ಗೂಗಲ್ ನಲ್ಲಿ ಇದನ್ನೆಲ್ಲಾ ಸರ್ಚ್ ಮಾಡಬೇಡಿ | ಮಾಡಿದರೆ ಜೈಲೂಟ ಗ್ಯಾರಂಟಿ

ಆಧುನಿಕ ಜೀವನ ಶೈಲಿಯ ಜೊತೆ ಜೊತೆಗೆ ತಂತ್ರಜ್ಞಾನ ಸಹ ಅಪಾರ ಬೆಳವಣಿಗೆ ಕಂಡಿದೆ. ಅದರಲ್ಲೂ ಗೂಗಲ್ ಸಿಸ್ಟಮ್ ಗೊತ್ತಿಲ್ಲದವರು ಯಾರೂ ಇಲ್ಲ ಅನಿಸುತ್ತೆ. ಏನೇ ಆಗಲಿ ಕೂತಲ್ಲಿಯೇ ನಮಗೆ ಪ್ರತಿಯೊಂದು ಸಲಹೆ ನೀಡುವುದು ಅಂದರೆ ಅದು ಗೂಗಲ್ ಆಗಿದೆ. ಹೌದು ಗೂಗಲ್ ನಮಗೆ ಯಾವ ರೀತಿಯ ಸಹಾಯ ಬೇಕಾದರು ಮಾಡುತ್ತದೆ. ಆದರೆ ನೀವು ಕಾನೂನು ಬಾಹಿರವಾದ ಕೆಲವು ಸಲಹೆಗಳನ್ನು, ಅಥವಾ ಉತ್ತರಗಳನ್ನು ಗೂಗಲ್ ಮೂಲಕ ಕೇಳಿದರೆ ನೀವು ಜೈಲಿಗೆ ಹೋಗಬೇಕಾದ ಸಂದರ್ಭ ಬರಬಹುದು.

ಹೌದು ನಾವು ಗೂಗಲ್ನಲ್ಲಿ ಕಾನೂನು ಬಾಹಿರವಾದ ಪ್ರಶ್ನೆ ಕೇಳುವಂತಿಲ್ಲ. ಅವುಗಳಿಗೆ ಕುರಿತಂತೆ ಗೂಗಲ್ ನಲ್ಲಿ ಕೇಳಬಾರದ ಕೆಲವು ಪ್ರಶ್ನೆಗಳನ್ನು ಇಲ್ಲಿ ತಿಳಿಸಲಾಗಿದೆ.

  • ಅತ್ಯಾಚಾರ ಸಂತ್ರಸ್ಥರ ಹೆಸರು: ನೀವು ಅತ್ಯಾಚಾರ ಸಂತ್ರಸ್ಥರ ಹೆಸರು ವಿವರಗಳನ್ನು ಆನ್ ಲೈನ್ ನಲ್ಲಿ ಸರ್ಚ್ ಅಥವಾ ಪೋಸ್ಟ್ ಮಾಡಿದರೆ, ಇದು ತುಂಬಾ ಸೂಕ್ಷ್ಮ ಹಾಗೆ ಮಾಡಿದ್ದಕ್ಕಾಗಿ ನಿಮ್ಮನ್ನು ಜೈಲಿಗೆ ಹಾಕಬಹುದು.
  • ಚೈಲ್ಡ್ ಪೋರ್ನ್: ಚೈಲ್ಡ್ ಪೋರ್ನ್ ಬಹಳ ಸೂಕ್ಷ್ಮ ವಿಷಯವಾಗಿದೆ ಮತ್ತು ಅದನ್ನು ಗೂಗಲ್ ನಲ್ಲಿ ಹುಡುಕುವುದು ತುಂಬಾ ಅಪಾಯಕಾರಿಯಾಗಿದೆ. ನೀವು ಈ ರೀತಿ ಪ್ರಶ್ನೆ ಕೇಳಿದರೆ ಪೋಸ್ಕೋ ಕಾಯ್ದೆ 2012 ರ ಸೆಕ್ಷನ್ 14 ರ ಅಡಿಯಲ್ಲಿ ಜೈಲಿಗೆ ಹೋಗಬೇಕಾಗಬಹುದು. ಇದಕ್ಕಾಗಿ 5 ರಿಂದ 7 ವರ್ಷಗಳವರೆಗೆ ಶಿಕ್ಷೆ ವಿಧಿಸಲು ಅವಕಾಶವಿದೆ.
  • ಬಾಂಬ್ ತಯಾರಿಸುವುದು ಹೇಗೆ: . ತಪ್ಪಾಗಿ ಅಥವಾ ತಮಾಷೆಯಾಗಿ ಗೂಗಲ್ ನಲ್ಲಿ ಬಾಂಬ್ ತಯಾರಿಸುವುದು ಹೇಗೆ ಎಂದು ನೋಡಲು ನೀವು ಪ್ರಯತ್ನಿಸಿದರೆ, ನೀವು ಜೈಲಿಗೆ ಹೋಗಬೇಕಾಗಬಹುದು.
  • ಕೊಲೆ ಮಾಡುವುದು ಹೇಗೆ : ನೀವು ಒಬ್ಬರನ್ನು ಯಾವ ರೀತಿ ಕೊಳ್ಳಬೇಕು ಎಂಬುದನ್ನು ಹುಡುಕುವಂತಿಲ್ಲ. ಈ ರೀತಿಯ ಅಪರಾಧ ಸಂಬಂಧಿಸಿದಂತೆ ಪ್ರಶ್ನೆ ಕೇಳಿದರೆ ಜೈಲು ಸೇರಬೇಕಾದ ಪರಿಸ್ಥಿತಿ ಬರಬಹುದು.

ಹೀಗೆ ನೀವು ಕೆಲವೊಂದು ಅನಗತ್ಯ ಪ್ರಶ್ನೆಗಳನ್ನು ಕೇಳಿ ಕಾನೂನಿನ ವಿರುದ್ಧ ಹೋದರೆ ನೀವು ಮಾಡಿದ ತಪ್ಪಿಗೆ ಸರಿಯಾದ ಶಿಕ್ಷೆ ವಿಧಿಸಲಾಗುತ್ತದೆ. ಹೌದು ವಿಷ ತಯಾರಿಸುವುದು ಹೇಗೆ, ಕಳ್ಳತನ ಮಾಡುವುದು ಹೇಗೆ ಇತರ ಹಲವಾರು ಪ್ರಶ್ನೆ ಕೇಳುವಾಗ ಜಾಗೃತಿ ವಹಿಸುವುದು ಸೂಕ್ತ.

Leave A Reply

Your email address will not be published.