್ತೀಚಿನ ದಿನಗಳಲ್ಲಿ ಒಪ್ಪೋ ಕಂಪನಿ ಬಹಳ ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ಈ ಕಂಪನಿಯು ಬಿಡುಗಡೆ ಮಾಡುವ ಹೊಸ ಸ್ಮಾರ್ಟ್ ಫೋನ್ ಗಳನ್ನೂ ಖರೀದಿಸಲು ಗ್ರಾಹಕರು ಕಾತುರದಿಂದ ಎದುರು ನೋಡುವವರೂ ಕೂಡ ಇದ್ದಾರೆ.

ಇದೀಗ ಒಪ್ಪೋ ತನ್ನ ಗ್ರಾಹಕರಿಗೆ ಸಿಹಿ ಸುದ್ದಿಯೊಂದನ್ನು ನೀಡುತ್ತಿದೆ. ಇದುವರೆಗೆ ಒಪ್ಪೋದಿಂದ ಯಾವುದೇ ಫೋಲ್ಡೇಬಲ್​ ಸ್ಮಾರ್ಟ್​​ಫೋನ್​ಗಳು (Foldable Smartphone) ಬಿಡುಗಡೆಯಾಗಿರಲಿಲ್ಲ. ಆದರೆ ಇತ್ತೀಚೆಗೆ ಒಪ್ಫೋ ಇನ್ನೋ ಡೆ ಎಂಬ ಕಾರ್ಯಕ್ರಮದಲ್ಲಿ ತನ್ನ ಎರಡು ಫೋಲ್ಡೇಬಲ್​ ಮೊಬೈಲ್​​ಗಳನ್ನು ಬಿಡುಗಡೆ ಮಾಡಿದೆ. ಒಪ್ಪೋ ಬಿಡುಗಡೆ ಮಾಡಿರುವ ಫೋಲ್ಡೇಬಲ್​ ಸ್ಮಾರ್ಟ್​​ಫೋನ್​ಗಳು ಒಪ್ಪೋ ಫೈಂಡ್​ ಎನ್​​2 (Oppo Find N2) ಮತ್ತು ಒಪ್ಪೋ ಫೈಂಡ್​ ಎನ್​​2 ಫ್ಲಿಪ್ (Oppo Find N2 Flip)​ ಎಂಬ ಹೆಸರನ್ನು ಹೊಂದಿದೆ.

ಒಪ್ಪೋದಿಂದ ಫೈಂಡ್​ ಎನ್​2 ಮತ್ತು ಒಪ್ಪೋ ಫೈಂಡ್​ ಎನ್​2 ಫ್ಲಿಪ್​ ಎಂಬ ಸ್ಮಾರ್ಟ್​ಫೋನ್​​ ಅನ್ನು ಬಿಡುಗಡೆ ಮಾಡಿದೆ. ಇದು ಒಪ್ಪೋದಿಂದ ಬಿಡುಗಡೆಯಾಗಿರುವಂತಹ ಹೊಸ ಮೊಬೈಲ್ಸ್​ ಆಗಿದ್ದು, ಮಾರುಕಟ್ಟೆಯಲ್ಲಿ ಸ್ಯಾಮ್​ಸಂಗ್​ ಸ್ಮಾರ್ಟ್​​ಫೋನ್​ಗಳಿಗೆ ಬಹಳಷ್ಟು ಪೈಫೋಟಿ ನೀಡಲಿದೆ ಎನ್ನಲಾಗುತ್ತಿದೆ.

ಫೈಂಡ್​ ಎನ್​2ನ 12GB + 256GB ಸ್ಟೋರೇಜ್​ ಹೊಂದಿರುವ ಮೊಬೈಲ್​ಗೆ ಬೆಲೆಯನ್ನು CNY 7,999 ಅಂದರೆ ಭಾರತದಲ್ಲಿ ಸುಮಾರು 95,000 ರೂಪಾಯಿಯಲ್ಲಿ ಖರೀದಿಸಬಹುದಾಗಿದೆ 16GB + 512GB ಸ್ಠೋರೇಜ್​ ಹೊಂದಿರುವ ಸ್ಮಾರ್ಟ್​ಫೊನ್ ಅನ್ವಯ CNY 8,999 ಅಂದರೆ ಭಾರತದಲ್ಲಿ ಸುಮಾರು ರೂ 1,06,800 ನಲ್ಲಿ ಪಡೆಯಬಹುದಾಗಿದೆ. ಈ ಫೋನ್ ಅನ್ನು ಕ್ಲೌಡ್ ವೈಟ್, ಪಿಂಕ್ ಗ್ರೀನ್ ಮತ್ತು ಪ್ಲೇನ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಪರಿಚಯಿಸಲಾಗಿದೆ.

