Home Interesting Whatsapp ನಲ್ಲಿರೋ ಅನಗತ್ಯ ಫೈಲ್ ಗಳನ್ನು ಒಂದೇ ಬಾರಿಗೆ ಡಿಲೀಟ್ ಮಾಡುವ ವಿಧಾನ ಇಲ್ಲಿದೆ ನೋಡಿ..

Whatsapp ನಲ್ಲಿರೋ ಅನಗತ್ಯ ಫೈಲ್ ಗಳನ್ನು ಒಂದೇ ಬಾರಿಗೆ ಡಿಲೀಟ್ ಮಾಡುವ ವಿಧಾನ ಇಲ್ಲಿದೆ ನೋಡಿ..

Hindu neighbor gifts plot of land

Hindu neighbour gifts land to Muslim journalist

ವಾಟ್ಸಪ್ ತನ್ನ ಗ್ರಾಹಕರನ್ನು ಹೆಚ್ಚಿಸುವ ಸಲುವಾಗಿ ಹೊಸ ಹೊಸ ಫೀಚರ್ ಗಳನ್ನು ಅಪ್ಡೇಟ್ ಮಾಡುತ್ತಲೇ ಬಂದಿದ್ದು, ಈ ಮೂಲಕ ಬಳಕೆದಾರರನ್ನು ತನ್ನತ್ತ ಸೆಳೆಯುತ್ತಿದೆ. ಇವಾಗ ಅಂತೂ ಯಾವುದೇ ಸೋಶಿಯಲ್ ಮೀಡಿಯಾಕ್ಕೂ ಕಮ್ಮಿ ಇಲ್ಲ ಎಂಬಂತೆ ಬಳಕೆದಾರರ ಭದ್ರತೆಯ ಜೊತೆಗೆ ಉತ್ತಮ ಫೀಚರ್ ಗಳನ್ನು ಜಾರಿಗೊಳಿಸಿದೆ. ಕೇವಲ ಮೆಸೇಜ್ ಗೆ ಮಾತ್ರ ಸೀಮಿತವಾಗಿರದೆ ಹಣ ರವಾನೆಯಿಂದ ಹಿಡಿದು ಪ್ರತಿಯೊಂದು ಕೆಲಸಕ್ಕೂ ಬಳಕೆಯಾಗುತ್ತಿದೆ ವಾಟ್ಸಪ್. ಇದೀಗ ಮತ್ತೆ ಶೀಘ್ರದಲ್ಲೇ ಹೊಸ ಅಪ್ಡೇಟ್ ಕಾಣಿಸಿಕೊಳ್ಳಲಿದೆ.

ಹೌದು. ವಾಟ್ಸಪ್ ನಲ್ಲಿ ಫೋಟೋಗಳು, ವೀಡಿಯೊಗಳು, ಡಾಕ್ಯುಮೆಂಟ್ಗಳು ಮತ್ತು GIF ಗಳು ಮತ್ತು ಸ್ಟಿಕ್ಕರ್ಗಳನ್ನು ಹಂಚಿಕೊಳ್ಳಲು ಅವಕಾಶವಿರುವುದರಿಂದ, ಎಲ್ಲಾ ಹಂಚಿಕೆಯ ಮಾಧ್ಯಮ ಮತ್ತು ಹೊಸ ನವೀಕರಣಗಳ ಡೇಟಾ ಸ್ಟೋರೇಜ್ ಅಲ್ಲಿ ರಾಶಿಯಾಗುತ್ತದೆ. ಹೀಗಾಗಿ, ಮೆಮೊರಿ ಫುಲ್ ಆಗಿರುತ್ತದೆ. ಇಂತಹ ಅನಗತ್ಯ ವಿಡಿಯೋ, ಫೋಟೋಗಳಿಂದ ಸ್ಟೋರೇಜ್ ಉಳಿಸಲು ಡಿಲೀಟ್ ಮಾಡವ ಕೆಲವು ವಿಧಾನಗಳು ಪರಿಚಯಿಸಿದೆ.

