ವೇಶ್ಯೆಯರ ಭೇಟಿ ಮಾಡುವ ಗ್ರಾಹಕರ ವಿರುದ್ಧ ಕೇಸ್: ಹೈಕೋರ್ಟ್ ಮಹತ್ವದ ಅಭಿಪ್ರಾಯ

ತಿರುವನಂತಪುರ: ವೇಶೈಯರನ್ನು ಭೇಟಿ ಮಾಡುವ ಗ್ರಾಹಕರನ್ನು ಅನೈತಿಕ ಸಂಚಾರ ತಡೆ ಕಾಯ್ದೆಯಡಿಯೂ ಆರೋಪಿಯನ್ನಾಗಿಸಬಹುದು ಎಂದು ಕೇರಳ ಹೈಕೋರ್ಟ್ ಹೇಳಿದೆ.

ಕಾಯ್ದೆಯ ಸೆಕ್ಷನ್ 7 ರ ಅಡಿಯಲ್ಲಿ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಬಹುದು ಎಂದು ಕೋರ್ಟ್ ಹೇಳಿದೆ.

ಅನೈತಿಕ ಸಂಚಾರ ಅಥವಾ ಲೈಂಗಿಕ ಶೋಷಣೆಯನ್ನು ಗ್ರಾಹಕರಿಲ್ಲದೆ ನಡೆಸಲಾಗುವುದಿಲ್ಲ. ವೇಶ್ಯಾವಾಟಿಕೆ ಪದವನ್ನು ವಾಣಿಜ್ಯ ಉದ್ದೇಶಗಳಿಗಾಗಿ ವ್ಯಕ್ತಿಗಳ ಲೈಂಗಿಕ ಶೋಷಣೆ ಅಥವಾ ನಿಂದನೆ ಎಂದು ವ್ಯಾಖ್ಯಾನಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಕೇರಳ ಹೈಕೋರ್ಟ್‌ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರು ಸೆಕ್ಷನ್ 3 (ವೇಶ್ಯಾಗೃಹ ಇರಿಸಲು ಅಥವಾ ವೇಶ್ಯಾವಾಟಿಕೆಗೆ ಅವಕಾಶ ನೀಡಿದ ಶಿಕ್ಷೆ), ಸೆಕ್ಷನ್ 4 (ವೇಶ್ಯಾವಾಟಿಕೆಯಿಂದ ಗಳಿಸಿದ ಆದಾಯದಿಂದ ಜೀವನ ಸಾಗಿಸಲು ಶಿಕ್ಷೆ) ಅಡಿಯಲ್ಲಿ ಆರೋಪ ಹೊರಿಸಲಾದ ಪ್ರಕರಣದ ವಿಚಾರಣೆಯ ವೇಳೆ ಈ ಹೇಳಿಕೆ ನೀಡಿದ್ದಾರೆ.

Leave A Reply

Your email address will not be published.