ಒಪ್ಪೋ ಫೈಂಡ್​ ಎನ್​2 ಸ್ಮಾರ್ಟ್​​ಫೋನ್​ನ ಫೀಚರ್ಸ್

ಒಪ್ಪೋ ಫೈಂಡ್​ ಎನ್​2 ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್​ 13 ಆಧಾರಿತ ColorOS 13.0 ನಲ್ಲಿ ಕಾರ್ಯನಿರ್ವಹಿಸಲಿದೆ. 7.6-ಇಂಚಿನ 1,792 x 1,920 ಪಿಕ್ಸೆಲ್‌ಗಳನ್ನು ಹೊಂದಿದರುವ ಅಮೋಲ್​ಡ್​ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್​​ಫೋನ್​ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8+ Gen 1 ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ 120Hz ರಿಫ್ರೆಶ್ ರೇಟ್​, 5.54-ಇಂಚಿನ ಪೂರ್ಣ-HD + 1,020 × 2080 ಎಎಮ್ ಡಿಸ್ಪ್ಲೇ ಸ್ಕ್ರೀನ್​ ಅನ್ನು ಒಳಗೊಂಡಿದೆ.


ಇನ್ನು ಇದರ ಕ್ಕ್ಯಾಮೆರ ವೈಶಿಷ್ಟ್ಯತೆ ನೋಡಿದರೆ, 50MP ಪ್ರಾಥಮಿಕ ಕ್ಯಾಮೆರಾ, 32MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇನ್ನು ಇದರಲ್ಲಿ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್​ ಅನ್ನು ಹೊಂದಿದೆ.. 4,520mAh ಡ್ಯುಯಲ್ ಸೆಲ್ ಬ್ಯಾಟರಿ ಬ್ಯಾಕಪ್​ ಅನ್ನು ಇದು ಹೊಂದಿದೆ. 67W SuperVOOC 2.0 ಫಾಸ್ಟ್ ಚಾರ್ಜಿಂಗ್ ಬೆಂಬಲ ಕೂಡ ಇದರಲ್ಲಿ ಅಳವಡಿಸಲಾಗಿದೆ

ಒಪ್ಪೋ ಫೈಂಡ್​ ಎನ್​2 ಫ್ಲಿಪ್​:

ಒಪ್ಪೋ ಫೈಂಡ್​ ಎನ್​2 ಫ್ಲಿಪ್​ ಆಂಡ್ರಾಯ್ಡ್ 13 ಆಧಾರಿತ ColorOS 13.0 ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಇದು 6.8-ಇಂಚಿನ ಪ್ರಾಥಮಿಕ ಪೂರ್ಣ-HD + 1,080×2,520 ಪಿಕ್ಸೆಲ್‌ಗಳ ಜೊತೆ ಅಮೋಲ್​ಡ್​ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 9000+ ಡಿಸ್‌ಪ್ಲೇ ಕೂಡ ಇದೆ.

ಇದರ ಕ್ಯಾಮೆರಾ ಸೆಟಪ್​ ಬಗ್ಗೆ ಮಾಹಿತಿ ಹೀಗಿದೆ: ಇದು ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇದರಲ್ಲಿ 32MP ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, 4,300mAh ಬ್ಯಾಟರಿ ಮತ್ತು 44W SuperVOOC ಚಾರ್ಜಿಂಗ್ ಬೆಂಬಲವನ್ನು ಪ್ರಾಥಮಿಕ ಕ್ಯಾಮೆರಾವನ್ನು ನೀಡಲಾಗಿದೆ.

ಒಪ್ಪೋ ಫೈಂಡ್​ ಎನ್​2 ಫ್ಲಿಪ್ 8GB + 256GB ಸ್ಟೋರೇಜ್​ ಹೊಂದಿದ ಮೊಬೈಲ್​ CNY 5,999 ಅಂದರೆ ಸುಮಾರು 71,000 ರೂಪಾಯಿ ನಿಗದಿಪಡಿಸಲಾಗಿದೆ. 12GB + 256GB ಸ್ಟೋರೇಜ್​ ಹೊಂದಿದ ಮೊಬೈಲ್​ CNY 6,399 ಅಂದರೆ ಭಾರತದಲ್ಲಿ ಸರಿಸುಮಾರು 76,000 ರೂಪಾಯಿ ಇದೆ. ಈ ಸ್ಮಾರ್ಟ್​​ಫೋನ್​ ಅನ್ನು ಬ್ಲ್ಯಾಕ್​, ಗೋಲ್ಡ್​ ಬಣ್ಣಗಳಲ್ಲಿ ಪರಿಚಯಿಸಲಾಗಿದ್ದು, ಈ ಎರಡು ಫೋನ್‌ಗಳು ಮುಂಬರುವ ವಾರಗಳಲ್ಲಿ ಚೀನಾದಲ್ಲಿ ಮಾರಾಟಕ್ಕೆ ಲಭ್ಯವಾಗುತ್ತದೆ. ಇವುಗಳು ಪ್ರಸ್ತುತವಾಗಿ ಪ್ರೀ ಬುಕಿಂಗ್‌ಗೆ ಮಾತ್ರ ಲಭ್ಯವಿದೆ.