National Pension Scheme : ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್!
ನಮ್ಮ ಮುಂದಿನ ಭವಿಷ್ಯವನ್ನು ನಿರ್ವಹಿಸಲು ಹಣ ಹೂಡಿಕೆಯೂ ಸಹಕಾರಿಯಾಗಿದೆ. ಭಾರತದಲ್ಲಿ ಅನೇಕ ಪಿಂಚಣಿ ಯೋಜನೆಗಳು ಇದ್ದೂ, ಇವು ನಮ್ಮ ಹಣ ಉಳಿತಾಯ ಮಾಡಲು ಪ್ರೋತ್ಸಾಹಿಸುತ್ತದೆ. ನಿವೃತ್ತಿ ನಂತರವೂ ನಿಯಮಿತ ಆದಾಯ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ರೂಪಿಸಿದ ಸ್ವಯಂಪ್ರೇರಿತ ಕೊಡುಗೆಯ ಯೋಜನೆಯಾಗಿರುವ, ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಇದೀಗ ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ ನೀಡಿದೆ. ಅದೇನಪ್ಪಾ ಅಂದ್ರೆ 65 ವರ್ಷ ಮೇಲ್ಪಟ್ಟವರೂ ರಾಷ್ಟ್ರೀಯ ಪಿಂಚಣಿ ಯೋಜನೆ ಯಲ್ಲಿ (NPS) ಹೂಡಿಕೆ ಮಾಡಲು ಅನುಮತಿಸಿದೆ.
ತೆರಿಗೆ ಉಳಿತಾಯ ಮಾಡುವ ನಿಟ್ಟಿನಲ್ಲಿ ದೀರ್ಘಾವಧಿಯ ಹೂಡಿಕೆಗೆ ಇದೊಂದು ಉತ್ತಮ ಆಯ್ಕೆಯಾಗಿದ್ದೂ, 70 ವರ್ಷ ವಯಸ್ಸಿನ ವರೆಗೆ ಹೂಡಿಕೆ ಮಾಡಬಹುದಾಗಿದೆ. ನಂತರ ಅದನ್ನು 75 ವರ್ಷ ವಯಸ್ಸಿನ ವರೆಗೆ ವಿಸ್ತರಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಸಾಗರೋತ್ತರ ಭಾರತೀಯ ಹಿರಿಯ ನಾಗರಿಕರಿಗೂ ಯೋಜನೆಯಲ್ಲಿ ಹೂಡಿಕೆ ಮಾಡಲು ಅವಕಾಶವಿದೆ. ಇದೀಗ ವಯಸ್ಸಿನ ಅವಧಿಯನ್ನು ವಿಸ್ತರಿಸಿದ್ದೂ, 18 ವರ್ಷ ವಯಸ್ಸಿನಿಂದ 70 ವರ್ಷದ ವರೆಗಿನ ಯಾರು ಬೇಕಾದರೂ ಈಗ ಎನ್ಪಿಎಸ್ ಖಾತೆ ತೆರೆಯಬಹುದಾಗಿದೆ.
ಅಲ್ಲದೇ ವಯಸ್ಸಿನ ಅರ್ಹತೆಯ ಕಾರಣಕ್ಕಾಗಿ ಈಗಾಗಲೇ ಖಾತೆಯನ್ನು ಕ್ಲೋಸ್ ಮಾಡಿದವರು ಕೂಡ ಇನ್ನೊಮ್ಮೆ ಖಾತೆ ತೆರಯಲು ಅವಕಾಶವಿದೆ ಎಂದು ಪಿಎಫ್ಆರ್ಡಿಎ ತಿಳಿಸಿದೆ. ಎನ್ಪಿಎಸ್ ಖಾತೆ ತೆರೆದ ಕೂಡಲೇ ‘ಟೈರ್ 1’ ಖಾತೆ ಆರಂಭವಾಗುತ್ತದೆ. ಉಳಿತಾಯದ ಮೊತ್ತವನ್ನು ಮುಂದುವರಿಸಲು ತೆರೆಯುವ ‘ಟೈರ್ 2’ ಖಾತೆಗೆ ಲಾಕ್ ಇನ್ ಅವಧಿ ಇರುವುದಿಲ್ಲ. ನಿವೃತ್ತಿಯ ನಂತರವೂ ಸಹ, ಹಣಕಾಸಿನ ಸಮಸ್ಯೆ ಮತ್ತು ಜೀವಿತಾವಧಿಯನ್ನು ಗಣನೆಗೆ ತೆಗೆದುಕೊಂಡು ಷೇರುಗಳಿಗೆ ಹಣವನ್ನು ನಿಯೋಜಿಸಬಹುದಾಗಿದೆ.
ಹಣದುಬ್ಬರ ನಿಯಂತ್ರಣಕ್ಕಾಗಿ ಈಕ್ವಿಟಿ ಮತ್ತು ಸಾಲದ ಮೇಲಿನ ಹೂಡಿಕೆಗೆ ಎನ್ಪಿಎಸ್ ಅವಕಾಶ ನೀಡುತ್ತದೆ. 65 ವರ್ಷ ವಯಸ್ಸಿನ ನಂತರ ಎನ್ಪಿಎಸ್ಗೆ ಸೇರುವವರು ಪಿಎಫ್ ಅಥವಾ ಸ್ವತ್ತು ಹಂಚಿಕೆಯನ್ನು ಆಯ್ಕೆ ಮಾಡುವ ಅವಕಾಶವಿದೆ. ಆಟೊ ಆಯ್ಕೆಗಳ ಅಡಿಯಲ್ಲಿ ಕ್ರಮವಾಗಿ ಶೇಕಡಾ 15 ರಷ್ಟು ಹಾಗೂ ಆಯಕ್ಟಿವ್(active) ಆಯ್ಕೆಗಳ ಅಡಿಯಲ್ಲಿ ಶೇಕಡಾ 50ರಷ್ಟು ಹೂಡಿಕೆ ಮಾಡಬಹುದಾಗಿದೆ.
ಎನ್ಪಿಎಸ್ನಲ್ಲಿ ಹೂಡಿಕೆ ಮಾಡಲು ಈವರೆಗೆ ಗರಿಷ್ಠ ವಯಸ್ಸು 65 ಆಗಿತ್ತು. ಇದೀಗ 70 ವರ್ಷ ವಯಸ್ಸಿನ ವರೆಗೆ ಮುಂದುವರಿಸಲು ಅವಕಾಶ ನೀಡಿದೆ. ನಿವೃತ್ತಿ ನಂತರದ ಹೂಡಿಕೆ ಮತ್ತು ಪಿಂಚಣಿ ಉದ್ದೇಶಿಸಿರುವ ಹಿರಿಯ ನಾಗರಿಕರಿಗೆ ಈ ಕ್ರಮದಿಂದ ಅನುಕೂಲವಾಗಿದೆ. ಈ ಹೂಡಿಕೆಯಿಂದ ದೊರೆಯುವ ಆದಾಯವು ಷೇರುಪೇಟೆ ವಹಿವಾಟನ್ನೂ ಅವಲಂಬಿಸಿರುತ್ತದೆ. ಇದು ಖಾಸಗಿ ವಲಯದ ಉದ್ಯೋಗಿಗಳಿಗೆ ಪಿಂಚಣಿ ಪಡೆಯಲು ಉತ್ತಮ ಆಯ್ಕೆ ಆಗಿದೆ.