ಯಾವುದೇ ಡೇಟಾವನ್ನು ಡಿಲೀಟ್ ಮಾಡುವ ಮೊದಲು ನಿಮ್ಮ ಸ್ಮಾರ್ಟ್ಫೋನ್ಗಳಲ್ಲಿ WhatsApp ಎಷ್ಟು ಜಾಗವನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ಪರಿಶೀಲಿಸಿ. ಆಂತರಿಕ ಸ್ಟೋರೇಜ್ ಅನ್ನು ಮುಕ್ತಗೊಳಿಸಲು ನೀವು ನಂತರ ಐಟಂಗಳನ್ನು ಡಿಲೀಟ್ ಮಾಡಬಹುದು. WhatsApp ಡೇಟಾವನ್ನು ವೀಕ್ಷಿಸಲು WhatsApp ತೆರೆಯಿರಿ> ಸೆಟ್ಟಿಂಗ್ಗಳು> ಸ್ಟೋರೇಜ್ ಮತ್ತು ಡೇಟಾ> ಸ್ಟೋರೇಜ್ ಅನ್ನು ನಿರ್ವಹಿಸಿ. ಲಭ್ಯವಿರುವ ಫೋನ್ ಮೆಮೊರಿ ಮತ್ತು WhatsApp ಮಾಧ್ಯಮವು ಎಷ್ಟು ಜಾಗವನ್ನು ತೆಗೆದುಕೊಳ್ಳುತ್ತಿದೆ ಎಂಬುದನ್ನು ನೀವು ನೋಡಬಹುದು.

ಸ್ಟೋರೇಜ್ ಅನ್ನು ವೀಕ್ಷಿಸಿದ ನಂತರ ನೀವು ಮಾಧ್ಯಮವನ್ನು ಪರಿಶೀಲಿಸಬಹುದು ಮತ್ತು ದೊಡ್ಡದಾದ ಅಥವಾ ಹಲವು ಬಾರಿ ಫಾರ್ವರ್ಡ್ ಮಾಡಲಾದ ಐಟಂಗಳನ್ನು ಡಿಲೀಟ್ ಮಾಡುವ ಮೂಲಕ ಸ್ಟೋರೇಜ್ ಅನ್ನು ಮುಕ್ತಗೊಳಿಸಬಹುದು. ಚಾಟ್ನ ಪ್ರಕಾರ ನೀವು ಮಾಧ್ಯಮವನ್ನು ಸಹ ಡಿಲೀಟ್ ಮಾಡಬವುದು. ಮಾಧ್ಯಮವನ್ನು ಪರಿಶೀಲಿಸಲು ಮತ್ತು ಡಿಲೀಟ್ ಮಾಡಲು ಮಾಹಿತಿ ಇಲ್ಲಿದೆ ನೋಡಿ..

*ಸ್ಟೋರೇಜ್ ಅನ್ನು ನಿರ್ವಹಿಸು ಅಡಿಯಲ್ಲಿ ‘5MB ಗಿಂತ ದೊಡ್ಡದು’ ಮೇಲೆ ಟ್ಯಾಪ್ ಮಾಡಿ ಅಥವಾ ನಿರ್ದಿಷ್ಟ ಚಾಟ್ ಅನ್ನು ಆಯ್ಕೆಮಾಡಿ.
*ಹೊಸದು ಹಳೆಯದು ಅಥವಾ ದೊಡ್ಡದು ಎಂದು ವಿಂಗಡಿಸುವ ಐಕಾನ್ ಅನ್ನು ಟ್ಯಾಪ್ ಮಾಡುವ ಮೂಲಕ ನೀವು ಮಾಧ್ಯಮವನ್ನು ವಿಂಗಡಿಸಬಹುದು.
*ವೈಯಕ್ತಿಕ ಅಥವಾ ಬಹು ಮಾಧ್ಯಮವನ್ನು ಆಯ್ಕೆಮಾಡಿ ಮತ್ತು ಟ್ಯಾಪ್ ಮಾಡಿ ಮತ್ತು ನಂತರ ಅವುಗಳನ್ನು ಅಳಿಸಿ.
*ನೀವು WhatsApp ನಿಂದ ಮಾಧ್ಯಮವನ್ನು ಅಳಿಸಿದ ನಂತರವೂ ಅದು ನಿಮ್ಮ ಫೋನ್ನ ಸ್ಟೋರೇಜ್ ಅನ್ನು ಲಭ್ಯವಿರಬಹುದು ಎಂಬುದನ್ನು ಗಮನಿಸಬವುದು. ಆದ್ದರಿಂದ ಅದನ್ನು ಶಾಶ್ವತವಾಗಿ ಡಿಲೀಟ್ ಮಾಡಲು ಗ್ಯಾಲರಿಯಿಂದಲೂ ಡಿಲೀಟ್ ಮಾಡಿ.